International Yoga Day 2022: ಯಾವ ಸಮಯದಲ್ಲಿ ಯೋಗ ಮಾಡುವುದು ಹೆಚ್ಚು ಸೂಕ್ತ?

| Updated By: ಆಯೇಷಾ ಬಾನು

Updated on: Jun 20, 2022 | 7:00 AM

ಯಾವ ಸಮಯದಲ್ಲಿ ಯೋಗ ಮಾಡುವುದು ಒಳ್ಳೆಯದು ಅನ್ನುವ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹೆಚ್ಚಾಗಿ ಎಲ್ಲರೂ ಬೆಳಗ್ಗೆದ್ದು ಯೋಗ ಮಾಡುತ್ತಾರೆ. ಆದರೆ ಬೆಳಗ್ಗೆದ್ದು ಯೋಗ ಮಾಡಲು ಸಮಯ ಸಿಗದವರು ಸಂಜೆ ಮಾಡುವುದು ಸೂಕ್ತವೇ ಎಂಬುದರ ಬಗ್ಗೆ ಗೊಂದಲವಿರುತ್ತದೆ. ಆ ಎಲ್ಲಾ ಗೊಂದಲಗಳಿಗೆ ಉತ್ತರ ಇಲ್ಲಿದೆ.

International Yoga Day 2022: ಯಾವ ಸಮಯದಲ್ಲಿ ಯೋಗ ಮಾಡುವುದು ಹೆಚ್ಚು ಸೂಕ್ತ?
ಯೋಗ
Follow us on

ಯೋಗ(Yoga)ಭಾರತದ ಸಂಸ್ಕೃತಿಯಷ್ಟೇ ಅಲ್ಲ, ಅದು ಸನಾತನ ಕಾಲದಿಂದಲೂ ನಮ್ಮ ಹಿರಿಯರು ಮುಂದಿನ ಪೀಳಿಗೆಗೆ ಬಿಟ್ಟ ಹೋಗಿರುವ ಸಂಪತ್ತು. ಯೋಗದ ಮಹತ್ವ ತಿಳಿದಿದ್ದ ನಮ್ಮ ಹಿರಿಯರು ಕಾಯಿಲೆ, ರೋಗ-ರುಜಿನಗಳಿಲ್ಲದೇ ಶತಾಯುಷಿಯಾಗಿ ಬದುಕಿ ತೋರಿಸಿದ್ದಾರೆ. ಯೋಗದಿಂದ ಉತ್ತಮ ಆರೋಗ್ಯ(Good Health) ಪಡೆಯಬಹುದು. ಯೋಗದಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ಶಾಂತಿ ಪಡೆಯಬಹುದು. ಬಿಡುವಿಲ್ಲದ ಒತ್ತಡದ ಜೀವನಕ್ಕೆ ಯೋಗ ಅತಿ ಮುಖ್ಯ. ಯೋಗ ಮಾಡುವುದರಿಂದ ಶರೀರ ಬಲಗೊಳ್ಳುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಶ್ವಾಸಕೋಶ, ಹೃದಯ, ನರಮಂಡಲ ಸಂಬಂಧಿತ ಆರೋಗ್ಯ ಸಮಸ್ಯೆಗಳು ಪರಿಹಾರವಾಗುವುದು. ಆದ್ರೆ ಇದಕೆಲ್ಲ ಸರಿಯಾದ ಕ್ರಮ ಕೂಡ ಅತಿ ಮುಖ್ಯ. ಬನ್ನಿ ಹಾಗಾದ್ರೆ ಯಾವ ಸಮಯದಲ್ಲಿ ಯಾಗ ಮಾಡುವುದರಿಂದ ಯಾವ ಪ್ರಯೋಜನ? ಯಾವ ಮಾಡಲು ಉತ್ತಮ ಸಮಯ ಯಾವುದು ಎಂಬ ಬಗ್ಗೆ ತಿಳಿಯೋಣ.

ನಿಯಮಿತವಾಗಿ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತೆ. ದೇಹವನ್ನು ಸುಸ್ಥಿತಿಗೆ ತರಲು ಯೋಗಕ್ಕಿಂತ ಉತ್ತಮವಾದ ಬೇರೊಂದು ಉಪಾಯವಿಲ್ಲ. ಅಲ್ಲದೆ ಯೋಗದಿಂದ ಯಾವ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ. ಯೋಗದಿಂದ ಜೀವನಶೈಲಿಯಲ್ಲಿ ವಿಪರೀತ ಬದಲಾವಣೆಯನ್ನು ತರದೆಯೇ ದೇಹವನ್ನು ಯೋಗವು ಪರಿಣಾಮಕಾರಕವಾಗಿ ಸುಸ್ಥಿತಿಗೆ ತರುತ್ತದೆ. ಆದರೆ, ಯಾವ ಸಮಯದಲ್ಲಿ ಯೋಗ ಮಾಡುವುದು ಒಳ್ಳೆಯದು ಅನ್ನುವ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹೆಚ್ಚಾಗಿ ಎಲ್ಲರೂ ಬೆಳಗ್ಗೆದ್ದು ಯೋಗ ಮಾಡುತ್ತಾರೆ. ಆದರೆ ಬೆಳಗ್ಗೆದ್ದು ಯೋಗ ಮಾಡಲು ಸಮಯ ಸಿಗದವರು ಸಂಜೆ ಮಾಡುವುದು ಸೂಕ್ತವೇ ಎಂಬುದರ ಬಗ್ಗೆ ಗೊಂದಲವಿರುತ್ತದೆ. ಆ ಎಲ್ಲಾ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಯೋಗ ತಜ್ಞರು ಸೂರ್ಯೋದಯದ ಸಮಯದಲ್ಲಿ ಯೋಗಾಭ್ಯಾಸ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಸಂಜೆ ಯೋಗ ಮಾಡುವುದರಿಂದಲೂ ಯಾವುದೇ ರೀತಿಯ ತೊಂದರೆಯಿಲ್ಲ ಅನ್ನೋ ಅಭಿಪ್ರಾಯ ಕೂಡ ಇದೆ. ಹೆಚ್ಚಿನ ಯೋಗ ಶಾಲೆಗಳಲ್ಲಿ ಬೆಳಗ್ಗಿನ ಸಮಯ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಆದರೆ ಬೆಳಗ್ಗೆದ್ದು ಕಾಲೇಜು, ಕಚೇರಿಗೆಂದು ಹೋಗುವವರಿಗೆ ಯೋಗ, ವಾಕಿಂಗ್‍ ಎಂದು ಮಾಡಲು ಸಮಯವಿರುವುದಿಲ್ಲ. ಇಂಥವರು ಸಂಜೆ ಹೊತ್ತಿನಲ್ಲಿಯೂ ಯೋಗಾಭ್ಯಾಸ ಮಾಡಬಹುದು. ಇದನ್ನೂ ಓದಿ: International Yoga Day 2022: ಯೋಗದಿಂದ ಮಧುಮೇಹ, ರಕ್ತದೊತ್ತಡವನ್ನು ನಿಯಂತ್ರಿಸಬಹುದು

ಬೆಳಗ್ಗಿನ ಯೋಗದ ಪ್ರಯೋಜನಗಳು
ಬೆಳಗ್ಗೆ ಯೋಗ ಮಾಡುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ನೋವಿದ್ದರೆ ಪರಿಹಾರವಾಗುವುದು. ದಿನಪೂರ್ತಿ ಮನೆಯಲ್ಲಿ, ಆಫೀಸಿನಲ್ಲಿ ಇತರ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳಬಹುದು. ನಿಯಮಿತವಾಗಿ ಯೋಗ ಮಾಡುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಸಮರ್ಪಕವಾಗಿ ಆಗುತ್ತದೆ. ಮಧುಮೇಹ ನಿಯಂತ್ರಣದಲ್ಲಿಡಲು ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ. ಅಲ್ಲದೆ, ಬೆಳ್ಳಂಬೆಳಗ್ಗೆ ಎದ್ದು ಯೋಗ ಮಾಡುವುದರಿಂದ ಪಾಸಿಟಿವ್ ಎನರ್ಜಿ ದೊರೆಯುತ್ತದೆ. ದಿನಪೂರ್ತಿ ಉಲ್ಲಾಸದಿಂದ ಇತರ ಕೆಲಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಬೆಳಿಗ್ಗೆ 5ರಿಂದ 7 ಮತ್ತು ಸಂಜೆ 5ರಿಂದ 7 ಅಭ್ಯಾಸಕ್ಕೆ ಸೂಕ್ತ ಸಮಯ. ಧ್ಯಾನ ಅಭ್ಯಾಸಕ್ಕೆ ಪ್ರಾತಃಕಾಲ ಅತ್ಯಂತ ಸೂಕ್ತವಾದುದು ಎನ್ನಲಾಗಿದೆ.

ಸಂಜೆ ಯೋಗದ ಪ್ರಯೋಜನಗಳು
ಸಂಜೆ ವೇಳೆ ಸಾಮಾನ್ಯವಾಗಿ ಎಲ್ಲರೂ ದಿನ ನಿತ್ಯದ ಕೆಲಸ ಮುಗಿಸಿ ಮನೆಗೆ ಮರಳಿರುವುದರಿಂದ ಶಾಂತಿಯಿಂದ ಯಾವುದೇ ಒತ್ತಡವಿಲ್ಲದೆ ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಮನೆ ಕೆಲಸ, ಆಫೀಸಿಗೆ ಹೋಗಲಿಕ್ಕಿದೆ ಅನ್ನೋ ಧಾವಂತವಿಲ್ಲದೆ ಸಮಾಧಾನದಿಂದ ಯೋಗ ಮಾಡಬಹುದು. ಬೆಳಗ್ಗೆಯಿಂದಿದ್ದ ಸುಸ್ತು ಯೋಗ ಮಾಡುವುದರಿಂದ ಇಲ್ಲವಾಗುವುದು. ದಿನದ ಜಂಜಾಟದಲ್ಲಿದ್ದ ಮಾನಸಿಕ ಒತ್ತಡಗಳು ಕಳೆದುಹೋಗಿ ನೆಮ್ಮದಿ ದೊರಕುತ್ತದೆ. ಜೊತೆಗೆ ಸಂಜೆ ಯೋಗ ಮಾಡುವುದಿರಂದ ರಾತ್ರಿ ಚೆನ್ನಾಗಿ ನಿದ್ರೆ ಮಾಡಬಹುದು. ಯೋಗದಿಂದ ಮಾನಸಿಕ ಕಿರಿಕಿರಿ  ಕಳೆದು ಹೋಗುವುದರಿಂದ ಮನಸ್ಸು ರಿಲ್ಯಾಕ್ಸ್ ಆಗಿರುತ್ತದೆ. ಇದರಿಂದ ಹಾಯಾಗಿ ನೆಮ್ಮದಿಯ ನಿದ್ದೆ ಮಾಡಬಹುದು.

ಯೋಗಾಭ್ಯಾಸಕ್ಕೆ ಬೆಳಗ್ಗೆ ಒಳ್ಳೆಯದು, ಸಂಜೆ ಒಳ್ಳೆಯದಲ್ಲ ಎಂದೇನಿಲ್ಲ. ಮನಸ್ಸು ಶಾಂತವಾಗಿದ್ದ ಯಾವ ಸಮಯದಲ್ಲೂ ಯೋಗಾಭ್ಯಾಸ ಮಾಡಬಹುದು. ಯಾವ ಹೊತ್ತಿನಲ್ಲಿ ಯೋಗ ಮಾಡಿದರೂ ಅದರ ಪ್ರಯೋಜನಗಳು ಲಭಿಸುತ್ತದೆ. ಇದನ್ನೂ ಓದಿ: Agnipath Protest Effect: ಕಾಶಿ ದರ್ಶನಕ್ಕೆ ಹೋಗಿ ವಾಪಸ್ ಬರಲು ಪರದಾಡುತ್ತಿದ್ದ ಯಾತ್ರಿಕರಿಗೆ ಬಸ್ ವ್ಯವಸ್ಥೆ ಮಾಡಿದ ಮಂಡ್ಯ ಜಿಲ್ಲಾಡಳಿತ

ಯೋಗದ ಬಗ್ಗೆ ಮತ್ತಷ್ಟು ಆರ್ಟಿಕಲ್ಸ್​​ಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ