ತುಮಕೂರು: ಪರೀಕ್ಷೆ ನಡೆಸದೆ ಪಾಸ್ ಮಾಡಿದ್ದಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಸಂಭ್ರಮಾಚರಣೆ; ವಿಡಿಯೋ ವೈರಲ್

ಪರೀಕ್ಷೆ ನಡೆಸದೆ ಪಾಸ್ ಮಾಡಿದ್ದಾರೆ ಎಂದು ತುಮಕೂರು ಜಿಲ್ಲೆಯ ತಿಪಟೂರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎದುರು ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಕಾಲೇಜು ಗೇಟಿನ ಎದುರು ಬೂದುಗುಂಬಳ ಕಾಯಿ ಮತ್ತು ತೆಂಗಿನ ಕಾಯಿ ಒಡೆದಿದ್ದಾರೆ.

ತುಮಕೂರು: ಪರೀಕ್ಷೆ ನಡೆಸದೆ ಪಾಸ್ ಮಾಡಿದ್ದಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಸಂಭ್ರಮಾಚರಣೆ; ವಿಡಿಯೋ ವೈರಲ್
ಕಾಲೇಜಿನ ಗೇಟ್ ಮುಂದೆ ಬೂದುಗುಂಬಳ ಒಡೆಯುತ್ತಿರುವ ವಿದ್ಯಾರ್ಥಿಗಳು
Updated By: sandhya thejappa

Updated on: Jun 16, 2021 | 12:32 PM

ತುಮಕೂರು: ಕೊರೊನಾ ಎರಡನೇ ಅಲೆಯಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ದಿನದಿಂದ ದಿನಕ್ಕೆ ಸಾವು-ನೋವು ಹೆಚ್ಚಾಗುತ್ತಿತ್ತು. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಅದೆಷ್ಟೋ ಜನರು ಸಾವನ್ನಪ್ಪಿದ್ದಾರೆ. ಸೋಂಕಿನ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಲಾಕ್​ಡೌನ್​ ಕೂಡಾ ವಿಧಿಸಿತ್ತು. ಮಾತ್ರವಲ್ಲದೆ ಮಕ್ಕಳ ಆರೋಗ್ಯ ಹಿತಾದೃಷ್ಟಿಯಿಂದ ಈ ವರ್ಷ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಪರೀಕ್ಷೆ ನಡೆಯದೆ ಪಾಸು ಮಾಡಿದ್ದಕ್ಕೆ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ.

ಪರೀಕ್ಷೆ ನಡೆಸದೆ ಪಾಸ್ ಮಾಡಿದ್ದಾರೆ ಎಂದು ತುಮಕೂರು ಜಿಲ್ಲೆಯ ತಿಪಟೂರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎದುರು ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಕಾಲೇಜು ಗೇಟಿನ ಎದುರು ಬೂದುಗುಂಬಳ ಕಾಯಿ ಮತ್ತು ತೆಂಗಿನ ಕಾಯಿ ಒಡೆದಿದ್ದಾರೆ. ಸುಮಾರು 10 ವಿದ್ಯಾರ್ಥಿಗಳು ಸಂಭ್ರಮಿಸಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರ ಘೋಷಣೆ ಕೂಗಿದ್ದಾರೆ.

ಸರ್ಕಾರ ಕೊರೊನಾ ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿತ್ತು. ಲಾಕ್​ಡೌನ್​ ಕಾರಣದಿಂದ ವಿದ್ಯಾರ್ಥಿಗಳು ತಡವಾಗಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಲಾಕ್​ಡೌನ್​ ಸಡಿಲಿಕೆಯಾದ ಕಾರಣ ನಿನ್ನೆ (ಜೂನ್ 15) ಕಾಲೇಜಿನ ಎದುರು ಸಂಭ್ರಮಿಸಿದ್ದು, ವಿದ್ಯಾರ್ಥಿಗಳ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಟಾಕಿ ಹೊಡೆದಿರುವ ವಿದ್ಯಾರ್ಥಿಗಳು

ಇದನ್ನೂ ಓದಿ

CBSE 12ನೇ ತರಗತಿ ಫಲಿತಾಂಶ ಮಾನದಂಡದ ಬಗ್ಗೆ ಸಮಿತಿ ಶಿಫಾರಸು; 30 : 30 : 40 ಅನುಪಾತದಲ್ಲಿ ಅಂಕ

ಬಾಲ್ಯ ವಿವಾಹ ತಡೆಗೆ ಸುರಕ್ಷಿಣಿ ವೆಬ್​ಸೈಟ್ ಆರಂಭ; ಮೌಢ್ಯ ಪದ್ಧತಿ ನಿವಾರಣೆಗೆ ಬಾಗಲಕೋಟೆ ಜಿಲ್ಲಾಡಳಿತದಿಂದ ನೂತನ ಪ್ರಯೋಗ

(2nd PUC Students celebrated in front of college at Tumkur and Celebration video viral in social media)