ಕಣ್ಣೆದುರೇ ನಡೆಯಲಿದೆಯಾ ಕೊರೊನಾ ಡೆಡ್ಲಿ ಜುಲೈ ಆಟ? ನಾವೆಷ್ಟು ಸೇಫ್?
ಬೆಂಗಳೂರು: ಸಮಸ್ತ ಕರುನಾಡೇ ಶಾಕ್ ಆಗುವಂಥಾ ಸಂಗತಿಯನ್ನು ಟಿವಿ9 ಬಿಚ್ಚಿಟ್ಟಿದೆ. ಅದೇ ಜುಲೈ ತಿಂಗಳಲ್ಲಿ ಕೊರೊನಾ ಅನ್ನೋ ಬೇತಾಳ ಬೆನ್ನೇರೋ ಸಾಧ್ಯತೆಯಿದೆ. ರಾಜ್ಯವಷ್ಟೇ ಅಲ್ಲಾ, ಇಡೀ ದೇಶವೇ ಇದರ ಕರಾಳ ಬಾಹುವಲ್ಲಿ ಸಿಲುಕೋ ಭೀತಿಯಲ್ಲಿದೆ. ಮಹಾಮಾರಿ ಕೊರೊನಾ ಅಬ್ಬರಿಸಿ ಬೊಬ್ಬಿರಿದು ಕೊಡುತ್ತಾ ಆಘಾತ?ಇದೇ, ಇದೇ ತಿಂಗಳ ಅಂತ್ಯಕ್ಕೆ ಶುರುವಾಗಲಿದೆಯಾ ಅಸಲಿ ಆಟ? ಎಂಬ ಪ್ರಶ್ನೆಗಳಿಗೆ ಟಿವಿ9 ಅಭಿಯಾನದ ಮೂಲಕ ಉತ್ತರಿಸಿದೆ. ಮಹಾಮಾರಿ ಕೊರೊನಾ ದಿನೇ ದಿನೆ ತನ್ನ ಅಟ್ಟಹಾಸವನ್ನು ಹೆಚ್ಚು ಮಾಡಿದೆ. ವೈದ್ಯರು ಸಹ ಜುಲೈ ತಿಂಗಳಿನಲ್ಲಿ […]
ಬೆಂಗಳೂರು: ಸಮಸ್ತ ಕರುನಾಡೇ ಶಾಕ್ ಆಗುವಂಥಾ ಸಂಗತಿಯನ್ನು ಟಿವಿ9 ಬಿಚ್ಚಿಟ್ಟಿದೆ. ಅದೇ ಜುಲೈ ತಿಂಗಳಲ್ಲಿ ಕೊರೊನಾ ಅನ್ನೋ ಬೇತಾಳ ಬೆನ್ನೇರೋ ಸಾಧ್ಯತೆಯಿದೆ. ರಾಜ್ಯವಷ್ಟೇ ಅಲ್ಲಾ, ಇಡೀ ದೇಶವೇ ಇದರ ಕರಾಳ ಬಾಹುವಲ್ಲಿ ಸಿಲುಕೋ ಭೀತಿಯಲ್ಲಿದೆ. ಮಹಾಮಾರಿ ಕೊರೊನಾ ಅಬ್ಬರಿಸಿ ಬೊಬ್ಬಿರಿದು ಕೊಡುತ್ತಾ ಆಘಾತ?ಇದೇ, ಇದೇ ತಿಂಗಳ ಅಂತ್ಯಕ್ಕೆ ಶುರುವಾಗಲಿದೆಯಾ ಅಸಲಿ ಆಟ? ಎಂಬ ಪ್ರಶ್ನೆಗಳಿಗೆ ಟಿವಿ9 ಅಭಿಯಾನದ ಮೂಲಕ ಉತ್ತರಿಸಿದೆ.
ಮಹಾಮಾರಿ ಕೊರೊನಾ ದಿನೇ ದಿನೆ ತನ್ನ ಅಟ್ಟಹಾಸವನ್ನು ಹೆಚ್ಚು ಮಾಡಿದೆ. ವೈದ್ಯರು ಸಹ ಜುಲೈ ತಿಂಗಳಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸರ್ಕಾರ ಸಹ ಲಾಕ್ಡೌನ್ ಫ್ರೀ ಮಾಡಿ ಕೂತಿದೆ. ಇದರ ಪರಿಣಾಮ ದೇಶದಲ್ಲಿ ಸೋಂಕಿ ಮತ್ತಷ್ಟು ಬಲಶಾಲಿಯಾಗುತ್ತಿದೆ. ಈ ಮಧ್ಯೆ ಗಮನಿಸೋದಾದ್ರೆ ಕೊರೊನಾ ಇನ್ನಷ್ಟು ಸ್ಪೀಡಾಗಿ ಜನರ ದೇಹ ಸೇರುತ್ತಿದೆ.
ಜುಲೈ ತಿಂಗಳ ಅಂತ್ಯಕ್ಕೆ 20ಸಾವಿರ ಸೋಂಕಿತರು ಏಪ್ರಿಲ್ 15ರವರೆಗೆ ರಾಜ್ಯದಲ್ಲಿ ಒಟ್ಟು 279 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಆದ್ರೆ ಏಪ್ರಿಲ್ 30ರ ವೇಳೆಗೆ 565 ಕೇಸ್ ಮೂಲಕ ಸೋಂಕಿತ ಸಂಖ್ಯೆ ಡಬಲ್ ಆಗಿದೆ. ಕೇವಲ 15 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇನ್ನು ಮೇ 15ರವರೆಗೆ 1,056 ಕೊರೊನಾ ಸೋಂಕಿತರು ಪತ್ತೆಯಾಗಿದ್ರು. ಮೇ 30ರವರೆಗೆ ಮತ್ತೆ ರಾಜ್ಯ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಮೇ 30ರ ವೇಳೆಗೆ ರಾಜ್ಯದಲ್ಲಿ 2,922 ಜನರಿಗೆ ಡೆಡ್ಲಿ ವೈರಸ್ ಅಟ್ಯಾಕ್ ಮಾಡಿದೆ. ಜೂನ್ 11ರವರೆಗೆ ಅಂದ್ರೆ ನಿನ್ನೆವರೆಗೆ ಕೊರೊನಾ ಸೋಂಕಿತರ ಸಂಖ್ಯೆ 6245 ಆಗಿದೆ.
ಮುಂದಿನ 15 ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಜೂನ್ ಅಂತ್ಯದ ವೇಳೆ 10 ಸಾವಿರದ ಗಡಿ ದಾಟಲಿದೆ. ಜುಲೈ ತಿಂಗಳ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 20 ಸಾವಿರ ದಾಟಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
Published On - 9:38 am, Fri, 12 June 20