IAS Officer Transfer: 14 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ; ಇಲ್ಲಿದೆ ಪೂರ್ಣ ವಿವರ

ನೂತನ ಕಾಂಗ್ರೆಸ್​ ಸರ್ಕಾರವು ಅಧಿಕಾರ ಸ್ವೀಕರಿಸಿದಂದಿನಿಂದಲೂ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದ್ದು, ಇದೀಗ 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಸಂಜೆ ಆದೇಶಿಸಿದೆ.

IAS Officer Transfer: 14 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ; ಇಲ್ಲಿದೆ ಪೂರ್ಣ ವಿವರ
ಸಾಂದರ್ಭಿಕ ಚಿತ್ರ
Follow us
|

Updated on: Jun 19, 2023 | 8:18 PM

ಬೆಂಗಳೂರು: ನೂತನ ಕಾಂಗ್ರೆಸ್​ ಸರ್ಕಾರವು ಅಧಿಕಾರ ಸ್ವೀಕರಿಸಿದಂದಿನಿಂದಲೂ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದ್ದು, ಇದೀಗ 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ (IAS Officers Transfer) ಮಾಡಿ ಸೋಮವಾರ ಸಂಜೆ ಆದೇಶಿಸಿದೆ. ಈ ಆದೇಶಕ್ಕೂ ಕೆಲವೇ ಕ್ಷಣಗಳ ಮುನ್ನ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ಪ್ರಗತಿ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ಉಸ್ತುವಾರಿ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.

ವರ್ಗಾವಣೆಗೊಂಡಿರುವ 14 ಮಂದಿ ಐಎಎಸ್ ಅಧಿಕಾರಿಗಳ ವಿವರ ಇಲ್ಲಿದೆ.

  • ಜಾವೇದ್ ಅಖ್ತರ್, ಎಸಿಎಸ್, ಆರೋಗ್ಯ ಇಲಾಖೆ (ವೈದ್ಯಕೀಯ ಶಿಕ್ಷಣ)
  • ಬಿ.ಸಿ.ಸತೀಶ್, ಇಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
  • ಡಾ.ಹೆಚ್.ಎನ್.ಗೋಪಾಲಕೃಷ್ಣ, ಜೆಡಿ, ಮುನ್ಸಿಪಲ್ ಡಾಟಾ ಸೊಸೈಟಿ
  • ಡಾ.ಎನ್.ಶಿವಶಂಕರ, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
  • ಅಕ್ರಂ ಪಾಷಾ, ಜಿಲ್ಲಾಧಿಕಾರಿ, ಕೋಲಾರ
  • ಗಂಗೂಬಾಯಿ ರಮೇಶ್ ಮಾನಕರ್, ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯೋಗ
  • ಆರ್‌.ಲತಾ, ಕಾರ್ಯದರ್ಶಿ, ರಾಜ್ಯ ಮಹಿಳಾ ಆಯೋಗ
  • ವೆಂಕಟರಾಜು, ಜಿಲ್ಲಾಧಿಕಾರಿ, ಕೊಡಗು
  • ಫೌಝಿಯಾ ತರನುಮ್, ಜಿಲ್ಲಾಧಿಕಾರಿ, ಕಲಬುರಗಿ
  • ಎನ್.ಎಂ.ನಾಗರಾಜ್, ಯೋಜನಾ ನಿರ್ದೇಶಕ, ಏಡ್ಸ್ ಪ್ರಿವೆನ್ಷನ್ ಸೊಸೈಟಿ
  • ಭನ್ವರ್ ಸಿಂಗ್ ಮೀನಾ, ಸಿಇಒ, ಕಲಬುರಗಿ ಜಿಲ್ಲಾ ಪಂಚಾಯಿತಿ
  • ಜಿ.ಲಿಂಗಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ಕೆಆರ್​ಡಿಸಿಎಲ್
  • ಡಾ.ಗಿರೀಶ್ ದಿಲೀಪ್ ಬಾಡೊಲೆ, ಪರೀಕ್ಷಾ ನಿಯಂತ್ರಕ, ಕೆಪಿಎಸ್​ಸಿ
  • ನೊಂಗ್ಜಾಯ್ ಮೊಹಮ್ಮದ್ ಅಲಿ‌ ಅಕ್ರಂ ಶಾ-ಆಯುಕ್ತ, ಹಂಪಿ‌ ವಿಶ್ವ ಹೆರಿಟೇಜ್ ಏರಿಯಾ ನಿರ್ವಹಣಾ ಪ್ರಾಧಿಕಾರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ