ಬೆಂಗಳೂರು: ಮೊದಲ ಬಾರಿ ಪಿಯು ಪರೀಕ್ಷೆ ಎದುರಿಸುತ್ತಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲಾಗಿದೆ. ಆದರೆ, ರಿಪೀಟರ್ಸ್‌ಗೆ ಮಾತ್ರ ಪಿಯು ಪರೀಕ್ಷೆ ನಡೆಸುತ್ತಿರುವುದು ಏಕೆ? ಎಂದು ಪ್ರಶ್ನಿಸಿ ಪಿಯು ರಿಪೀಟರ್ಸ್ ವಿದ್ಯಾರ್ಥಿಗಳು ಹೈಕೋರ್ಟ್ನ ಮೊರೆ ಹೋಗಿದ್ದಾರೆ. ಶಿಕ್ಷಣ ಇಲಾಖೆ ತಾರತಮ್ಯ ಅನುಸರಿಸುತ್ತಿದೆ ಎಂದು ದೂರಿರುವ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದ ಶಿಕ್ಷಣ ಇಲಾಖೆಯ ನಿರ್ಧಾರ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದಂತಾಗಿದೆ.
ರಿಪೀಟರ್ಸ್‌ಗೆ ದ್ವಿತೀಯ ಪಿಯು ಪರೀಕ್ಷೆಗೆ ವಿರೋಧಿಸಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ರಿಪೀಟರ್ಸ್ ಆಕ್ರೋಶ ಹೊರ ಹಾಕಿದ್ದಾರೆ. ನಮಗೊಂದು ನ್ಯಾಯ, ಫ್ರೆಶರ್ಸ್‌ಗೊಂದು ನ್ಯಾಯಾನಾ? ಎಲ್ಲರದ್ದೂ ಜೀವವೇ ಅಲ್ಲವಾ ಶಿಕ್ಷಣ ಸಚಿವರೇ? ಕೊರೊನಾ ಇದ್ದರೂ ಕಳೆದ ವರ್ಷ ಪರೀಕ್ಷೆ ಬರೆದಿದ್ದೇವೆ. ಒಂದೋ ಎರಡೋ ವಿಷಯಗಳು ಪಾಸ್ ಆಗಿಲ್ಲ. ಹಾಗಂತ ಪರೀಕ್ಷೆ ಮಾಡಿ ನಮ್ಮ ಪ್ರಾಣ ತೆಗೆಯಬೇಡಿ ಎಂದು ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
18 ವರ್ಷದವರು ಮಾತ್ರ ನಿಮಗೆ ವೋಟ್ ಹಾಕುತ್ತಾರಾ? ಫಸ್ಟ್ ಟೈಂ ವೋಟರ್ಸ್ ಟ್ರ್ಯಾಕ್ ಮಾಡಲು ಈ ನಿರ್ಧಾರ ಹೀಗಾಗಿ ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿದ್ದೀರಾ? ಮನೆಯಲ್ಲಿ ವಯಸ್ಸಾದವರು ಇರ್ತಾರೆ, ಮನೆ ಮನೆಗೆ ಕೊರೊನಾ ಹಬ್ಬುವಂತೆ ಮಾಡ್ಬೇಡಿ. ವ್ಯಾಕ್ಸಿನ್ ಇಲ್ಲ ನಿಮ್ಗೂ ಗೊತ್ತು, ಆದ್ರೂ ಈಗ ಪರೀಕ್ಷೆ ಯಾಕೆ ಬೇಕು? ಪ್ರಾಣ ಹೋದ್ರೆ ನೀವು ಜವಾಬ್ದಾರಿ ಹೊತ್ತಿಕೊಳ್ತೀರಾ ಸಾರ್? ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಸರ್ಕಾರದ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ಗರಂ ಆಗಿದ್ದಾರೆ.
ರಿಪೀಟರ್ಸ್‌ಗೆ ಮಾತ್ರ ಎಕ್ಸಾಂ
ದ್ವಿತೀಯ ಪಿಯುಸಿ ಫ್ರೆಶರ್ಸ್ಗೊಂದು ನ್ಯಾಯ, ರಿಪೀಟರ್ಸ್ಗೆ ಒಂದು ನ್ಯಾಯವಾಗಿದೆ. ಸರ್ಕಾರದ ನಿರ್ಧಾರದಿಂದ ದ್ವಿತೀಯ ಪಿಯುಸಿ ರಿಪೀಟರ್ಸ್ಗೆ ಟೆನ್ಷನ್ ಶುರುವಾಗಿದೆ. ದ್ವಿತೀಯ ಪಿಯುಸಿ ಫ್ರೆಶರ್ಸ್ಗೆ ಪರೀಕ್ಷೆ ರದ್ದಾದ್ರೆ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯೋಕೆ ರೆಡಿಯಾಗಬೇಕಿದೆ. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ರಿಪೀಟರ್ಸ್ಗೆ ಜುಲೈ ಕೊನೆಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪುನರಾವರ್ತಿತ ಪರೀಕ್ಷೆ ನಡೆಯಲಿದೆ. ಕೊರೊನಾ 3ನೇ ಅಲೆ ಆಗಸ್ಟ್, ಸೆಪ್ಟೆಂಬರ್ನಲ್ಲಿ ಬರುವ ಸಾಧ್ಯತೆ ಇದ್ರೂ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಮುಂದಾಗಿದೆ. 93 ಸಾವಿರ ವಿದ್ಯಾರ್ಥಿಗಳ ಜೀವದ ಜೊತೆ ಪಿಯು ಬೋರ್ಡ್ ಚೆಲ್ಲಾಟವಾಡುತ್ತಿದೆ. ಈ ವರ್ಷ 76,387 ಪುನರಾವರ್ತಿತ ಹಾಗೂ 17,477 ಖಾಸಗಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯು ಪರೀಕ್ಷೆಗೆ ನೊಂದಣಿ ಮಾಡಲಾಗಿದೆ. ಸೋಂಕು ಹೆಚ್ಚಾದ್ರೆ ಪರೀಕ್ಷೆ ಹೇಗೆ ನಡೆಸಬೇಕು ಎಂಬ ಬಗ್ಗೆ ಪಿಯು ಬೋರ್ಡ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಕೊವಿಡ್ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುವುದನ್ನು ನಿಲ್ಲಿಸಿ: ಸುಪ್ರೀಂಕೋರ್ಟ್
(2nd PU Exams Repeaters students submitted PIL to Karnataka High Court to question exams)
Published On - 5:33 pm, Tue, 8 June 21