
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 130 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ. ಬೆಳಗ್ಗಿನ ವರದಿಯಲ್ಲಿ 97 ಜನರಿಗೆ ಕೊವಿಡ್ ಅಟ್ಯಾಕ್ ಆಗಿತ್ತು. ಇದೀಗ ಸಂಜೆಯ ವರದಿಯಲ್ಲಿ ಹೊಸದಾಗಿ 33 ಮಂದಿಗೆ ಕೊರೊನಾ ವಕ್ಕರಿಸಿದೆ.
ಚಿಕ್ಕಬಳ್ಳಾಪುರ 27, ಯಾದಗಿರಿ 24, ಉಡುಪಿ 23, ಮಂಡ್ಯ 15, ಹಾಸನ 14, ಕಲಬುರಗಿ 6, ಬೀದರ್ 6, ದಾವಣಗೆರೆ 4, ತುಮಕೂರು, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ತಲಾ 2 ಕೇಸ್, ಬೆಂಗಳೂರು, ದಕ್ಷಿಣ ಕನ್ನಡ, ಧಾರವಾಡ, ಕೊಡಗು, ವಿಜಯಪುರ ಜಿಲ್ಲೆಯಲ್ಲಿ ತಲಾ 1 ಕೊರೊನಾ ಕೇಸ್ ಪತ್ತೆಯಾಗಿದೆ.
2089 ಕೊರೊನಾ ಸೋಂಕಿತರ ಪೈಕಿ 654 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 42 ಕೊರೊನಾ ಸೋಂಕಿತರ ಸಾವಿಗೀಡಾಗಿದ್ದಾರೆ. 1391 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Published On - 5:58 pm, Sun, 24 May 20