ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲು 2 ಕುಟುಂಬಗಳ ನಡುವೆ ಬೀದಿ ಜಗಳ, ಗುದ್ದಲಿ, ದೊಣ್ಣೆ ಹಿಡಿದು ಹೊಡೆದಾಟ

ಗುದ್ದಲಿ, ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಮಡಿಕೇರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಲು ಕೊಡ್ಲಿಪೇಟೆ ಪೊಲೀಸರು ನಿರಾಕರಿಸಿದ್ದು ತಹಶೀಲ್ದಾರ್ ಕೋರ್ಟ್ನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರಂತೆ.

ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲು 2 ಕುಟುಂಬಗಳ ನಡುವೆ ಬೀದಿ ಜಗಳ, ಗುದ್ದಲಿ, ದೊಣ್ಣೆ ಹಿಡಿದು ಹೊಡೆದಾಟ
ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲು 2 ಕುಟುಂಬಗಳ ನಡುವೆ ಬೀದಿ ಜಗಳ
TV9kannada Web Team

| Edited By: Ayesha Banu

Jun 16, 2021 | 1:00 PM

ಮಡಿಕೇರಿ: ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲು ಬೀದಿ ಜಗಳ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ 2 ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಗುದ್ದಲಿ, ದೊಣ್ಣೆ ಹಿಡಿದು 2 ಕುಟುಂಬಗಳು ಹೊಡೆದಾಡಿಕೊಂಡಿವೆ.

ರೈತ ಆನಂದ್ ಎಂಬುವವರು ಸರ್ಕಾರಿ ಭೂಮಿಯಲ್ಲಿ ಬೆಳೆ ಬೆಳೆದಿದ್ದರು. ಇದೇ ಜಾಗ ಕಬಳಿಸಲು ದೊರೆ ಕುಟುಂಬ ಯತ್ನ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ದೊರೆಗೆ ಲೋಕೇಶ್, ಪಾಲಾಕ್ಷ, ರೇಖಾ, ಭಾಗ್ಯ ಬೆಂಬಲ ನೀಡಿದ್ದಾರಂತೆ. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲು ಆನಂದ್ ಮತ್ತು ದೊರೆ ಕುಟುಂಬ ಬೀದಿ ರಂಪಾಟ ಮಾಡಿಕೊಂಡಿದ್ದಾರೆ.

ಗುದ್ದಲಿ, ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಮಡಿಕೇರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಲು ಕೊಡ್ಲಿಪೇಟೆ ಪೊಲೀಸರು ನಿರಾಕರಿಸಿದ್ದು ತಹಶೀಲ್ದಾರ್ ಕೋರ್ಟ್ನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರಂತೆ.

ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಬಂದಿಳಿಯಲಿರುವ ಉಸ್ತುವಾರಿ ಅರುಣ್ ಸಿಂಗ್, ಬಿರುಸುಗೊಂಡ ಶಾಸಕ ಅರವಿಂದ ಬೆಲ್ಲದ್​ ಚಟುವಟಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada