International Yoga Day 2022: ಬೆಳಗ್ಗೆಯ ಸೋಮಾರಿತನವನ್ನು ದೂರ ಮಾಡುವ ಆಸನಗಳು

| Updated By: ನಯನಾ ರಾಜೀವ್

Updated on: Jun 19, 2022 | 12:23 PM

ಬೆಳಗ್ಗೆ ಆಗುತ್ತಿದ್ದಂತೆ ಅದೇನೋ ಒಂದು ರೀತಿಯ ಜಡ ನಮ್ಮನ್ನು ಆವರಿಸಿಕೊಳ್ಳುತ್ತದೆ. ಎದ್ದು ಕೆಲ ಸಮಯಗಳವರೆಗೆ ನಾವು ಏನು ಮಾಡುತ್ತಿದ್ದೇವೆ ಎಂಬುದೇ ನಮಗೆ ಅರಿವಿರುವುದಿಲ್ಲ.

International Yoga Day 2022: ಬೆಳಗ್ಗೆಯ ಸೋಮಾರಿತನವನ್ನು ದೂರ ಮಾಡುವ ಆಸನಗಳು
Yoga
Follow us on

ಬೆಳಗ್ಗೆ ಆಗುತ್ತಿದ್ದಂತೆ ಅದೇನೋ ಒಂದು ರೀತಿಯ ಜಡ ನಮ್ಮನ್ನು ಆವರಿಸಿಕೊಳ್ಳುತ್ತದೆ. ಎದ್ದು ಕೆಲ ಸಮಯಗಳವರೆಗೆ ನಾವು ಏನು ಮಾಡುತ್ತಿದ್ದೇವೆ ಎಂಬುದೇ ನಮಗೆ ಅರಿವಿರುವುದಿಲ್ಲ. ಹಾಗಿದ್ದಾಗ ಕೆಲವು ಆಸನಗಳನ್ನು ಮಾಡುವ ಮೂಲಕ ನಾವು ಲವಲವಿಕೆಯಿಂದ ಇರಬಹುದು. ಹಾಗೆಯೇ ಯೋಗಾಸನಗಳು ನಿಮ್ಮ ಇಡೀ ದಿನವನ್ನು ಚಟುವಟಿಕೆಯಿಂದ ಕಳೆಯುವಂತೆ ಮಾಡಿ ಚೈತನ್ಯ ಹೆಚ್ಚಿಸುವುದಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿಯನ್ನೂ ಕೂಡ ಹೆಚ್ಚಿಸುತ್ತದೆ.

ವೀರಭದ್ರಾಸನ: ವೀರ ಭದ್ರಾಸನವು ನಿಮ್ಮ ತೋಳುಗಳಿಗೆ ಹೆಚ್ಚು ಬಲವನ್ನು ನೀಡುತ್ತದೆ. ಯೋಗಭದ್ರಾಸನವು ಇಡೀ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ವೀರಭದ್ರಾಸನದಿಂದಾಗುವ ಉಪಯೋಗಗಳು
-ತೋಳುಗಳು, ಕಾಲುಗಳು ಮತ್ತು ಕೆಳಸೊಂಟವನ್ನು ದಷ್ಟಪುಷ್ಟವಾಗಿಸುತ್ತದೆ
-ಶರೀರದ ಶಕ್ತಿಯನ್ನು ಉತ್ತಮಗೊಳಿಸಲು ಹಾಗೂ ಸಮತೋಲನವಾಗಿರಿಸಲು ಸಹಾಯಕವಾಗುತ್ತದೆ.
-ಮೇಜಿನ ಕೆಲಸವನ್ನು ಮಾಡುವವರಿಗೆ ಅನುಕೂಲಕರವಾಗುತ್ತದೆ.
-ಭುಜಗಳು ಗಟ್ಟಿಯಾಗಿದ್ದಲ್ಲಿ ಬಹಳವಾಗಿ ಅನುಕೂಲವಾಗುತ್ತದೆ.
-ಕಡಿಮೆ ಸಮಯದಲ್ಲಿ ಭುಜಗಳಲ್ಲಿನ ಒತ್ತಡವನ್ನು ಹೊರಹಾಕುತ್ತದೆ.

ತ್ರಿಕೋನಾಸನ: ಬೇರೆ ಯೋಗಾಸನದಂತಲ್ಲದೆ, ಈ ತ್ರಿಕೋಣಾನಾಸನದ ಭಂಗಿಯಲ್ಲಿ ಶರೀರದ ಸಮತೋಲನೆಗಾಗಿ ಕಣ್ಣುಗಳನ್ನು ಬಿಟ್ಟಿರಬೇಕು

ತ್ರಿಕೋನಾಸನದಿಂದ ಉಪಯೋಗ

-ಕಾಲುಗಳು, ಮಂಡಿಗಳು, ಪಾದದ ಕೋನಗಳು, ತೋಳುಗಳು ಮತ್ತು ಎದೆ ಇವುಗಳಿಗೆ ಶಕ್ತಿ ದೊರಕುವುದು.
-ಹಿಂಭಾಗ, ತೊಡೆ ಸಂದುಗಳು, ಮಂಡಿಯ ಹಿಂಭಾಗದ ಸ್ನಾಯುಗಳು ಮತ್ತು ಮೀನು ಖಂಡಗಳು: ಭುಜಗಳು, ಎದೆ ಮತ್ತು ಬೆನ್ನು ಮೂಳೆ ಇವುಗಳ ವಿಸ್ತರಣೆಯಾಗಿ ತೆರೆದುಕೊಳ್ಳುವುದು.
-ಮನಸ್ಸು ಮತ್ತು ಶಾರೀರಿಕತೆಯಲ್ಲಿ ಸಮಾನತೆ ಹೊಂದುವುದು.
-ತಿಂದ ಆಹಾರ ಅರಗುವಲ್ಲಿ ಸಹಾಯಕವಾಗುವುದು.
-ಆತಂಕ, ಒತ್ತಡ, ಬೆನ್ನು ನೋವು ಮತ್ತು ಸೊಂಟ ನೋವು ಕಡಿಮೆಯಾಗುವುದು.

ಬಾಲಾಸನ: ಬಾಲಾಸನವು ಒತ್ತಡವನ್ನು ಕಡಿಮೆ ಮಾಡುವುದರ ಜತೆಗೆ ಎದೆ, ಬೆನ್ನು, ತೋಳುಗಳಿಗೆ ಬಲವನ್ನು ನೀಡುತ್ತದೆ. ಹಾಗೆಯೇ ಬೆಳಗ್ಗೆ ಈ ಆಸನ ಮಾಡುವುದರಿಂದ ನೀವು ಹೆಚ್ಚು ಚೈತನ್ಯದಿಂದಿರಲು ಸಾಧ್ಯವಾಗುತ್ತದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ