ಪ್ರಧಾನಿ ಮೋದಿ ಮೈಸೂರನ್ನು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ತಂದಿದ್ದಾರೆ, ಯೋಗದಿಂದ ಜಗತ್ತನ್ನು ಒಂದುಗೂಡಿಸಿದ್ದಾರೆ -ಮೋದಿಗೆ ಸಿಎಂ ಬೊಮ್ಮಾಯಿ ಅಭಿನಂದನೆ
CM Bommai Speech: ಯೋಗ ಅಂತಾರಾಷ್ಟ್ರೀಯ ದಿನಾಚರಣೆಯಾಗಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ದೊಡ್ಡದಿದೆ. ಈ ಬಾರಿ ಪ್ರಧಾನಿಯವರು ಮೈಸೂರಿನಲ್ಲಿ ಯೋಗ ದಿನವನ್ನು ಆಚರಿಸಿ ಮೈಸೂರನ್ನು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ತಂದಿದ್ದಾರೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮುಂಭಾಗದಲ್ಲಿ (Mysuru palace) 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ(International Yoga Day 2022) ವನ್ನು ಪ್ರಧಾನಿ ನರೇಂದ್ರ(PM Narendra Modi) ಮೋದಿ ನೇತೃತ್ವದಲ್ಲಿ ನಡೆಸಲಾಯಿತು. ಸಾವಿರಾರು ಯೋಗಪಟುಗಳು, ರಾಜ್ಯಪಾಲ, ಸಿಎಂ ಬೊಮ್ಮಾಯಿ, ರಾಜವಂಶಸ್ಥರಾದ ಪ್ರಮೋದಾದೇವಿ, ಯದುವೀರ್ ಒಡೆಯರ್, ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೋವಾಲ್, ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು, ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ಮೈಸೂರನ್ನು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ತಂದಿದ್ದಾರೆ. ಯೋಗದಿಂದ ಜಗತ್ತನ್ನು ಒಂದುಗೂಡಿಸಿದ್ದಾರೆ ಎಂದು ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಯೋಗ ಅಂತಾರಾಷ್ಟ್ರೀಯ ದಿನಾಚರಣೆಯಾಗಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ದೊಡ್ಡದಿದೆ. ಈ ಬಾರಿ ಪ್ರಧಾನಿಯವರು ಮೈಸೂರಿನಲ್ಲಿ ಯೋಗ ದಿನವನ್ನು ಆಚರಿಸಿ ಮೈಸೂರನ್ನು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ತಂದಿದ್ದಾರೆ. ಯೋಗ ಮನಸ್ಸು, ದೇಹವನ್ನು ಒಂದು ಮಾಡುವಂತಹದ್ದು ಅದೇ ರೀತಿ ಜಗತ್ತನ್ನು ಒಂದು ಮಾಡಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೋರಿಸಿಕೊಟ್ಟಿದ್ದಾರೆ. ಯೋಗದಿಂದ ಆರೋಗ್ಯ ಹಾಗೂ ಚರಿತ್ರೆ ಆಗ್ತದೆ. ಈ ದೇಶಕ್ಕೆ ದೊಡ್ಡ ಚರಿತ್ರೆ ಇದೆ. ಚಾರಿತ್ಯೆ ಬೇಕು. ಆ ಚಾರಿತ್ಯೆ ಕಟ್ಟುವಂತಹ ಕೆಲಸವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಅದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಂತಾರಾಷ್ಟ್ರೀಯ ಯೋಗ ದಿನದ ಯೋಗ ಫಾರ್ ಹ್ಯುಮಾನಿಟಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಚಿಕ್ಕದಾಗಿ ತಮ್ಮ ಭಾಷಣ ಮುಗಿಸಿದ್ದಾರೆ. ಇದನ್ನೂ ಓದಿ: International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ಯೋಗದ ಬಗ್ಗೆ ಮತ್ತಷ್ಟು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:00 am, Tue, 21 June 22