International Yoga Day 2022: ನಿಮ್ಮ ಹೃದಯ ಜೋಪಾನಿಸಿಕೊಳ್ಳಲು ಈಗಿನಿಂದಲೇ ಯೋಗ ಮಾಡಿ

Yoga : ಮೆಟಬಾಲಿಕ್ ಸಿಂಡ್ರೋಮ್ ಹೊಂದಿರುವವರು ಮೂರು ತಿಂಗಳುಗಳ ಕಾಲ ಯೋಗದಲ್ಲಿ ತೊಡಗಿಕೊಂಡಾಗ ಸುಧಾರಣೆ ಕಂಡಿದೆ ಎನ್ನುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.

International Yoga Day 2022: ನಿಮ್ಮ ಹೃದಯ ಜೋಪಾನಿಸಿಕೊಳ್ಳಲು ಈಗಿನಿಂದಲೇ ಯೋಗ ಮಾಡಿ
ಸೌಜನ್ಯ : ಅಂತರ್ಜಾಲ
Follow us
| Updated By: ಶ್ರೀದೇವಿ ಕಳಸದ

Updated on:Jun 21, 2022 | 1:51 PM

International Yoga Day 2022: ಹೃದಯದ ಆರೋಗ್ಯವೃದ್ಧಿಗೆ ಯೋಗ ಪ್ರಯೋಜನಕಾರಿ ಎನ್ನುವುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಯೋಗವು ದೈಹಿಕ-ಮಾನಸಿಕ ಸಮತೋಲನಕ್ಕೆ ಅತ್ಯಂತ ಸಹಕಾರಿ ಎಂದು ಹೃದ್ರೋಗ ತಜ್ಞರು ಹೇಳುತ್ತಲೇ ಇದ್ದಾರೆ. ದೈನಂದಿನ ಜೀವನಶೈಲಿಯಿಂದ ಉಂಟಾಗುವ ಒತ್ತಡವು ದೇಹದಲ್ಲಿನ ಕಾರ್ಟಿಸೋಲ್ ಮತ್ತು ಆ್ಯಡ್ರಿನಾಲಿನ್‌ನಂತಹ ಹಾರ್ಮೋನ್‌ಗಳನ್ನು ಹೆಚ್ಚಿಸುತ್ತದೆ. ಆಗ ಹೃದಯ ಬಡಿತ ಮತ್ತು ರಕ್ತದೊತ್ತಡ ನಿಯಂತ್ರಣ ಕಳೆದುಕೊಳ್ಳುತ್ತದೆ. ಹೀಗಾದಾಗ ವ್ಯಕ್ತಿಯ ಆರೋಗ್ಯ ಅಪಾಯದ ಮಟ್ಟ ತಲುಪಲಾರಂಭಿಸುತ್ತದೆ. ಅಧಿಕ ರಕ್ತದೊತ್ತಡದಿಂದ ರಕ್ತಕೊರತೆ, ಕೊರೊನರಿ ಆರ್ಟರಿಯಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನಿಯಮಿತವಾಗಿ ಧ್ಯಾನ, ಪ್ರಾಣಾಯಾಮದಂಥ ಚಟುವಟಿಕೆಗಳಿಗೆ ತೆರೆದುಕೊಳ್ಳುವುದು ಸೂಕ್ತ. ದೀರ್ಘ ಉಸಿರಾಟದ ವ್ಯಾಯಾಮಗಳನ್ನು ರೂಢಿಸಿಕೊಂಡಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಭವಿಷ್ಯದಲ್ಲಿ ಹೃದಯರಕ್ತನಾಳದ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಕಡಿಮೆ.

ನಿಯಮಿತ ಯೋಗವು ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ ಅಂಶ, ತೂಕ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಮೆಟಬಾಲಿಕ್ ಸಿಂಡ್ರೋಮ್ ಹೊಂದಿರುವವರು ಮೂರು ತಿಂಗಳುಗಳ ಕಾಲ ಯೋಗದಲ್ಲಿ ತೊಡಗಿಕೊಂಡಾಗ ಸುಧಾರಣೆ ಕಂಡಿದೆ ಎನ್ನುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಏಕೆಂದರೆ ಯೋಗವು ಕ್ಯಾಲೊರಿಗಳನ್ನು ಕಡಿಮೆಗೊಳಿಸುತ್ತದೆ. ಮೂಳೆಗಳನ್ನು ಸದೃಢಗೊಳಿಸುತ್ತದೆ. ಒಟ್ಟಾರೆಯಾಗಿ ಸ್ನಾಯುವಿನ ಶಕ್ತಿಯನ್ನು ಇದು ಸುಧಾರಿಸುತ್ತದೆ. ಓಟ ಮತ್ತು ಈಜುವಿಕೆ, ಏರೊಬಿಕ್ಸ್ ಗಿಂತ ಯೋಗ ದೈಹಿಕ ಮತ್ತು ಮಾನಸಿಕ ತ್ರಾಣವನ್ನು ಹೆಚ್ಚಿಸುತ್ತದೆ.

ಯೋಗ ಮತ್ತು ಧೂಮಪಾನ

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಧೂಮಪಾನಿಗಳು ಕೊರೊನರಿ ಆರ್ಟರಿ ಕಾಯಿಲೆ ಮತ್ತು ಹೃದಯಾಘಾತದಿಂದ ಬಳಲುವ ಅಪಾಯ ಹೆಚ್ಚು. ಆದರೆ, ನಿಯಮಿತವಾದ ಯೋಗಾಭ್ಯಾಸದಿಂದ ಧೂಮಪಾನವನ್ನು ತ್ಯಜಿಸಬಹುದಾಗಿದೆ. ಏಕೆಂದರೆ ಆಂತರಿಕವಾಗಿ ಒತ್ತಡ ಉಂಟಾದಾಗ ಇಂತ ಚಟಗಳಿಗೆ ಮೊರೆ ಹೋಗುವುದು ಸಹಜ. ದೇಹ ಮನಸ್ಸು ಒತ್ತಡರಹಿತವಾಗಿದ್ದಾಗ ಇಂಥದರ ಕಡೆ ಗಮನ ಹೋಗದು. ಯೋಗಾಭ್ಯಾಸ ಮಾಡಿದಾಗ ಒತ್ತಡ ಕಡಿಮೆಯಾಗುತ್ತದೆ. ಆಗ ಕ್ರಮೇಣ ವ್ಯಸನಿಗಳು ಚಟದಿಂದ ದೂರವಾಗುತ್ತಾರೆ.

ಇದನ್ನೂ ಓದಿ : International Yoga Day 2022: ಯೋಗವಿದ್ದರೆ ಮಾತ್ರ ಯೋಗ ಮಾಡಲು ಸಾಧ್ಯ

ಇನ್ನು ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವವರು ಯೋಗದ ಮೂಲಕ ಮನಸ್ಸನ್ನು ಹತೋಟಿಯಲ್ಲಿಡಬಹುದು. ಮನಸ್ಸು ಹತೋಟಿಯಲ್ಲಿದ್ದಾಗ ದೇಹವೂ ಸುಸ್ಥಿರವಾಗಿರುತ್ತದೆ. ಆದ್ದರಿಂದ ದಿನಕ್ಕೆ 30ರಿಂದ 45 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುವುದನ್ನು ಎಲ್ಲರೂ ರೂಢಿಸಿಕೊಳ್ಳುವುದು ಒಳ್ಳೆಯದು. ಚಿಕ್ಕಮಕ್ಕಳಿದ್ದಾಗಿನಿಂದಲೇ ಇದಕ್ಕೆ ತೊಡಗಿಕೊಂಡಲ್ಲಿ ಬದಲಾಗುವ ಜೀವನಶೈಲಿ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳಿಂದ ಆರೋಗ್ಯ ಮನಸ್ಸು ಹಾಳಾಗದಂತೆ ಖಂಡಿತ ಕಾಪಾಡಿಕೊಳ್ಳಬಹುದು.

Published On - 1:50 pm, Tue, 21 June 22

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ