Agnipath Protest Effect: ಕಾಶಿ ದರ್ಶನಕ್ಕೆ ಹೋಗಿ ವಾಪಸ್ ಬರಲು ಪರದಾಡುತ್ತಿದ್ದ ಯಾತ್ರಿಕರಿಗೆ ಬಸ್ ವ್ಯವಸ್ಥೆ ಮಾಡಿದ ಮಂಡ್ಯ ಜಿಲ್ಲಾಡಳಿತ
ಇದೇ ಜೂನ್ 9ರಂದು ಮಂಡ್ಯದಿಂದ ಸಂಗಮಿತ್ರ ರೈಲಿನಲ್ಲಿ ಕಾಶಿಗೆ 70 ಮಂದಿ ಹೊರಟಿದ್ರು. ಕಾಶಿಯ ವಿಶ್ವನಾಥನ ದೇವಾಲಯ ಗಂಗಾರತಿಯನ್ನ ಕಣ್ತುಂಬಿ ಕೊಂಡಿದ್ರು. ಜೂನ್ 18ರಂದು ಅದೇ ಸಂಗಮಿತ್ರ ರೈಲಿನ ಮೂಲಕ ಮಂಡ್ಯಕ್ಕೆ ವಾಪಸ್ಸು ಬರ್ಬೇಕಿತ್ತು. ಆದ್ರೆ ಅಗ್ನಿಪಥ್ ಹೋರಾಟ ಹೆಚ್ಚಾದ ಕಾರಣ ಬಿಹಾರದಲ್ಲಿ ರೈಲನ್ನ ತಡೆದು ನಿಲ್ಲಿಸಲಾಗಿದೆ.
ಮಂಡ್ಯ: ಅಗ್ನಿಪಥ್(Agnipath Scheme) ಪ್ರತಿಭಟನೆ ಎಫೆಕ್ಟ್ ನಿಂದ ನೊಂದು ಬೆಂದಿದ್ದ ಮಂಡ್ಯದ ಜನರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಕಾಶಿಯಲ್ಲಿ(Kashi Yatra) ಸಿಲುಕಿದ್ದ ಮಂಡ್ಯ, ರಾಮನಗರ, ಚನ್ನಪಟ್ಟಣ ಮೂಲದ 70 ಜನರಿಗೆ ವಾಪಸ್ಸಾಗಲು ಮಂಡ್ಯ ಜಿಲ್ಲಾಡಳಿತ(Mandya District Administration) ಬಸ್ ವ್ಯವಸ್ಥೆ ಮಾಡಿದೆ. ಕಾಶಿ ದರ್ಶನಕ್ಕೆ ಹೋಗಿ ಹಿಂತಿರುಗಲಾಗದೆ ಅತಂತ್ರರಾಗಿದ್ದ ಜನ ವಾಪಸ್ ಬರುತ್ತಿದ್ದಾರೆ. ಟಿವಿ9 ವರದಿ ಬಳಿಕ ಯಾತ್ರಾರ್ಥಿಗಳನ್ನ ಸಂಪರ್ಕಿಸಿ ಮಂಡ್ಯ ಡಿಸಿ ಬಸ್ ವ್ಯವಸ್ಥೆ ಮಾಡಿದ್ದಾರೆ.
ಅಗ್ನಿಪಥ್ ಯೋಜನೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಬೀದಿ ಬೀದಿಗಳಲ್ಲಿ ಪ್ರತಿಭಟನೆಗಳು ಶುರುವಾಗಿವೆ. ಬಸ್ ಸ್ಟ್ಯಾಂಡ್ ಸೇರಿದಂತೆ ರೈಲ್ವೆ ನಿಲ್ಧಾಣಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿ ಹೋಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳು ನಾಶವಾಗಿವೆ. ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯದಲ್ಲಿ ಯುವಕರು ರೊಚ್ಚಿಗೆದ್ದಿದ್ದಾರೆ ಇದರ ಪರಿಣಾಮ ದೇಶದ ಕೆಲ ರಾಜ್ಯದಲ್ಲಿ ರೈಲ್ವೆ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಮಂಡ್ಯದಿಂದ ವಾರಣಾಸಿಗೆ ತೆರಳಿದ್ದ 70 ಮಂದಿ ಯಾತ್ರಿಕರು ಅತಂತ್ರರಾಗಿದ್ದರು. ಇದನ್ನೂ ಓದಿ: ಅಗ್ನಿವೀರರಿಗೆ ಪಕ್ಷದ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸದ ಆಫರ್ ನೀಡಿದ ಬಿಜೆಪಿ ನಾಯಕ
ಇದೇ ಜೂನ್ 9ರಂದು ಮಂಡ್ಯದಿಂದ ಸಂಗಮಿತ್ರ ರೈಲಿನಲ್ಲಿ ಕಾಶಿಗೆ 70 ಮಂದಿ ಹೊರಟಿದ್ರು. ಕಾಶಿಯ ವಿಶ್ವನಾಥನ ದೇವಾಲಯ ಗಂಗಾರತಿಯನ್ನ ಕಣ್ತುಂಬಿ ಕೊಂಡಿದ್ರು. ಜೂನ್ 18ರಂದು ಅದೇ ಸಂಗಮಿತ್ರ ರೈಲಿನ ಮೂಲಕ ಮಂಡ್ಯಕ್ಕೆ ವಾಪಸ್ಸು ಬರ್ಬೇಕಿತ್ತು. ಆದ್ರೆ ಅಗ್ನಿಪಥ್ ಹೋರಾಟ ಹೆಚ್ಚಾದ ಕಾರಣ ಬಿಹಾರದಲ್ಲಿ ರೈಲನ್ನ ತಡೆದು ನಿಲ್ಲಿಸಲಾಗಿದೆ. ಕೆಲ ಬೋಗಿಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಮಂಡ್ಯಕ್ಕೆ ವಾಪಸ್ಸು ಬರಲಾಗದೆ 70 ಮಂದಿ ಅತಂತ್ರ ಸ್ಥಿತಿಯಲ್ಲಿದ್ದರು. ಯಾತ್ರಿಕರಿಗೆ ಉಳಿದುಕೊಳ್ಳಲು ಜಾಗವಿಲ್ಲದೆ, ಆಹಾರ ಸಮಸ್ಯೆ ಎದುರಿಸುತ್ತಿದ್ದ ಬಗ್ಗೆ ಟಿವಿ9 ವರದಿ ಮಾಡಿತ್ತು. ಸುದ್ದಿ ನೋಡಿ ಯಾತ್ರಾರ್ಥಿಗಳನ್ನ ಸಂಪರ್ಕಿಸಿದ ಮಂಡ್ಯ ಡಿಸಿ ಅಶ್ವಥಿ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಮಾಡಿಸಿದ್ದಾರೆ. ಯಾತ್ರಿಗಳ ಬಳಿ ಹಣದ ಕೊರತೆ ಇದ್ದ ಕಾರಣ ಬಸ್ ಖರ್ಚುನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಬರಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:33 pm, Sun, 19 June 22