ಮಂಡ್ಯದ KRS ಹಿನ್ನೀರಿನಲ್ಲಿ ಮೈಸೂರು ಪೊಲೀಸರ ಮಸ್ತ್​ ಪಿಕ್‌ನಿಕ್ ಪಾರ್ಟಿ: ನಮಗಿಲ್ಲದ ಅವಕಾಶ ಅವರಿಗ್ಯಾಕೆ? ಎಂದ ಸಾರ್ವಜನಿಕರು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಹಿನ್ನೀರಿನಲ್ಲಿ ಪೊಲೀಸರು ಮಸ್ತ್​ ಪಿಕ್‌ನಿಕ್ ಪಾರ್ಟಿ ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ನಿಷೇಧವಿರುವ ಪ್ರದೇಶದಲ್ಲಿ ಮೈಸೂರು ಪೊಲೀಸರ ಪಿಕ್‌ನಿಕ್​ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಮಂಡ್ಯದ KRS ಹಿನ್ನೀರಿನಲ್ಲಿ ಮೈಸೂರು ಪೊಲೀಸರ ಮಸ್ತ್​ ಪಿಕ್‌ನಿಕ್ ಪಾರ್ಟಿ: ನಮಗಿಲ್ಲದ ಅವಕಾಶ ಅವರಿಗ್ಯಾಕೆ? ಎಂದ ಸಾರ್ವಜನಿಕರು
ಕೆಆರ್​ಎಸ್​ ಹಿನ್ನೀರಿನಲ್ಲಿ ಮೈಸೂರು ಪೊಲೀಸರ ಮಸ್ತ್​ ಪಿಕ್‌ನಿಕ್ ಪಾರ್ಟಿ

ಮಂಡ್ಯ: KRS ಅಣೆಕಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶ ಅತೀ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದ್ದು, ಈ ಜಾಗಗಳಲ್ಲಿ ಸಾರ್ವಜನಿಕರು ಸುಳಿಯದಂತೆ ನಿಷೇಧ ಹೇರಲಾಗಿದೆ. ಆದರೆ ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದ ಪೊಲೀಸರೇ ಬೇಜವಾಬ್ದಾರಿ ತೋರುತ್ತಿರುವುದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಹಿನ್ನೀರಿನಲ್ಲಿ ಪೊಲೀಸರು ಮಸ್ತ್​ ಪಿಕ್‌ನಿಕ್ ಪಾರ್ಟಿ ಆಯೋಜಿಸಿದ್ದು, ಸಾರ್ವಜನಿಕರಿಗೆ ನಿಷೇಧವಿರುವ ಪ್ರದೇಶದಲ್ಲಿ ಮೈಸೂರು ಪೊಲೀಸರ ಪಿಕ್‌ನಿಕ್​ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮೈಸೂರಿನ ಪೊಲೀಸ್ ಅಕಾಡೆಮಿ ಸಿಬ್ಬಂದಿ ಕೆಆರ್‌ಎಸ್ ಹಿನ್ನೀರಿಗೆ ಪಿಕ್‌ನಿಕ್ ಬಂದಿದ್ದು, ಕೆಆರ್‌ಎಸ್ ಹಿನ್ನೀರಿನಲ್ಲಿ ಪೊಲೀಸರು ಹಾಗೂ ಅವರ ಕುಟುಂಬ ಈಜಾಡುತ್ತ ಕಾಲಕಳೆಯುತ್ತಿದ್ದಾರೆ. ಜೊತೆಗೆ ಪೊಲೀಸರು ಶಾಮಿಯಾನ ಹಾಕಿ ಡಿಜೆ  ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.


ನಮಗೆ ರೆಸಾರ್ಟ್‌ಗೆ ಹೋಗಲು ಆಗಲ್ಲ..
ಈ ಬಗ್ಗೆ ಪೊಲೀಸರನ್ನು ಕೇಳಿದರೆ ನಮಗೆ ರೆಸಾರ್ಟ್‌ಗೆ ಹೋಗಲು ಆಗಲ್ಲ. ಅದಕ್ಕೆ ನಾವು ಇಲ್ಲಿ ಬಂದಿದ್ದೇವೆ ಎನ್ನುತ್ತಿದ್ದಾರೆ. ಮೈಸೂರು ಪೊಲೀಸ್ ಅಕಾಡೆಮಿ ನಿರ್ದೇಶಕಿ ಸುಮನ್‌ ನೇತೃತ್ವದಲ್ಲಿ 150 ಜನ ಬಂದಿದ್ದಾರೆ. KRS ಹಿನ್ನೀರು ನಿರ್ಭಂದಿತ ಪ್ರದೇಶವಾಗಿದ್ದು, ಸ್ಥಳೀಯರು ಸೇರಿದಂತೆ ಯಾರೊಬ್ಬರೂ ಸುಳಿಯುವ ಹಾಗಿಲ್ಲ. ಹಾಗಿದ್ರೂ 150 ಜನ ತಮ್ಮ ಕುಟುಂಬಸ್ಥರ ಜೊತೆ ಹಿನ್ನೀರಿನಲ್ಲಿ ಟೈಂ ಪಾಸ್ ಮಾಡುತ್ತಿರುವುದು ಸಾರ್ವಜನಿಕರನ್ನು ಕೆರಳಿಸಿದೆ.

ಇಂದು ಒಂದೇ ದಿನ ಈ ರೀತಿ ಪೊಲೀಸರ ಅತಿರೇಕದ ಎರಡು ಘಟನೆಗಳು ನಡೆದಿದ್ದು, ಇಂದು ಬೆಳ್ಳಿಗೆ ಕೆಆರ್‌ಎಸ್ ಡ್ಯಾಂ ಮೇಲೆ ಜೀಪ್​ ಚಲಾಯಿಸಿ ಯುವಕನೊಬ್ಬ ಅಂಧಾದರ್ಬಾರ್ ನಡೆಸಿರುವುದು ಬೆಳಕಿಗೆ ಬಂದಿತ್ತು. ಬೇಸರದ ಸಂಗತಿಯೆಂದರೆ ಆ ಜೀಪ್​ ಪೊಲೀಸ್ ವಾಹನವಾಗಿದ್ದು, ಯುವಕನೇ ಆ ಪೊಲೀಸ್​ ವಾಹನ ಚಲಾಯಿಸಿದ್ದಾನೆ. ಮತ್ತು ಆ ವಾಹನದ ನಿರ್ವಹಣೆ ಹೊತ್ತಿದ್ದ ಪೊಲೀಸ್​ ಅಧಿಕಾರಿ ಆ ಯುವಕನ ಪಕ್ಕದಲ್ಲೇ ಕುಳಿತಿದ್ದು, ಇಡೀ ಪ್ರಯಾಣದುದ್ದಕ್ಕೂ ಮೂಕ ಪ್ರೇಕ್ಷಕರಾಗಿದ್ದಾರೆ.

ಇದನ್ನೂ ಓದಿ: KRS Dam ಮೇಲೆ ಯುವಕನ ಖಾಸಗಿ ದರ್ಬಾರ್! ಡ್ಯಾಂ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಮೊಬೈಲ್ ನಲ್ಲಿ ಚಿತ್ರೀಕರಣ!

Click on your DTH Provider to Add TV9 Kannada