Health Tips: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸಿಂಪಲ್​ ಜ್ಯೂಸ್​​ಗಳನ್ನು ಸೇವಿಸಿ; ಬೇಲದ ಹಣ್ಣಿನ ಬಳಕೆ ಮಾಡಿ

ಮಜ್ಜಿಗೆ ಅಥವಾ ಚಾಸ್​ ಎಂದು ಕರೆಯಲ್ಪಡುವ ಪಾನೀಯಕ್ಕೆ ಬೇಸಿಗೆಯಲ್ಲಿ ಇಡೀ ದೇಶಾದ್ಯಂತ ಬೇಡಿಕೆ ಇರುತ್ತದೆ. ಮಜ್ಜಿಗೆ ಮೂಲ ಹಾಲು. ಹಾಲನ್ನು ಹೆಪ್ಪ ಹಾಕಿ, ಅದರಿಂದಾಗುವ ಮೊಸರಿಗೆ ನೀರು ಹಾಕಿ ಕಡೆದು ಮಾಡುವ ಪಾನೀಯ.

Health Tips: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸಿಂಪಲ್​ ಜ್ಯೂಸ್​​ಗಳನ್ನು ಸೇವಿಸಿ; ಬೇಲದ ಹಣ್ಣಿನ ಬಳಕೆ ಮಾಡಿ
ಬೇಲದ ಹಣ್ಣು
Follow us
TV9 Web
| Updated By: Lakshmi Hegde

Updated on:May 02, 2022 | 7:22 AM

ಭಾರತದಲ್ಲಿ ಮತ್ತೆ ಕೊರೊನಾ ವೈರಸ್​ ಹರಡುವಿಕೆ ನಿಧಾನವಾಗಿ ಹೆಚ್ಚುತ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಇದ್ದರೂ ಕೂಡ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಈ ಮಧ್ಯೆ ಉಷ್ಣಅಲೆಯ ಗಂಭೀರತೆಯೂ ದಿನೇದಿನೆ ಏರಿಕೆಯಾಗುತ್ತಿದೆ. ಈ ಬಿಸಿಲು, ಕೊರೊನಾ ಸೋಂಕಿನ ಪ್ರಸರಣದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದೇ ಜನರಿಗೆ ಒಂದು ಸವಾಲಾಗಿದೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲೇಬೇಕು. ಹಾಗೇ, ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲೇಬೇಕು. ಅದಕ್ಕಾಗಿ ಮಾತ್ರೆಗಳು, ಮಾರುಕಟ್ಟೆಯಲ್ಲಿ ಸಿಗುವ ಪೌಡರ್​​ಗಳ ಮೊರೆ ಹೋಗಬೇಕಿಲ್ಲ. ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಇಮ್ಯೂನಿಟಿ ಹೆಚ್ಚಿಸಿಕೊಳ್ಳಬಹುದು. 

1. ಲಿಂಬು ಜ್ಯೂಸ್

ಉಗುರು ಬೆಚ್ಚಗಿನ ನೀರಿನಲ್ಲಿ ಲಿಂಬು ಜ್ಯೂಸ್​ ಮಾಡಿಕೊಂಡು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮುಂಜಾನೆಯೇ ಇದನ್ನು ಕುಡಿಯಬೇಕು. ಲಿಂಬು ಜ್ಯೂಸ್​​ನಿಂದ ದಿನವನ್ನು ಪ್ರಾರಂಭ ಮಾಡುವುದರಿಂದ ನಮ್ಮ ದೇಹಕ್ಕೆ ಹೊಸ ಚೈತನ್ಯ ಬರುವುದರ ಜತೆ, ಇಡೀದಿನ ಶರೀರ ಹೈಡ್ರೇಟ್​ ಆಗಿರುತ್ತದೆ. ಅಂದರೆ ನಿರ್ಜಲೀಕರಣವಾಗುವುದು ತಪ್ಪುತ್ತದೆ. ಲಿಂಬುವಿನಲ್ಲಿ ವಿಟಮಿನ್​ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾಡುವ ವಿಧಾನ: ಈ ಲಿಂಬು ಜ್ಯೂಸ್ ಮಾಡುವುದು ತೀರ ಸುಲಭ. ಒಂದು ಗ್ಲಾಸ್​ ಉಗುರುಬೆಚ್ಚಗಿನ ನೀರು ತೆಗೆದುಕೊಂಡು, ಅದಕ್ಕೆ ಲಿಂಬುವಿನ ರಸ ಹಾಕಿ. ಚೂರೇಚೂರು ಉಪ್ಪು ಬೆರೆಸಿ ಸರಿಯಾಗಿ ಮಿಕ್ಸ್​ ಮಾಡಿ. ಬೇಕಿದ್ದರೆ ಅರ್ಧ ಟೀ ಸ್ಪೂನ್​​ನಷ್ಟು ಚಿಯಾ ಬೀಜಗಳನ್ನೂ ಸೇರಿಸಿಕೊಳ್ಳಬಹುದು. ಈ ಬೀಜದಲ್ಲಿ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ.

2. ಬೇಲದ ಹಣ್ಣಿನ ಶರಬತ್ತು

ವುಡ್​ ಆ್ಯಪಲ್​ ಎಂದೂ ಕರೆಯಲಾಗುವ ಈ ಹಣ್ಣು ಬೇಸಿಗೆಯಲ್ಲಿ ಸಾಮಾನ್ಯವಾಗಿ ಸಿಕ್ಕೇಸಿಗುತ್ತದೆ. ಹಲವು ಕಾಯಿಲೆಗಳನ್ನು ನಿಯಂತ್ರಿಸಬಲ್ಲ ಶಕ್ತಿಯಿರುವ ಬೇಲದ ಹಣ್ಣು ಬೇಸಿಗೆಯ ಉಷ್ಣತೆಯಿಂದ ದೇಹವನ್ನು ರಕ್ಷಿಸಿಕೊಳ್ಳಲು ತುಂಬ ಸಹಕಾರಿ. ಪ್ರೊಟಿನ್​ , ವಿಟಮಿನ್, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್, ಖನಿಜಗಳು, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು, ತಾಮ್ರ ಮತ್ತು ಕಬ್ಬಿಣದ ಅಂಶಗಳನ್ನು ಯಥೇಚ್ಛವಾಗಿ ಹೊಂದಿರುವ ಬೇಲದ ಹಣ್ಣಿನ ಶರಬತ್ತು ಮಾಡಿ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಜತೆ್ಗೆ, ಶರೀರ ಉಷ್ಣವಾಗುವುದನ್ನು ತಪ್ಪಿಸಬಹುದು.

ಮಾಡುವ ವಿಧಾನ:  ಇದರ ಶರಬತ್​ ತಯಾರಿಸುವುದೂ ತುಂಬ ಸುಲಭ. ಈ ಹಣ್ಣನ್ನು ಕತ್ತರಿಸಿ, ಒಳಗಿರುವ ತಿರುಳನ್ನು ಒಂದು ಸ್ಪೂನ್​​ನಲ್ಲಿ ತೆಗೆಯಿರಿ. ನಂತರ ಬೀಜವನ್ನೆಲ್ಲ ತೆಗೆದು, ಉಳಿದ ತಿರುಳನ್ನು ಒಂದು ಕಪ್​ ನೀರಿಗೆ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಬಳಿಕ ಚೆನ್ನಾಗಿ ಕರಡಿದರೆ ಜ್ಯೂಸ್ ರೆಡಿ. ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿಕೊಳ್ಳಬಹುದು. ಪುದೀನಾ ಸೊಪ್ಪನ್ನು ಸೇರಿಸಿಕೊಂಡರೆ ರುಚಿಯೂ ಹೌದು, ಆರೋಗ್ಯಕ್ಕೂ ಒಳ್ಳೆಯದು. ದೇಹಕ್ಕೆ ತಾಜಾತನ ಬರುತ್ತದೆ.

3. ಸೋರೆಕಾಯಿ ಜ್ಯೂಸ್​

ಈ ಬೇಸಿಗೆಯ ಆಹಾರ ಕ್ರಮದಲ್ಲಿ ನೀವು ಈ ಜ್ಯೂಸ್​​ನ್ನೂ ಸೇರಿಸಿಕೊಳ್ಳಿ. ಈ ಹಸಿರು ಜ್ಯೂಸ್​​ನಿಂದ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸೋರೆಕಾಯಿ, ನೆಲ್ಲಿಕಾಯಿ ಮತ್ತು ಪುದೀನಾ ಎಲೆಗಳನ್ನು ಸೇರಿಸಿ ಜ್ಯೂಸ್ ಮಾಡಿಕೊಂಡು ಕುಡಿದರೆ ಅದೆಷ್ಟೋ ಆರೋಗ್ಯ ಸಮಸ್ಯೆಯಿಂದ ಮುಕ್ತವಾಗಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಉರಿಯೂತ ಆಗುವುದನ್ನು ತಪ್ಪಿಸುತ್ತದೆ. ಅಷ್ಟೇ ಅಲ್ಲ, ಚರ್ಮಕ್ಕೆ ಗ್ಲೋ ಕೊಡುತ್ತದೆ.

ಮಾಡುವ ವಿಧಾನ: ಅರ್ಧ ಸೋರೆಕಾಯಿ, 2-3 ನೆಲ್ಲಿಕಾಯಿ (ಬೀಜ ತೆಗೆದುಕೊಳ್ಳಿ), ಸಣ್ಣ ಶುಂಠಿ ಚೂರು ಮತ್ತು ಪುದೀನಾಗಳನ್ನು ಸೇರಿಸಿ, ಅರ್ಧ ಗ್ಲಾಸ್ ನೀರು ಹಾಕಿ ಮಿಕ್ಸರ್​​ನಲ್ಲಿ ರುಬ್ಬಿಕೊಳ್ಳಿ. ಬಳಿಕ ಅದನ್ನು  ಇನ್ನೊಂದು ಪಾತ್ರಕ್ಕೆ ಹಾಕಿಕೊಂಡು, ನಿಮ್ಮ ರುಚಿಗೆ ತಕ್ಕಷ್ಟು ಸ್ವಲ್ಪ ಕಲ್ಲುಪ್ಪು ಸೇರಿಸಿ.  ಕೆಲವು ಸೋರೆಕಾಯಿಗಳು ಕಹಿ ಇರುತ್ತವೆ. ಹಾಗಾಗಿ ನೀವು ಜ್ಯೂಸ್ ಮಾಡುವುದಕ್ಕೂ ಮೊದಲು ಚೂರು ತಿಂದು, ಪರೀಕ್ಷೆ ಮಾಡಿಕೊಳ್ಳಿ.

ಪುದೀನಾ ಮಜ್ಜಿಗೆ

ಮಜ್ಜಿಗೆ ಅಥವಾ ಚಾಸ್​ ಎಂದು ಕರೆಯಲ್ಪಡುವ ಪಾನೀಯಕ್ಕೆ ಬೇಸಿಗೆಯಲ್ಲಿ ಇಡೀ ದೇಶಾದ್ಯಂತ ಬೇಡಿಕೆ ಇರುತ್ತದೆ. ಮಜ್ಜಿಗೆ ಮೂಲ ಹಾಲು. ಹಾಲನ್ನು ಹೆಪ್ಪ ಹಾಕಿ, ಅದರಿಂದಾಗುವ ಮೊಸರಿಗೆ ನೀರು ಹಾಕಿ ಕಡೆದು ಮಾಡುವ ಪಾನೀಯ. ದೇಹಕ್ಕೆ ಅಗತ್ಯವಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಇದರಲ್ಲಿ ಹೇರಳವಾಗಿದ್ದು, ಕರುಳಿನ ಆರೋಗ್ಯಕ್ಕೆ ಉತ್ತಮ. ದೇಹವನ್ನು ಹೈಡ್ರೇಟ್ ಆಗಿಡುವ ಜತೆ, ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದೆಲ್ಲದರ ಜತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಜ್ಜಿಗೆಗೆ ಸ್ವಲ್ಪ ಉಪ್ಪು ಸೇರಿಸಿ ಹಾಗೇಯೇ ಕುಡಿಯಬಹುದು. ಇಲ್ಲದೆ ಇದ್ದರೆ ಪುದೀನಾ ಸೊಪ್ಪನ್ನು ಸೇರಿಸಿಕೊಂಡು ಕುಡಿಯಬಹುದು. ಹೀಗೆ ಮಾಡುವುದರಿಂದ ದೇಹಕ್ಕೆ ಇನ್ನೂ ಅನುಕೂಲಗಳು ಇವೆ.

ಮಾಡುವ ವಿಧಾನ: ಪುದೀನಾ ಮಜ್ಜಿಗೆಯನ್ನು ತುಂಬ ಸಿಂಪಲ್ ಆಗಿ ತಯಾರಿಸಿಕೊಳ್ಳಬಹುದು. ಮೊದಲು ಒಂದು ಕಪ್​ ಮೊಸರಿಗೆ ಅಸಾಫೋಟಿಡಾ, ಕಪ್ಪು ಉಪ್ಪು, ಸ್ವಲ್ಪ ಚಾಟ್ ಮಸಾಲಾ, ಅರ್ಧ ಟೀ ಸ್ಪೂನ್​ ಶುಂಠಿ ಮತ್ತು ಹಸಿಮೆಣಸಿನ ಪೇಸ್ಟ್​, ಪುದೀನಾ ಎಲೆಗಳು, ಒಂದು ಕಪ್​ ನೀರು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಅದು ಮಜ್ಜಿಗೆಯ ರೂಪಕ್ಕೆ ಬರುತ್ತದೆ. ಬಳಿಕ ಬೇಕಿದ್ದರೆ ಸ್ವಲ್ಪ ಜೀರಿಗೆಯನ್ನು ಹುರಿದು ಅದಕ್ಕೆ ಹಾಕಿಕೊಂಡು ಕುಡಿಯಬಹುದು.

ಇದನ್ನೂ ಓದಿ: RCB ತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿದ ಅನುಷ್ಕಾ ಶರ್ಮಾ

Published On - 7:00 am, Mon, 2 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ