ಹುಬ್ಬಳ್ಳಿ: ಆ ಅವಳಿ ನಗರದಲ್ಲಿ ಸದ್ಯ ನೀರಿನ ಬಿಲ್ ವಿಚಾರದಲ್ಲೂ ರಾಜಕೀಯ ಕೆಸರೆರೆಚಾಟ ಶುರುವಾಗಿದೆ. ಶಾಸಕರು, ಸಚಿವರ ಮನಗೆ ಮತ್ತಿಗೆ ಹಾಕುತ್ತಿರೊ ಕೈ ನಾಯಕರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದೆ. ಯೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಇದೀಗ 50 ಕೋಟಿ ಇದ್ದ ನೀರಿನ ಬಿಲ್ 200ಕೋಟಿ ರೂಪಾಯಿಯಾಗಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಜನರು ನೀರಿನ ಬಿಲ್ ಮೂಲಕ ಕಟ್ಟಬೇಕಿದೆ. 2015 ರಿಂದ ಇಲ್ಲಿಯವರೆಗೆ 50 ಕೋಟಿ ಇದ್ದ ಬಾಕಿ ಹಣಕ್ಕೆ 150 ಕೋಟಿ ರೂಪಾಯಿ ಬಡ್ಡಿಯಾಗಿದೆ.
ಹೀಗಾಗಿ ಕಾಂಗ್ರೆಸ್ ಈ ಕರಬಾಕಿ ಹಣವನ್ನ ಇದೆೇ ಬಜೆಟ್ ಅಧಿವೇಶನದಲ್ಲಿ ಮನ್ನಾ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಅಲ್ಲದೆ ಜಲಮಂಡಳಿಯನ್ನ ಎಲ್ ಆಂಡ್ ಟಿ ಗೆ ಕೊಟ್ಟು ಜನರಿಗೆ ಮತ್ತಷ್ಟು ಹೊರೆ ಮಾಡಲಿದೆ ಅಂತ ಆರೋಪಿಸಿದ್ದಾರೆ. ಹೀಗಾಗೆೇ ಶಾಸಕರು ಹಾಗೂ ಸಚಿವರ ಮನೆಗಳಿಗೆ ಮುತ್ತಿಗೆ ಹಾಕಿ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
3 ತಿಂಗಳಿಗೊಮ್ಮೆ ಬಿಲ್ ನೀಡಿದ್ದೇ ಇಷ್ಟೊಂದು ಹಣ ಬಾಕಿ ಇರಲು ಕಾರಣ..
ಇನ್ನು ಅವಳಿ ನಗರದಲ್ಲಿ 1 ಲಕ್ಷ 42 ಸಾವಿರ ನಳಗಳಿದ್ದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿ ವಾರ್ಡ್ ಗೆ 6 ಕೋಟಿಯಿಂದ 15 ಕೋಟಿಯವರೆಗೆ ನೀರಿನ ಬಿಲ್ ಬಾಕಿ ಇದೆ. 2015 ರಿಂದ ಜನರಿಗೆ ಬಿಲ್ ಕೊಡುವಾಗ ಸರಿಯಾಗಿ ನೀಡದೆ 3 ತಿಂಗಳಿಗೊಮ್ಮೆ ಬಿಲ್ ನೀಡಿದ್ದೇ ಇಷ್ಟೊಂದು ಹಣ ಬಾಕಿ ಇರಲು ಕಾರಣ ಅಂತ ಕಾಂಗ್ರೆಸ್ ಆರೋಪಿಸಿದೆ. ಆದ್ರೆ ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲೇ ಪಾಲಿಕೆ ನಿರ್ಲಕ್ಷ ಮಾಡಿದೆ. ಅಲ್ಲದೆ ಪಾಲಿಕೆ ಚುನಾವಣೆ ಮುಂದೆ ಹೋಗೋದಕ್ಕೂ ಕಾಂಗ್ರೆಸ್ ಕಾರಣ ಅಂತ ಆರೋಪಿಸುತ್ತಿದೆ.
ಪಾಲಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಈ ಮಧ್ಯೆ ಜಲಮಂಡಳಿಯನ್ನೆ ಖಾಸಗಿಯವರಿಗೆ ನೀಡೋ ಪ್ರಸ್ತಾಪ ಕೂಡಾ ಮುನ್ನಲೆಗೆ ಬಂದಿದೆ. ಅದೇನೆ ಇರ್ಲಿ ಆದಷ್ಟು ಬೇಗ ಈ ಸಮಸ್ಯೆಯನ್ನ ಸಂಬಂಧ ಪಟ್ಟವರು ಬಗೆಹರಿಸಬೇಕಿದೆ.
ಇದನ್ನೂ ಓದಿ:ಧಾರವಾಡದಲ್ಲಿ ಗಡ್ಡೆ ಗೆಣಸು ಮೇಳ: ಜನರಿಗೆ ಹೊಸ ಲೋಕ ಪರಿಚಯ
Published On - 7:20 am, Fri, 5 March 21