Shakti Yojana: ಶಕ್ತಿ ಯೋಜನೆಗೆ 1 ತಿಂಗಳು, 16 ಕೋಟಿ ಮಹಿಳೆಯರು ಪ್ರಯಾಣ; ಟಿಕೆಟ್​ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ

ಕರ್ನಾಟಕ ಸರ್ಕಾರ "ಶಕ್ತಿ ಯೋಜನೆ" ಅಡಿ ಮಹಿಳೆಯರಿಗೆ ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಈ ಯೋಜನೆ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ಮಹಿಳೆಯರು ರಾಜ್ಯಾದ್ಯಂತ 16.73 ಕೋಟಿ ಉಚಿತವಾಗಿ ಸಂಚರಿಸಿದ್ದಾರೆ.

Shakti Yojana: ಶಕ್ತಿ ಯೋಜನೆಗೆ 1 ತಿಂಗಳು, 16 ಕೋಟಿ ಮಹಿಳೆಯರು ಪ್ರಯಾಣ; ಟಿಕೆಟ್​ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ
ಶಕ್ತಿ ಯೋಜನೆ ಜಾರಿ ಬಳಿಕ ದೇವಾಲಯಗಳತ್ತ ಭಕ್ತರ ಹೊಳೆಯೇ ಹರಿದು ಬರುತ್ತಿದೆ. ಇದ್ರಿಂದ ಮುಜರಾಯಿ ದೇವಾಲಯಗಳ ಹುಂಡಿಗಳು ತುಂಬಿ ತುಳುಕುತ್ತಿದ್ದು, ಬಹುತೇಕ ದೇವಾಲಯಗಳ ಆದಾಯವೂ ದುಪ್ಪಟ್ಟಾಗಿದೆ.

Updated on: Jul 12, 2023 | 8:51 AM

ಬೆಂಗಳೂರು: ಕರ್ನಾಟಕ ಸರ್ಕಾರ “ಶಕ್ತಿ ಯೋಜನೆ” (Shakti Yojana) ಅಡಿ ಮಹಿಳೆಯರಿಗೆ (Women) ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಈ ಯೋಜನೆ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ಮಹಿಳೆಯರು ರಾಜ್ಯಾದ್ಯಂತ 16.73 ಕೋಟಿ ಉಚಿತವಾಗಿ ಸಂಚರಿಸಿದ್ದಾರೆ. ಇದರ ಟಿಕೆಟ್​​ ಬೆಲೆ 401.94 ಕೋಟಿ ರೂ. ಆಗಿದೆ. ಯೋಜನೆಯ ಪ್ರಾರಂಭದ ನಂತರ ಪ್ರತಿದಿನ ಸರಾಸರಿ 55.7 ಲಕ್ಷ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸಾರಿಗೆ ಇಲಾಖೆ ಒದಗಿಸಿದ ಮಾಹಿತಿಯ ಪ್ರಕಾರ, ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು (RTC) ಪ್ರತಿದಿನ 3,147 ಟ್ರಿಪ್‌ಗಳನ್ನು ಹೆಚ್ಚಿಸಿದೆ ಎಂದು ತಿಳಿಸಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಅತಿ ಹೆಚ್ಚು 1,500 ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಿದರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಕನಿಷ್ಠ 238 ಟ್ರಿಪ್‌ಗಳನ್ನು ನಡೆಸಿದೆ. ಸಾರಿಗೆ ಇಲಾಖೆಯು ಇನ್ನೂ 4,000 ಬಸ್‌ಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ ಎಂಬುದನ್ನು ಗಮನಿಸಬೇಕು. ಇತ್ತೀಚಿನ ರಾಜ್ಯ ಬಜೆಟ್‌ನಲ್ಲಿ ಅವುಗಳನ್ನು ಖರೀದಿಸಲು 500 ಕೋಟಿ ರೂ. ಗೂ ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ.

ಇದನ್ನೂ ಓದಿ: Shakti Scheme: ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದ ಸಾರಿಗೆ ನಿಗಮಗಳ ಸರಾಸರಿ ಆದಾಯದಲ್ಲಿ ಹೆಚ್ಚಳ

ಜುಲೈ 4 ರಂದು ಅತಿ ಹೆಚ್ಚು 1.20 ಕೋಟಿ ಸವಾರರು ಪ್ರಯಾಣಿಸಿದ್ದಾರೆ. ಅದರಲ್ಲಿ 70.15 ಲಕ್ಷ ಮಹಿಳಾ ಪ್ರಯಾಣಿಕರು. ಮಹಿಳಾ ಪ್ರಯಾಣಿಕರ ಸರಾಸರಿ ಟಿಕೆಟ್ ಮೌಲ್ಯ 13.40 ಕೋಟಿ ರೂ. ಒಂದು ತಿಂಗಳಲ್ಲಿ ಕೆಎಸ್​ಆರ್​ಟಿಸಿಯಲ್ಲಿ 5.09 ಕೋಟಿ ಮಹಿಳೆಯರು ಸಂಚರಿಸಿದ್ದಾರೆ. ಟಿಕೆಟ್ ಮೌಲ್ಯವನ್ನು 151.25 ಕೋಟಿ ರೂ. ಆಗಿದೆ.

ಸಾರ್ವಜನಿಕರು ಮತ್ತು ವಿಶೇಷವಾಗಿ ಮಹಿಳಾ ಪ್ರಯಾಣಿಕರು ನಮ್ಮ ದೈನಂದಿನ ಬಸ್‌ಗಳಲ್ಲಿ ಪ್ರಯಾಣಿಸುವ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಸರ್ಕಾರಿ ಬಸ್ಸುಗಳು ಕೇವಲ ಸಾರ್ವಜನಿಕರ ಜೀವನಾಡಿಯಾಗಿರದೆ ಮಹಿಳಾ ಪ್ರಯಾಣಿಕರ ಆದ್ಯತೆಯ ಸಾರಿಗೆ ವಿಧಾನವಾಗಿದೆ ಎಂಬುದನ್ನು ಇದು ನಿರೂಪಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ