ಕೋಲಾರ ಶತಶೃಂಗ ಪರ್ವತದ ಮೇಲೆ 15,000 ಯೋಗ ಪಟುಗಳಿಂದ ಯೋಗಾಭ್ಯಾಸ
ಪಾಂಡವರು ವನವಾಸಕ್ಕೆ ಬಂದ ಸಂದರ್ಭದಲ್ಲಿ ಈ ಬೆಟ್ಟದ ಮೇಲೆ ವಾಸವಿದ್ದರು ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಗುತ್ತದೆ. ಬೆಟ್ಟದ ಮೇಲೆ ಗುಹೆಯೊಂದರಲ್ಲಿ ಪಾಂಡವರು ವಾಸವಿದ್ದ ಸ್ಥಳ ಪಾಂಡವರ ಪಡಸಾಲೆಯನ್ನು ಕಾಣಬಹುದು.
ಕೋಲಾರ: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಹಿನ್ನೆಲೆ ಕೋಲಾರದ ಶತಶೃಂಗ (Shathashrunga) ಪರ್ವತದ ಮೇಲೆ ಸುಮಾರು 15,000 ಯೋಗಪಟುಗಳು ಯೋಗಾಭ್ಯಾಸ ಮಾಡಿದ್ದು, ಸಂಸದ ಮುನಿಸ್ವಾಮಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಅಲ್ಲದೆ ಜಿಲ್ಲೆಯ ಹಲವು ಕಡೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯೋಗ ದಿನಾಚರಣೆ ಹಿನ್ನೆಲೆ ಸುಮಾರು 40 ಎಕರೆ ಜಾಗವನ್ನು ಕಳೆದ ಹದಿನೈದು ದಿನಗಳಿಂದ ಸ್ವಚ್ಛಗೊಳಿಸಿ ಅಗತ್ಯ ರಸ್ತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಶತಶೃಂಗ ಪರ್ವತದ ಇತಿಹಾಸ ಏನು? ಶತಶೃಂಗ ಪರ್ವತಕ್ಕೆ ತನ್ನದೇ ಆದ ಇತಿಹಾಸ ಇದೆ. ಈ ಬೆಟ್ಟದಲ್ಲಿ ಮುಕುಚುಂದ ಮುನಿಗಳು ತಪ್ಪಸ್ಸು ಮಾಡಿದ್ದಾರೆ ಎಂಬ ನಂಬಿಕೆ ಇದೆ. ಇದೇ ಬೆಟ್ಟದ ಮೇಲಿಲೆ ಅಂತರಗಂಗೆ ಬಸವನ ಬಾಯಿಂದ ಕಾಶಿಯಿಂದಲೇ ಗಂಗೆ ಹರಿದು ಬರುತ್ತಾಳೆ ಎನ್ನುವ ಪ್ರತೀತಿಯೂ ಇದೆ.
ಇನ್ನು ಪಾಂಡವರು ವನವಾಸಕ್ಕೆ ಬಂದ ಸಂದರ್ಭದಲ್ಲಿ ಈ ಬೆಟ್ಟದ ಮೇಲೆ ವಾಸವಿದ್ದರು ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಗುತ್ತದೆ. ಬೆಟ್ಟದ ಮೇಲೆ ಗುಹೆಯೊಂದರಲ್ಲಿ ಪಾಂಡವರು ವಾಸವಿದ್ದ ಸ್ಥಳ ಪಾಂಡವರ ಪಡಸಾಲೆಯನ್ನು ಕಾಣಬಹುದು. ಪಾಂಡವರು ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗ ಕೂಡಾ ಇದೇ ಬೆಟ್ಟದ ಮೇಲಿದೆ. ಇನ್ನು ಬೆಟ್ಟದ ಮೇಲೆ ಗಂಗರು, ಚೋಳರು, ಹಾಗೂ ಬಾದಾಮಿ ಚಾಲುಕ್ಯರ ಕಾಲದಲ್ಲಿ ಸುಂದರ ಕೆತ್ತನೆಗಳ ಮೂಲಕ ಕೆತ್ತಲಾಗಿರುವ ದೇವಾಲಯಗಳು ಇವೆ.
ಇದನ್ನೂ ಓದಿ: Shocking News: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!
40 ಎಕರೆ ಪ್ರದೇಶದಲ್ಲಿ 15 ದಿನಗಳಿಂದ ಸಿದ್ಧತೆ: ಯೋಗಾಭ್ಯಾಸಕ್ಕೆ ಕೋಲಾರ ಸಂಸದ ಮುನಿಸ್ವಾಮಿ ವಿಶೇಷ ಕಾಳಜಿ ವಹಿಸಿ ಈ ಸ್ಥಳದಲ್ಲಿ ಯೋಗ ಮಾಡಬೇಕೆಂದು ಪಟ್ಟು ಹಿಡಿದು ಕೆಲಸ ಮಾಡಿಸಿದ್ದರು. ಈ ಕಾರ್ಯಕ್ಕೆ ಕೈ ಜೋಡಿಸಿದ್ದ ಜಿಲ್ಲಾಡಳಿತ ಮಳೆ ಬಂದರೂ ಸಮಸ್ಯೆ ಬಾರದ ರೀತಿಯಲ್ಲಿ ಪ್ಲಾಸ್ಟಿಕ್ ಕವರ್ ಸಹಿತ ಮ್ಯಾಟ್ಗಳನ್ನು ಹಾಕಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿತ್ತು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Tue, 21 June 22