AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Yoga Day 2022: ಯೋಗವಿದ್ದರೆ ಮಾತ್ರ ಯೋಗ ಮಾಡಲು ಸಾಧ್ಯ

ಆರೋಗ್ಯ ದೃಷ್ಟಿಯಿಂದ ಯೋಗ ಒಂದು ಉತ್ತಮ ಸಾಧನವಾಗಿದೆ. ಯೋಗ ಎಂಬುದು ಎಷ್ಟು ಪರಿಣಾಮವನ್ನು ಉಂಟು ಮಾಡಿದೆ ಎಂಬುದಕ್ಕೆ ಇಲ್ಲೊಂದು ಸಾಕ್ಷಿದೆ. ಹೌದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ದಂಟಕಲ್ ಗ್ರಾಮದ ದತ್ತಾತ್ರೇಯ (45) & ವರಮಹಾಲಕ್ಷ್ಮಿ (39) ದಂಪತಿಗಳಿಬ್ಬರೂ ಯೊಗಭ್ಯಾಸವನ್ನು ಮಾಡುತ್ತಿದ್ದಾರೆ. 

International Yoga Day 2022: ಯೋಗವಿದ್ದರೆ ಮಾತ್ರ ಯೋಗ ಮಾಡಲು ಸಾಧ್ಯ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 21, 2022 | 11:19 AM

Share

ಇಂದು ವಿಶ್ವ ಯೋಗ ದಿನ, ಈ ದಿನದಂದು, ಹಲವು ಕಡೆ ಯೋಗ ದಿನಾಚರಣೆಯು ನಡೆಯುತ್ತದೆ. ಯೋಗದ ಮಹತ್ವ ಮತ್ತು ಆಸನಗಳನ್ನು ಪ್ರಾಯೋಗಿಕವಾಗಿ ಮಾಡುವ ಮೂಲಕ ಯೋಗ ದಿನವನ್ನು ಆಚರಣೆ ಮಾಡುತ್ತಾರೆ. ಭಾರತ ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ ರಾಷ್ಟ್ರ, ಯೋಗದ ಆಸನಗಳಿಂದ ನಮ್ಮ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಬಹುದು ಎಂಬು ಆರೋಗ್ಯ ತಂತ್ರವನ್ನು ಹೇಳಿಕೊಟ್ಟ ದೇಶ. ಇಲ್ಲಿ ಯೋಗಕ್ಕೆ ಅದ್ಭುತ ಗೌರವದ ಜೊತೆಗೆ ಅದರ ಆಚರಣೆಯು ಶಕ್ತಿಯುತವಾಗಿರುತ್ತದೆ. ಯೋಗವನ್ನು ಜೂನ್ 21ಕ್ಕೆ ಮಾತ್ರವಲ್ಲದೆ ಪ್ರತಿದಿನವು ಅಭ್ಯಾಸ ಮಾಡುತ್ತಾರೆ ಭಾರತೀಯರು. ಇದರ ಜೊತೆಗೆ ಯೋಗ ಶಿಬಿರಗಳು, ಯೋಗ ಶಿಕ್ಷಣ, ಯೋಗ ಸ್ಪರ್ಧೆಗಳು ಕೂಡ ನಡೆಯುತ್ತದೆ. ಇಂದು ಯೋಗ ವಿಶ್ವ ಮಾನ್ಯತೆಯನ್ನು ಪಡೆದಿದೆ. ಈ ಬಗ್ಗೆ ಭಾರತದಲ್ಲಿ ಒಂದು ಅದ್ಭುತ ಲೋಕವನ್ನು ಸೃಷ್ಟಿ ಮಾಡಿದೆ. ಯೋಗ ಎನ್ನುವದಕ್ಕೆ ವಯಸ್ಸಿನ ಅಂತರವಿಲ್ಲ ಯಾರು ಬೇಕಾದರೂ ಮಾಡಬಹುದು, ಆರೋಗ್ಯ ದೃಷ್ಟಿಯಿಂದ ಯೋಗ ಒಂದು ಉತ್ತಮ ಸಾಧನವಾಗಿದೆ. ಯೋಗ ಎಂಬುದು ಎಷ್ಟು ಪರಿಣಾಮವನ್ನು ಉಂಟು ಮಾಡಿದೆ ಎಂಬುದಕ್ಕೆ ಇಲ್ಲೊಂದು ಸಾಕ್ಷಿದೆ. ಹೌದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ದಂಟಕಲ್ ಗ್ರಾಮದ ದತ್ತಾತ್ರೇಯ (45) & ವರಮಹಾಲಕ್ಷ್ಮಿ (39) ದಂಪತಿಗಳಿಬ್ಬರೂ ಯೊಗಭ್ಯಾಸವನ್ನು ಮಾಡುತ್ತಿದ್ದಾರೆ.

ಇವರು ಕೆಲವು ಯೋಗ ಶಿಬಿರ ಹಾಗೂ ಉಚಿತ ಯೋಗ ತರಬೇತಿಗಳನ್ನೂ ನಡೆಸಿದ್ದಾರೆ. ಯೋಗವಿದ್ದರೆ ಮಾತ್ರ ಯೋಗ ಮಾಡಲು ಸಾಧ್ಯ ಎನ್ನುವ ಇವರು ಯಾವುದೇ ಕಾಂಪಿಟೇಷನ್’ಗೆ ಯೋಗವಲ್ಲ ಇದು ಆರೋಗ್ಯಕ್ಕೆ ಅತೀ ಅವಶ್ಯಕ, ಮನಸ್ಸಿನ ಹಾಗೂ ದೇಹದ ಸುಸ್ಥಿತಿಗೆ ಯೋಗ ಬೇಕೇ ಬೇಕು ಎಂಬುದು ಇವರ ಮೂಲ ಮಂತ್ರವಾಗಿದೆ. ಆರೋಗ್ಯವೇ ಭಾಗ್ಯ ಎನ್ನುತ್ತಾರೆ. ಸತತ ಯೊಗಾಭ್ಯಾಸದ ನಂತರ ನಮ್ಮ ಆರೋಗ್ಯ ಸುಧಾರಿಸಿದೆ ಎಂದು ಹೇಳುತ್ತಾರೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಜಗತ್ತಿಗೆ ಯೋಗ ಸೂತ್ರವನ್ನು ನೀಡಿದ ಮಹಾತ್ಮರು ಇವರೇ, ಮಹರ್ಷಿ ಪತಂಜಲಿ

ಇದನ್ನೂ ಓದಿ
Image
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
Image
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Image
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
Image
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ದಂಟಕಲ್ ಗ್ರಾಮದ ಹರ್ಷ (21) ಇವರು ವಿಶ್ವೆಶ್ವರ ಭಟ್ ಹಾಗೂ ಮಂಗಲಾ ಭಟ್ ಅವರ ಪುತ್ರ. ತಮ್ಮ 10 ನೇ ವಯಸ್ಸಿನಲ್ಲಿ ಯೋಗಾಭ್ಯಾಸವನ್ನು ಪ್ರಾರಂಭ ಮಾಡಿದ್ದು. ಕನ್ನಡ ಶಾಲೆಯ ಶಿಕ್ಷಕರೇ (ವಿ.ಜಿ.ನಾಯ್ಕ್) ಇವರ ಯೋಗ ಗುರು. ತಮ್ಮ ಸತತ ಪರಿಶ್ರಮದಿಂದ ತಾಲ್ಲೂಕು , ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ಯೋಗ ಸಾಧನೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಶಾಲಾ, ಕಾಲೇಜ್’ಗಳಲ್ಲಿ ತಮ್ಮ ಯೋಗ ಸಾಧನೆಯನ್ನು ಮಾಡಿದವರು. ಸತತ ಯೊಗಾಭ್ಯಾಸದಿಂದ ಆರೋಗ್ಯವಿದೆ ಎಂಬುದು ಇವರ ಅಭಿಪ್ರಾಯವಾಗಿದೆ.

ದಿವ್ಯಶ್ರೀ ಹೆಗಡೆ

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Tue, 21 June 22

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು