Art Of Yoga: ಸಿಂಗಲ್ ಲೆಗ್ ಸ್ಟ್ರೆಚಿಂಗ್ ವ್ಯಾಯಾಮ ಎಂದರೇನು? ಉಪಯೋಗಗಳೇನು?

| Updated By: ನಯನಾ ರಾಜೀವ್

Updated on: Jun 16, 2022 | 3:59 PM

ಯಾವುದೇ ರೋಗವಿಲ್ಲದೆ ಆರೋಗ್ಯವಾಗಿರುವುದು ಕೂಡ ಜೀವನದ ಸವಾಲುಗಳಲ್ಲಿ ಒಂದು. ನಿತ್ಯ ವ್ಯಾಯಾಮ, ಧ್ಯಾನ ಇತ್ಯಾದಿಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Art Of Yoga: ಸಿಂಗಲ್ ಲೆಗ್ ಸ್ಟ್ರೆಚಿಂಗ್ ವ್ಯಾಯಾಮ ಎಂದರೇನು? ಉಪಯೋಗಗಳೇನು?
Kamala Bharadwaj
Follow us on

ಯಾವುದೇ ರೋಗವಿಲ್ಲದೆ ಆರೋಗ್ಯವಾಗಿರುವುದು ಕೂಡ ಜೀವನದ ಸವಾಲುಗಳಲ್ಲಿ ಒಂದು.  ಯೋಗವು ರೋಗವನ್ನು ತಗ್ಗಿಸಿ, ಆಯುಷ್ಯವನ್ನು ಹೆಚ್ಚಿಸಿ, ನೀವು ನಿಮ್ಮವರೊಂದಿಗೆ ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತದೆ. ನಿತ್ಯ ವ್ಯಾಯಾಮ, ಧ್ಯಾನ ಇತ್ಯಾದಿಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಕುರಿತು ಯೋಗ ಕಮಲಾ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ.

ನೀವು ಮಾಡುವ ವ್ಯಾಯಾಮದಲ್ಲಿ ಸಿಂಗಲ್ ಲೆಗ್ ಸ್ಟ್ರೆಚಿಂಗ್ ಅಳವಡಿಸಿಕೊಂಡರೆ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ದೇಹದಲ್ಲಿ ಶಕ್ತಿ, ಸ್ನಾಯುಗಳ ಬಲವನ್ನು ವೃದ್ಧಿಸುತ್ತದೆ. ಬೆನ್ನು ನೋವು ಗುಣಮುಖವಾಗುತ್ತದೆ, ಸೊಂಟದಲ್ಲಿಯೂ ಬಲ ಹೆಚ್ಚುತ್ತದೆ. ಸೊಂಟದ ಕೊಬ್ಬು ಕರಗುತ್ತದೆ.

ಒಂದು ಕಾಲನ್ನು ಮಡಚಿ ತೊಡೆಯ ಬಳಿ ನೇರವಾಗಿ ಇರಿಸಬೇಕು, ಮತ್ತೊಂದು ಕಾಲನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಚಾಚಬೇಕು. ಜೊತೆ ನಿಮ್ಮ ಎರಡೂ ಕೈಗಳನ್ನು ಮುಂದಿರಿಸಿ ಸಾಧ್ಯವಾದಷ್ಟು ಮುಂದಕ್ಕೆ ಬಾಗಲು ಪ್ರಯತ್ನಿಸಬೇಕು. ಕಾಲುಗಳನ್ನು ಮಡಚುವುದು ಅಥವಾ ಒಂದು ಕಾಲನ್ನು ಹಿಗ್ಗಿಸುವುದರಿಂದ ಸಾಕಷ್ಟು ನೋವು ಉಂಟಾಗುತ್ತದೆ. ಆದರೆ ಇದು ದೇಹಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ದೇಹದ ಮೂರು ಭಾಗಗಳ ಕೊಬ್ಬನ್ನು ಆದಷ್ಟು ಬೇಗ ಕಡಿಮೆ ಮಾಡುವುದಲ್ಲದೆ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ.

ದೇಹವು ಹೊಂದಿಕೊಳ್ಳುತ್ತದೆ
ಯೋಗ ಮಾಡಲು ಪ್ರಾರಂಭಿಸಿದ ಹೊಸತರಲ್ಲಿ ಯಾವುದೇ ಭಂಗಿಯನ್ನು ಸರಿಯಾದ ರೀತಿಯಲ್ಲಿ ಮಾಡಲು ಪ್ರಾರಂಭಿಸುವುದು ಸಾಧ್ಯವಿಲ್ಲ, ಆದರೆ ಅವರು ಪ್ರತಿದಿನ ಸ್ಟ್ರೆಚಿಂಗ್ ಅಭ್ಯಾಸವನ್ನು ಪ್ರಾರಂಭಿಸಿದರೆ, ದೇಹವು ಹೊಂದಿಕೊಳ್ಳಲು ಪ್ರಾರಂಭಿಸುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುತ್ತದೆ

ಪ್ರತಿಯೊಬ್ಬರಿಗೂ ಬಿಡುವಿನ ಸಮಯ ಎಂಬುದು ಇದ್ದೇ ಇರುತ್ತದೆ. ಆ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ಕೂಡ ಮುಖ್ಯವಾಗಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡುವ ಮೊದಲು, ಊಟ ಮಾಡಿದ ಬಳಿಕ ಹಾಗೂ ಊಟಕ್ಕೆ ಮುಂಚೆ ಅನೇಕ ಜನರು ಬಿಡುವಿನ ಸಮಯವನ್ನು ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ ಹತ್ತು ನಿಮಿಷಗಳ ಕಾಲ ಬಿಡುವು ಇಟ್ಟುಕೊಂಡು ವ್ಯಾಯಾಮ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ವ್ಯಾಯಾಮ ಮಾಡುವುದರಿಂದಾಗುವ ಪ್ರಯೋಜನ
ಹೃದಯದ ಆರೋಗ್ಯ ಕಾಪಾಡಲು ಸಹಕಾರಿ: ನಿತ್ಯ 10 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿ ಆಮ್ಲಜನಕ ಸಂಚಾರಕ್ಕೆ ಸಹಾಯವಾಗುತ್ತದೆ, ಇದರಿಂದಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

ಒತ್ತಡವನ್ನು ನಿವಾರಣೆ: ನಿತ್ಯ ನಿಯಮಿತವಾಗಿ ಹತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಮನಸ್ಸನ್ನು ಖುಷಿ ಖುಷಿಯಾಗಿಟ್ಟುಕೊಳ್ಳಬಹುದು.

ಮೆದುಳಿನ ಆರೋಗ್ಯ: ನಿತ್ಯ ನಿಮ್ಮ ಅಮೂಲ್ಯ ಸಮಯದ ಒಂದ್ಹತ್ತು ನಿಮಿಷವನ್ನು ವ್ಯಾಯಾಮಕ್ಕೆಂದು ಮೀಸಲಿಡಿ. ಮೆದುಳಿನ ಮೇಲೆ ಸಾಕಷ್ಟು ಪರಿಣಾಮ ಬೀರಿ ಒತ್ತಡ ಕಡಿಮೆ ಮಾಡಲಿದೆ.. ನೆನಪಿನ ಶಕ್ತಿ ಹೆಚ್ಚಳ ಮಾಡಿಕೊಳ್ಳಲು ಇದು ಉಪಯೋಗಕಾರಿ.

ಚರ್ಮದ ಆರೋಗ್ಯ : ನಿತ್ಯ ಹತ್ತು ನಿಮಿಷಗಳ ಕಾಲ ಮೈಕ್ರೋ ವರ್ಕೌಟ್ ಮಾಡುವುದರಿಂದ ಚರ್ಮದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ನಾವು ವ್ಯಾಯಾಮ ಮಾಡಿದಷ್ಟು ನಮ್ಮ ಚರ್ಮದ ಮೇಲಿನ ಹಿಡಿತ ಕಡಿಮೆಯಾಗಿ ಸುಂದರ ತ್ವಚೆ ನಿಮ್ಮದಾಗಲಿದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:59 pm, Thu, 16 June 22