ಸರ್ಕಾರಿ ಬಸ್​ಗಳಲ್ಲಿ 2000 ರೂ. ನೋಟಿಗೆ ನಿಷೇಧ: ಕಂಡಕ್ಟರ್​ಗಳಿಗೆ ಸಾರಿಗೆ ಸಂಸ್ಥೆ ಮಹತ್ವದ ಸೂಚನೆ

ಸರ್ಕಾರಿ ಬಸ್​ಗಳ ನಿರ್ವಾಹಕರು ಇನ್ಮುಂದೆ ಪ್ರಯಾಣಿಕರಿಂದ 2000 ರೂ. ಮುಖಬೆಲೆಯ ನೋಟುಗಳನ್ನು ಪಡೆಯಬಾರದೆಂದು ಕೆಎಸ್​ಆರ್​ಟಿಸಿ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ಬಸ್​ಗಳಲ್ಲಿ 2000 ರೂ. ನೋಟಿಗೆ ನಿಷೇಧ: ಕಂಡಕ್ಟರ್​ಗಳಿಗೆ ಸಾರಿಗೆ ಸಂಸ್ಥೆ ಮಹತ್ವದ ಸೂಚನೆ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:May 28, 2023 | 10:38 AM

ಬೆಂಗಳೂರು: 2000 ರೂ. ಮುಖಬೆಲೆಯ ನೋಟುಗಳನ್ನು ರಿಸರ್ವ್​​ ಬ್ಯಾಂಕ್​ ಆಫ್​ ಇಂಡಿಯಾ (RBI) ವಾಪಸ್​ ಪಡೆದ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್​ಗಳಲ್ಲಿ 2000 ರೂ. ನೋಟುಗಳನ್ನು ನಿರ್ವಾಹಕರು ಪ್ರಯಾಣಿಕರಿಂದ ಪಡೆಯಬಾರದೆಂದು ಸಾರಿಗೆ ಸಂಸ್ಥೆ ಸೂಚನೆ ನೀಡಿದೆ. ನಿರ್ವಾಹಕರು ಪ್ರಯಾಣಿಕರು ನೀಡುವ 2000 ರೂ. ಪಡೆಯಬಾರದು. ಜೊತೆಗೆ ಸಾರಿಗೆ ಘಟಕದ ನಿಗಮ, ಶಾಖೆಗಳಲ್ಲಿ 2000 ರೂ. ನೀಡಬಾರದು. ಪ್ರಯಾಣಿಕರು ಬ್ಯಾಂಕ್​ನಲ್ಲೇ ನೋಟುಗಳನ್ನು ಬದಲಿಸಿಕೊಳ್ಳಬೇಕೆಂದು ಸಾರಿಗೆ ಇಲಾಖೆ, ನಿರ್ವಾಹಕರು ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಸೂಚಿಸಿದೆ.

2000 ರೂ. ನೋಟು ಬದಲಾವಣೆ ಪ್ರಕ್ರಿಯೆ ಹೇಗೆ? ಇಲ್ಲಿದೆ ವಿವರ

ಮೇ 23ರಿಂದ ಸೆಪ್ಟೆಂಬರ್ 30ರ ಒಳಗೆ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿ ನೀಡುವಂತೆ ಆರ್‌ಬಿಐ ಆದೇಶ ಹೊರಡಿಸಿತ್ತು. 2000 ರೂ. ಮುಖಬೆಲೆಯ ನೋಟುಗಳನ್ನು ಹೇಗೆ ವಾಪಾಸ್ ಮಾಡಬೇಕು ಎನ್ನುವುದಕ್ಕೆ ಈಗಾಗಲೇ ಆರ್‌ಬಿಐ ಕ್ಲಾರಿಟಿ ನೀಡಿತ್ತು. ನೋಟು ವಾಪಾಸ್ ಕೊಡಲು ಅರ್ಜಿಯನ್ನೂ ಕೂಡಾ ಬಿಡುಗಡೆ ಮಾಡಿತ್ತು. ಅಷ್ಟಕ್ಕೂ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು..? ಪ್ರಕ್ರಿಯೆ ಹೇಗೆ ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: 2016ರಲ್ಲಿ ಬ್ಯಾನ್ ಆಗಿದ್ದ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್​ಬಿಐ ಹೇಳುವುದೇನು?

2000 ರೂ. ನೋಟು ಬದಲಾವಣೆ ಹೇಗೆ?

ನೋಟು ಬದಲಾವಣೆಗೆ ಆರ್‌ಬಿಐ ಅರ್ಜಿ ಬಿಡುಗಡೆ ಮಾಡಿದ್ದು, ಬ್ಯಾಂಕ್‌ನಲ್ಲೇ ಈ ಎಕ್ಸ್‌ಚೇಂಜ್‌ ಅರ್ಜಿ ಸಿಗಲಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅರ್ಜಿ ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ 2000 ರೂ ಮುಖ ಬೆಲೆಯ ನೋಟು ಬದಲಿಸಿಕೊಳ್ಳಬಹುದಾಗಿದೆ. ಈ ಅರ್ಜಿಯು ನೋಟು ಬದಲಾವಣೆ ಮಾಡುವವರಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಹಕರು ತಮ್ಮ ಬಳಿ 2000 ರೂ ನೋಟುಗಳಿದ್ದರೆ ಆಯಾ ಬ್ಯಾಂಕ್ ಶಾಖೆಗಳಿಗೆ ತೆರಳಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ವಿಷಯ ಅಂದ್ರೆ 2000 ರೂಪಾಯಿಗೆ ಬದಲಾಗಿ ಹಣವನ್ನ ತಮ್ಮ ಖಾತೆಗೆ ಜಮೆ ಮಾಡಲು ಅರ್ಜಿ ಬೇಕಿಲ್ಲ. ಖಾತೆದಾರರು ತಮ್ಮ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಕೊಳ್ಳಲು ಇದು ಅನ್ವಯಿಸುವುದಿಲ್ಲ. ಅವರು ಎಂದಿನಂತೆ ತಮ್ಮ ಬ್ಯಾಂಕಿನ ಚಲನ್‌ನಲ್ಲಿ 2000 ರೂ. ನೋಟಿನ ವಿವರ ಬರೆದು ಜಮೆ ಮಾಡಿಕೊಳ್ಳಬಹುದಾಗಿದೆ.

ಇನ್ನು 2000 ರೂ ನೋಟುಗಳನ್ನು ಬದಲಾಯಿಸಲು ಆಧಾರ್‌ ಕಾರ್ಡ್‌ ಮುಂತಾದ ದಾಖಲೆಗಳನ್ನು ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಪಷ್ಟನೆ ನೀಡಿದ್ದು, ಯಾವುದೇ ದಾಖಲೆ ಬೇಡ ಎಂದಿದೆ. ಅಷ್ಟೇ ಅಲ್ಲ ಬ್ಯಾಂಕ್‌ನಲ್ಲಿ ಖಾತೆ ಇಲ್ಲದಿದ್ರೂ ನೋಟು ಬದಲಾವಣೆ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ಹೇಳಿದೆ.

ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್‌ (RBI), ನೋಟು ರದ್ದತಿ ಪ್ರಕಟಿಸಿತ್ತು. ಅಲ್ಲದೆ, ತಕ್ಷಣದಿಂದಲೇ 2000 ರೂ. ನೋಟುಗಳ ಬದಲು ಬೇರೆ ನೋಟುಗಳನ್ನು ಜನರಿಗೆ ವಿತರಿಸಲು ಇಲ್ಲವೇ, ಅದನ್ನು ಖಾತೆದಾರರ ಖಾತೆಗೆ ಠೇವಣಿಯಾಗಿ ಜಮೆ ಮಾಡಿಸಿಕೊಳ್ಳಲು ಸೂಚನೆ ನೀಡಿತ್ತು. ಇದಕ್ಕೆ ಸೆ.30ರ ಗಡುವು ವಿಧಿಸಿತ್ತು.

Published On - 10:34 am, Sun, 28 May 23