ಕರ್ನಾಟಕದಲ್ಲಿಂದು ಪ್ರಧಾನಿ ಡೆವಲ್ಪೆಂಟ್ ಜೋಶ್ :ಮೋದಿ ವಿಕಾಸದ ಹಾದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಥ್

| Updated By: ಸಾಧು ಶ್ರೀನಾಥ್​

Updated on: Jun 20, 2022 | 3:34 PM

ಇಂದು ಪ್ರಧಾನಿ ಮೋದಿಯವರ ಹಾದಿಯಲ್ಲಿ ಸಾಥ್ ನೀಡಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದಿನ ಕಾರ್ಯಕ್ರಮ‌ದ ಬಳಿಕ ವಿಶ್ವವಿಖ್ಯಾತ ಹಂಪಿಯತ್ತ ತೆರಳಲಿದ್ದಾರೆ. ನಾಳೆ ಬೆಳಗ್ಗೆ 6.30 ಕ್ಕೆ (21 ಜೂನ್) ಹಂಪಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದಲ್ಲಿಂದು ಪ್ರಧಾನಿ ಡೆವಲ್ಪೆಂಟ್ ಜೋಶ್ :ಮೋದಿ ವಿಕಾಸದ ಹಾದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಥ್
ಕರ್ನಾಟಕದಲ್ಲಿಂದು ಪ್ರಧಾನಿ ಡೆವಲ್ಪೆಂಟ್ ಜೋಶ್ :ಮೋದಿ ವಿಕಾಸದ ಹಾದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಥ್
Follow us on

ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಕರ್ನಾಟಕದ ಸಮಗ್ರ ಅಭಿವೃದ್ಧಿ‌ಯ ಆಶಯಗಳ ಜೊತೆಗೆ ಪ್ರಧಾನಿ ಮೋದಿ ಅವರು ನಮ್ಮ ರಾಜ್ಯಕ್ಕೆ ಇಂದು ಬಂದಿದ್ದಾರೆ. ಸುಮಾರು 33,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ 19 ಅಭಿವೃದ್ಧಿ ಕಾಮಗಾರಿ‌ಗಳಿಗೆ ಪ್ರಧಾನಿ ಅವರು ಇವತ್ತು ಚಾಲನೆಯನ್ನು ಸಹ ನೀಡ್ತಾ ಇದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮ‌ಗಳಲ್ಲಿ ಮೋದಿ ಅವರು ಹಲವಾರು ಯೋಜನೆಗಳ ಉದ್ಘಾಟನೆ, ಸಮರ್ಪಣೆ, ಶಂಕುಸ್ಥಾಪನೆ‌ ಮೊದಲಾದವುಗಳನ್ನು ನೆರವೇರಿಸಲಿದ್ದಾರೆ (PM Modi Karnataka Visit).

ಬೆಂಗಳೂರಿನಲ್ಲಿ ಮೊದಲಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಆವರಣದಲ್ಲಿ ‘ಮೆದುಳು ಸಂಶೋಧನಾ ಕೇಂದ್ರ’ ವನ್ನು ಉದ್ಘಾಟಿಸಿದ್ದಾರೆ. ಜೊತೆಗೆ ಬಾಗ್ಚಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆಯೂ ನೆರವೇರಿದೆ. ತದನಂತರ, ಮಧ್ಯಾಹ್ನ ಡಾ. ಬಿ. ಆರ್‌. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆವರಣದಲ್ಲಿ BASE ವಿಶ್ವವಿದ್ಯಾಲಯದ ಹೊಸ ಸಂಕೀರ್ಣ‌ದ ಉದ್ಘಾಟನೆ. ಹಾಗೆಯೇ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಯೂ ಅನಾವರಣ. ಮಧ್ಯಾಹ್ನ 2.45 ಕ್ಕೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ 27,000 ಕೋಟಿ ರೂ. ಮೊತ್ತದ ರಸ್ತೆ ಮೂಲಸೌಕರ್ಯ‌ಗಳು, ರೈಲ್ವೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಇನ್ನು, ಸಂಜೆ 5.30 ರ ಸುಮಾರಿಗೆ ಮೈಸೂರಿನ ಮಹಾರಾಜ ಕಾಲೇಜು ಗ್ರೌಂಡ್‌ನ ಆವರಣದಲ್ಲಿ ನಾಗನಹಳ್ಳಿ ರೈಲು ನಿಲ್ದಾಣ‌ದ ಕೋಚಿಂಗ್ ಟರ್ಮಿನಲ್‌ಗೆ ಪ್ರಧಾನಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ‌ಯ ಶ್ರೇಷ್ಠತಾ ಕೇಂದ್ರ‌ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಮೈಸೂರಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಮೋದಿ ಅವರು, ಸಂಜೆ 7.45 ರ ಸುಮಾರಿಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ‌ಕ್ಕೆ ಭೇಟಿ ನೀಡಲಿದ್ದಾರೆ.

ಮೋದಿ ಹಾದಿಯಲ್ಲಿ ಪ್ರಲ್ಹಾದ ಜೋಶಿ ನಡೆ : ಪ್ರಧಾನಿ ಆಶಯದಂತೆ ನಾಳೆ ಪಾರಂಪರಿಕ ಸ್ಥಳದಲ್ಲಿ ಯೋಗ ಮಾಡಲು ಹಂಪಿ ಕಡೆ

ಪ್ರಧಾನಿ ಮೋದಿ ಅವರ ಈ ಎಲ್ಲಾ ಕಾರ್ಯಕ್ರಮ‌ಗಳಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸಾಥ್ ನೀಡಲಿದ್ದಾರೆ. ಜೊತೆಗೆ ಕರ್ನಾಟಕ‌ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಲಿದ್ದಾರೆ.

ಇಂದು ಇಡೀ ದಿನ ಪ್ರಧಾನಿ ಮೋದಿಯವರ ಹಾದಿಯಲ್ಲಿ ಸಾಥ್ ನೀಡಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಂದಿನ ಕಾರ್ಯಕ್ರಮ‌ದ ಬಳಿಕ ವಿಶ್ವವಿಖ್ಯಾತ, ಯುನೆಸ್ಕೋ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿಯತ್ತ ತೆರಳಲಿದ್ದಾರೆ. ನಾಳೆ ಹಂಪಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜೋಶಿಯವರು ಇಂದು ರಾತ್ರಿ ಹಂಪಿಯತ್ತ ತೆರಳಲಿದ್ದಾರೆ.

ಹಂಪಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ವಿಖ್ಯಾತಗೊಳಿಸಲು ಯೋಗ ದಿನಾಚರಣೆಯಂದು ಜೋಶಿ ಅವರು ಹಂಪಿಯಲ್ಲಿ ಸಾವಿರಾರು ಜನರೊಂದಿಗೆ ಯೋಗೋತ್ಸವ ಆಚರಿಸಲಿದ್ದಾರೆ. ನಾಳೆ ಬೆಳಗ್ಗೆ 6.30 ಕ್ಕೆ (21 ಜೂನ್) ರಾಜ್ಯದ ಪಾರಂಪರಿಕ ಸ್ಥಳ ಹಂಪಿಯಲ್ಲಿ ಐದು ಸಾವಿರಕ್ಕೂ ಅಧಿಕ ಜನರೊಂದಿಗೆ ಜೋಶಿ ಅವರು ಯೋಗ ಮಾಡಲಿದ್ದಾರೆ. ಯೋಗ ದಿನವನ್ನು ಆಚರಿಸಿದ ಬಳಿಕ ಕೇಂದ್ರ ಸಚಿವ ಜೋಶಿ ಅವರು ಅಂತರಾಷ್ಟ್ರೀಯ ಯೋಗ ದಿನದ ಸಂದೇಶವನ್ನು ಜನತೆಗೆ ನೀಡಲಿದ್ದಾರೆ.

ಯೋಗದ ಜೊತೆಗೆ ದೇಶದ ಪಾರಂಪರಿಕ ಸ್ಥಳಗಳನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ನೀಡಿರುವ ಕರೆಯಂತೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಂಪಿಯನ್ನು ಮತ್ತಷ್ಟು ಜಗದ್ವಿಖ್ಯಾತ‌ಗೊಳಿಸಲು ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ.

Published On - 2:10 pm, Mon, 20 June 22