Kirik Party: ನಾಯಿ ಜೊತೆ ಬೈಕ್‌ನಲ್ಲಿ ಯುವತಿ ಜಾಲಿ ರೈಡ್; ಮೈಸೂರಲ್ಲಿ ವಾಹನ ತಪಾಸಣೆ ವೇಳೆ ಹೈಡ್ರಾಮಾ: ವಿಡಿಯೋ ನೋಡಿ
ಕುಂಟು ನೆಪ ಹೇಳಿ ಬೈಕ್‌ನಲ್ಲಿ ಸಂಚರಿಸುತಿದ್ದ ಯುವತಿ ಅಬ್ಬರಿಸಿದ್ದಾಳೆ. ಅಕ್ಷರಶಃ ಪೊಲೀಸರೊಡನೆ ಕಿತ್ತಾಟಕ್ಕೆ ಇಳಿದಿದ್ದಾಳೆ. ಇಲ್ಲದ-ಸಲ್ಲದ ರೂಲ್ಸ್ ರೆಗ್ಯುಲೇಶನ್ಸ್ ಅಂತಾ ಮಾತನಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮೈಸೂರಿನ ವಿ.ವಿ. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೈಸೂರು: ಕೋವಿಡ್ ಲಾಕ್ಡೌನ್ ಮಾರ್ಗಸೂಚಿ ಕಟ್ಟುನಿಟ್ಟಾಗಿರುವಾಗ ಅದನ್ನು ಬ್ರೇಕ್ ಮಾಡಿ, ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿ ಜಮ್ಮಂತಾ ಕೆಲ ಜನ ಆಗಾಗ ಸುತ್ತಾಡ್ತಾರೆ. ಅವರಿಗೆ ಲಂಗುಲಗಾಮು ಇರೋಲ್ಲ. ಇಂದು ಬೆಳಗ್ಗೆ ಮೈಸೂರಿನಲ್ಲಿಯೂ ವಾಹನ ತಪಾಸಣೆ ವೇಳೆ ಒಬ್ಬ ಯುವತಿ ಹೈಡ್ರಾಮಾ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವಾಲ್ಮೀಕಿ ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಯುವತಿ ಪೊಲೀಸರ ಜೊತೆ ತಗಲಾಕಿಕೊಂಡು ಗಲಾಟೆ ಮಾಡಿಕೊಂಡಿದ್ದಾಳೆ.
ಬೆಳಗ್ಗೆ 10 ಗಂಟೆ ಬಳಿಕ ನಾಯಿ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಯು ಯುವಕರೇ ನಾಚುವಂತೆ ಪೊಲೀಸರಿಂದ ಪರಾರಿ ಆಗಲು ಭಾರೀ ಯತ್ನ ನಡೆಸಿದ್ದಾಳೆ. ಮಹಿಳಾ ಪೊಲೀಸ್ ಅಧಿಕಾರಿಗಳು ಶಾಂತವಾಗಿ ವರ್ತಿಸಿದರೂ ಯುವತಿ ರಂಪಾಟ ಜೋರಾಗಿಯೇ ಸಾಗಿದೆ.
ಕುಂಟು ನೆಪ ಹೇಳಿ ಬೈಕ್‌ನಲ್ಲಿ ಸಂಚರಿಸುತಿದ್ದ ಯುವತಿ ಅಬ್ಬರಿಸಿದ್ದಾಳೆ. ಅಕ್ಷರಶಃ ಪೊಲೀಸರೊಡನೆ ಕಿತ್ತಾಟಕ್ಕೆ ಇಳಿದಿದ್ದಾಳೆ. ಇಲ್ಲದ-ಸಲ್ಲದ ರೂಲ್ಸ್ ರೆಗ್ಯುಲೇಶನ್ಸ್ ಅಂತಾ ಮಾತನಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಬೈಕ್ ನಲ್ಲಿ ನಾಯಿ ಜೊತೆ ಬಂದಿದ್ದ ಯುವತಿ ವಾಹನ ತಪಾಸಣೆ ಕಾರ್ಯಕ್ಕೂ ಅಡ್ಡಿ ಪಡಿಸಿದ್ದಾಳೆ. ಮೈಸೂರಿನ ವಿ.ವಿ. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
(woman riding bike with dog breaking covid guidelines make kirik with police in mysore)
ಇದನ್ನೂ ಓದಿ:
Published On - 4:47 pm, Tue, 8 June 21