International Yoga Day 2022: 40 ವರ್ಷ ವಯಸ್ಸಿನ ನಂತರ ಯೋಗವನ್ನು ಪ್ರಾರಂಭಿಸುವವರು ಈ ವಿಷಯಗಳನ್ನು ತಿಳಿದುಕೊಳ್ಳಬೇಕು..!

ಯೋಗವನ್ನು ಪ್ರಾರಂಭಿಸಲು ಯಾವುದೇ ವಯಸ್ಸಿಲ್ಲ. ಅದು ಮಗುವಾಗಲಿ ಅಥವಾ ವಯಸ್ಸಾದವರಾಗಲಿ, ಯಾರು ಬೇಕಾದರೂ ಯೋಗ ಮಾಡಬಹುದು.

International Yoga Day 2022: 40 ವರ್ಷ ವಯಸ್ಸಿನ ನಂತರ ಯೋಗವನ್ನು ಪ್ರಾರಂಭಿಸುವವರು ಈ ವಿಷಯಗಳನ್ನು ತಿಳಿದುಕೊಳ್ಳಬೇಕು..!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2022 | 3:29 PM

ನಮ್ಮ ದೇಹ ಮತ್ತು ಮನಸ್ಸು ಆರೋಗ್ಯವಾಗಿಡಲು ಯೋಗ (Yoga) ವನ್ನು ಮಾಡಲಾಗುತ್ತದೆ. ದೇಹದ ಬಹುತೇಕ ಎಲ್ಲಾ ಕಾಯಿಲೆಗಳನ್ನು ಯೋಗದ ಮೂಲಕ ಗುಣಪಡಿಸಬಹುದಾಗಿದೆ. ಯೋಗದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ ಜೂನ್ 21 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಯೋಗ (International Yoga Day 2022) ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲೂ ಕಳೆದ ಕೆಲವು ವರ್ಷಗಳಿಂದ ಯೋಗದ ಬಗ್ಗೆ ಹೆಚ್ಚಿನ ಜನರಲ್ಲಿ ಆಸಕ್ತಿ ಮೂಡಿದೆ. ಕರೋನಾ ಬಂದ ನಂತರ ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ ಉಂಟಾಗಿದೆ. ಇದರಿಂದಾಗಿ ಎಲ್ಲಾ ವಯಸ್ಸಿನ ಜನರು ಯೋಗವನ್ನು ಮಾಡಲು ಪ್ರಾರಂಭಿಸಿದ್ದಾರೆ. ಹೆಚ್ಚಿನ ಜನರು ಆರೋಗ್ಯವಾಗಿರಲು ಯೋಗ ಆಸನಗಳನ್ನು ಮಾಡಲು ಆಸಕ್ತಿ ತೋರುತ್ತಿದ್ದಾರೆ. 40 ವರ್ಷಕ್ಕಿಂತ ಮೇಲ್ಪಟ್ಟ ಜನರು ಅದರ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದಾರೆ. ಯೋಗಾಸನಗಳನ್ನು ಏಕಾಂಗಿಯಾಗಿ ಪ್ರಾರಂಭಿಸಬಹುದು ಅಥವಾ ನೀವು ಅರ್ಹ ಬೋಧಕರ ಸಲಹೆಯನ್ನು ಸಹ ತೆಗೆದುಕೊಳ್ಳಬಹುದು. ನೀವು 40 ವರ್ಷ ದಾಟಿದ್ದು, ಮತ್ತು ಯೋಗವನ್ನು ಪ್ರಾರಂಭಿಸಲು ಹೊರಟಿದ್ದರೆ, ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದರೊಂದಿಗೆ  ಅನುಸರಿಸುವುದು ಅವಶ್ಯಕವಾಗಿದೆ.

ಇದನ್ನೂ ಓದಿ: International Yoga Day 2022: ಈ ಆಸನಗಳನ್ನು ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು

ಅಂದಹಾಗೆ, ಯೋಗವನ್ನು ಪ್ರಾರಂಭಿಸಲು ಯಾವುದೇ ವಯಸ್ಸಿಲ್ಲ. ಅದು ಮಗುವಾಗಲಿ ಅಥವಾ ವಯಸ್ಸಾದವರಾಗಲಿ, ಯಾರು ಬೇಕಾದರೂ ಯೋಗ ಮಾಡಬಹುದು. ಆದಾಗ್ಯೂ, ಯೋಗವನ್ನು ಪ್ರಾರಂಭಿಸುವ ಮೊದಲು, ಸಮಯ, ಸಂದರ್ಭ ಮತ್ತು ಸನ್ನಿವೇಶವನ್ನು ಪರಿಗಣಿಸುವುದು ಸಹ ಅಗತ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ದೇಹ ಎಲ್ಲದಕ್ಕೂ ಹೊಂದಿಕೊಳ್ಳುತ್ತದೆ. ಆದರೆ ವಯಸ್ಸಾದಂತೆ ದೇಹ ನಮ್ಮ ಮಾತು ಕೇಳುವುದಿಲ್ಲ. ದೇಹದಲ್ಲಿ ಬಿಗಿತದ ಜೊತೆಗೆ ತೂಕ ಹೆಚ್ಚಾಗುವ ಸಮಸ್ಯೆ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ 40 ವರ್ಷ ವಯಸ್ಸಿನ ನಂತರ, ಸೂಕ್ಷ್ಮ ಯೋಗಾಸನದೊಂದಿಗೆ ಯೋಗಾಭ್ಯಾಸ ಪ್ರಾರಂಭಿಸುವುದು ಉತ್ತಮ.

ಇದನ್ನೂ ಓದಿ: International Yoga Day 2022: ಬೆಳಗ್ಗೆಯ ಸೋಮಾರಿತನವನ್ನು ದೂರ ಮಾಡುವ ಆಸನಗಳು

ನೀವು ಈ ಹಿಂದೆ ಯೋಗಾಭ್ಯಾಸ ಮಾಡಿಲ್ಲವೆಂದರೆ ಪ್ರಾರಂಭದಲ್ಲಿ ದಂಡಾಸನ, ಸುಖಾಸನ, ತಾಡಾಸನ ಹೀಗೆ ಸೂಕ್ಷ್ಮ ಯೋಗವನ್ನು ಅಭ್ಯಾಸ ಮಾಡುವುದು ಒಳ್ಳೆಯದು. ಯೋಗ ಪಟು ಹಿಮಾಲಯ ಸಿದ್ಧ ಅಕ್ಷರ ಪ್ರಕಾರ, 40 ವರ್ಷ ವಯಸ್ಸಿನ ನಂತರ, ಆಸನಗಳ ಜೊತೆಗೆ ಭ್ರಮರಿ ಪ್ರಾಣಾಯಾಮ ಮಾಡಬೇಕು. ಇದಲ್ಲದೇ ವಯಸ್ಸಿಗೆ ತಕ್ಕಂತೆ ಆಹಾರ, ಪಾನೀಯದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ.

ಇನ್ನಷ್ಟು ಯೋಗ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ