International Yoga Day 2022: ಗೋಲಗುಮ್ಮಟ ಆವರಣದಲ್ಲಿ ಹಿಜಾಬ್, ಬುರ್ಖಾ ಧರಿಸಿ ಯೋಗ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು
ಗೋಲಗುಮ್ಮಟ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ಭಾಗಿಯಾಗಿದ್ದಾರೆ. ಹಿಜಾಬ್(Hijab), ಬುರ್ಖಾ(Burqa) ಧರಿಸಿ ಯೋಗ ಮಾಡಿ ಮುಸ್ಲಿಂ ವಿದ್ಯಾರ್ಥಿನಿಯರು ಗಮನ ಸೆಳೆದಿದ್ದಾರೆ. ಯೋಗ ಯಾರಿಗೂ ಸೀಮಿತವಲ್ಲ ಎಂಬುವುದನ್ನು ಸಾರಿದ್ದಾರೆ.
ವಿಜಯಪುರ: 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ(International Yoga Day 2022) ಹಿನ್ನೆಲೆ ಅನೇಕ ಕಡೆಗಳಲ್ಲಿ ಯೋಗಭ್ಯಾಸ ಕಾರ್ಯಕ್ರಮ ಕೈಗೊಳ್ಳಲಾಗಿದೆ. ವಿಶೇಷ ಅಂದ್ರೆ ಈ ಬಾರಿ ವಿಜಯಪುರ ನಗರದ ಗೋಲಗುಮ್ಮಟ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ಭಾಗಿಯಾಗಿದ್ದಾರೆ. ಹಿಜಾಬ್(Hijab), ಬುರ್ಖಾ(Burqa) ಧರಿಸಿ ಯೋಗ ಮಾಡಿ ಮುಸ್ಲಿಂ ವಿದ್ಯಾರ್ಥಿನಿಯರು ಗಮನ ಸೆಳೆದಿದ್ದಾರೆ. ಯೋಗ ಯಾರಿಗೂ ಸೀಮಿತವಲ್ಲ ಎಂಬುವುದನ್ನು ಸಾರಿದ್ದಾರೆ.
ಇನ್ನು ಮತ್ತೊಂದು ಕಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಕೊಪ್ಪಳದ ಗವಿ ಮಠ ಆವರಣದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಮುಸ್ಲಿಂ ಯುವಕರು ಕೂಡ ಯೋಗ ಮಾಡಿದ್ದಾರೆ. ಜಿಲ್ಲಾಡಳಿತ ಆಯುಷ್ ಇಲಾಖೆ ಸಹಯೋಗದಲ್ಲಿ ಯೋಗ ದಿನಾಚರಣೆ ಮಾಡಿದೆ. ಯೋಗ ದಿನಾಚರಣೆಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಚಾಲನೆ ನೀಡಿದ್ರು. ಸಂಗಣ್ಣ ಕರಡಿ ಸೇರಿದಂತೆ ಸಾವಿರಾರು ಜನ ಯೋಗದಲ್ಲಿ ಭಾಗಿಯಾಗಿದ್ರು.ಯೋಗ ದಿನಾಚರಣೆಯಲ್ಲಿ ಭಾಗಿಯಾದ ಸಾವಿರಾರು ಜನ ಯೋಗ ಮಾಡಿದ್ರು. ಸಂಸದ ಸಂಗಣ್ಣ ಕರಡಿ ಕೂಡಾ ಯೋಗ ಮಾಡಿದ್ರು. ಈ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು, ನಗರದ ಹಿರಿಯರು, ವಿವಿಧ ಪಕ್ಷದ ಮುಖಂಡರು, ಸಣ್ಣ ಸಣ್ಣ ಮಕ್ಕಳು ಭಾಗಿಯಾಗಿದ್ರು. ಇದಕ್ಕಿಂತ ವಿಶೇಷ ಅಂದ್ರೆ ಯೋಗ ದಿನಾಚರಣೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಕೂಡ ಭಾಗಿಯಾಗಿದ್ರು.
ಗವಿ ಮಠದ BAMS ವಿದ್ಯಾರ್ಥಿನಿಯರು, ಹಾಗೂ ಕೆಲ ವಿದ್ಯಾರ್ಥಿಗಳು ಯೋಗದಲ್ಲಿ ಭಾಗಿಯಾದ್ರು. ರಾಜ್ಯದಲ್ಲಿ ನಡೆದ ಧರ್ಮ ದಂಗಲ್ ನಡುವೆ ಮುಸ್ಲಿಂ ವಿದ್ಯಾರ್ಥಿಗಳು ಯೋಗ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾದ್ರು.