ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 11 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ. ಮಂಡ್ಯ ಜಿಲ್ಲೆಯ 8, ಬೆಳಗಾವಿ ಜಿಲ್ಲೆಯ ಮೂವರಿಗೆ ವೈರಸ್ ಅಟ್ಯಾಕ್ ಆಗಿದೆ.
566ನೇ ಸೋಂಕಿತ ಮಂಡ್ಯದ 25 ವರ್ಷದ ಯುವಕ, 567ನೇ ಸೋಂಕಿತ 27 ವರ್ಷದ ಯುವಕ, 568ನೇ ಸೋಂಕಿತ ಮಂಡ್ಯದ 27 ವರ್ಷದ ಯುವಕನಾಗಿದ್ದಾನೆ. ಈ ಮೂವರಿಗೂ ಮುಂಬೈ, ಮಹಾರಾಷ್ಟ್ರ ಭೇಟಿಯಿಂದ ಸೋಂಕು ತಗುಲಿದೆ. 569ನೇ ಸೋಂಕಿತೆ ಮಂಡ್ಯದ 30 ವರ್ಷದ ಮಹಿಳೆಯಾಗಿದ್ದು, 566, 567, 568ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಅಟ್ಯಾಕ್ ಆಗಿದೆ. 179ನೇ ಸೋಂಕಿತರಿಂದ ಮಂಡ್ಯದ 19 ವರ್ಷದ 570ನೇ ಸೋಂಕಿತ ಯುವಕ, 32 ವರ್ಷದ ಮಹಿಳೆ, 13 ವರ್ಷದ ಬಾಲಕ, 12 ವರ್ಷದ ಬಾಲಕನಿಗೆ ಸೋಂಕು ತಗುಲಿದೆ.
ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ತಗುಲಿದ್ದು, 301ನೇ ಸೋಂಕಿತರ ದ್ವಿತೀಯ ಸಂಪರ್ಕದಿಂದ ಬೆಳಗಾವಿಯ 55 ವರ್ಷದ ವ್ಯಕ್ತಿ, ಬೆಳಗಾವಿಯ 30 ವರ್ಷದ ಮಹಿಳೆ, 576ನೇ ಸೋಂಕಿತ ಬೆಳಗಾವಿಯ 50 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. 574, 575, 576ನೇ ಸೋಂಕಿತರು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಒಂದೇ ಕುಟುಂಬದವರಾಗಿದ್ದಾರೆ.
Published On - 12:44 pm, Fri, 1 May 20