ಗುಂಪು ಘರ್ಷಣೆ: ಹಲ್ಲೆ ಮಾಡಿದ್ದವರ ಮನೆ ಮೇಲೆ ದಾಳಿ, ಬೈಕ್-ಟ್ರ್ಯಾಕ್ಟರ್ಗಳಿಗೆ ಬೆಂಕಿ
ಕೋಲಾರ: ಎರಡು ಗುಂಪುಗಳ ನಡುವೆ ಘರ್ಷಣೆ ವೇಳೆ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದವರ ಮನೆಗಳ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇ 20ರಂದು ವಾಟರ್ಮ್ಯಾನ್ ಬಿಲ್ ವಿಚಾರಕ್ಕೆ ಸಂಬಂಧಿಸಿ ವೆಂಕಟ ಕೃಷ್ಣಪ್ಪ ಹಾಗೂ ವೆಂಕಟರೆಡ್ಡಿ ಗುಂಪಿನ ನಡುವೆ ಜಗಳವಾಗಿತ್ತು. ಆಗ ಘರ್ಷಣೆಯಲ್ಲಿ ವೆಂಕಟ ಕೃಷ್ಣಪ್ಪ ಗಂಭೀರ ಗಾಯಗೊಂಡಿದ್ದ. ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಗಾಯಾಳು ವೆಂಕಟ ಕೃಷ್ಣಪ್ಪ ಮೃತಪಟ್ಟಿದ್ದಾರೆ. ಹಾಗಾಗಿ ಮೃತ ವೆಂಕಟ ಕೃಷ್ಣಪ್ಪ […]
ಕೋಲಾರ: ಎರಡು ಗುಂಪುಗಳ ನಡುವೆ ಘರ್ಷಣೆ ವೇಳೆ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದವರ ಮನೆಗಳ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೇ 20ರಂದು ವಾಟರ್ಮ್ಯಾನ್ ಬಿಲ್ ವಿಚಾರಕ್ಕೆ ಸಂಬಂಧಿಸಿ ವೆಂಕಟ ಕೃಷ್ಣಪ್ಪ ಹಾಗೂ ವೆಂಕಟರೆಡ್ಡಿ ಗುಂಪಿನ ನಡುವೆ ಜಗಳವಾಗಿತ್ತು. ಆಗ ಘರ್ಷಣೆಯಲ್ಲಿ ವೆಂಕಟ ಕೃಷ್ಣಪ್ಪ ಗಂಭೀರ ಗಾಯಗೊಂಡಿದ್ದ. ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಗಾಯಾಳು ವೆಂಕಟ ಕೃಷ್ಣಪ್ಪ ಮೃತಪಟ್ಟಿದ್ದಾರೆ.
ಹಾಗಾಗಿ ಮೃತ ವೆಂಕಟ ಕೃಷ್ಣಪ್ಪ ಕಡೆಯವರು ವೆಂಕಟರೆಡ್ಡಿ ಹಾಗೂ ಆತನ ಬೆಂಬಲಿಗರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 10 ಬೈಕ್ ಹಾಗೂ ಎರಡು 2 ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಎಸ್ಪಿ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.