CBSE 12ನೇ ತರಗತಿ ಫಲಿತಾಂಶ ಮಾನದಂಡದ ಬಗ್ಗೆ ಸಮಿತಿ ಶಿಫಾರಸು; 30 : 30 : 40 ಅನುಪಾತದಲ್ಲಿ ಅಂಕ

ರದ್ದುಗೊಳಿಸಿದ ಬಳಿಕ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಹೇಗೆ ನೀಡಲಾಗುತ್ತದೆ ಎಂಬ ಗೊಂದಲವಿತ್ತು. ಆದರೆ ಸದಸ್ಯರ ಸಮಿತಿ ಸಿಬಿಎಸ್ಇಗೆ 12ನೇ ತರಗತಿ ಫಲಿತಾಂಶ ಮಾನದಂಡದ ಬಗ್ಗೆ ಶಿಫಾರಸು ಮಾಡಿದೆ.

CBSE 12ನೇ ತರಗತಿ ಫಲಿತಾಂಶ ಮಾನದಂಡದ ಬಗ್ಗೆ ಸಮಿತಿ ಶಿಫಾರಸು; 30 : 30 : 40 ಅನುಪಾತದಲ್ಲಿ ಅಂಕ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: sandhya thejappa

Jun 16, 2021 | 11:54 AM

ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಈ ವರ್ಷ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ರದ್ದುಗೊಳಿಸಿದ ಬಳಿಕ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಹೇಗೆ ನೀಡಲಾಗುತ್ತದೆ ಎಂಬ ಗೊಂದಲವಿತ್ತು. ಆದರೆ ಸದಸ್ಯರ ಸಮಿತಿ ಸಿಬಿಎಸ್ಇಗೆ 12ನೇ ತರಗತಿ ಫಲಿತಾಂಶ ಮಾನದಂಡದ ಬಗ್ಗೆ ಶಿಫಾರಸು ಮಾಡಿದೆ. 12ನೇ ತರಗತಿ ವಿದ್ಯಾರ್ಥಿಗಳ 10, 11ನೇ ತರಗತಿಯ ಫಲಿತಾಂಶದ ಜೊತೆಗೆ 12ನೇ ತರಗತಿಯ ಬೋರ್ಡ್ ಪೂರ್ವ ಪರೀಕ್ಷೆ (Preparatory Exam) ಅಂಕದ ಆಧಾರದ ಮೇಲೆ ಫಲಿತಾಂಶ ನೀಡಲು ನಿರ್ಧಾರವಾಗಿದೆ.

30 : 30 : 40 ಅನುಪಾತದಲ್ಲಿ ಅಂಕ ನೀಡಿ ಫಲಿತಾಂಶ ಪ್ರಕಟವಾಗಲಿದೆ. 10ನೇ ತರಗತಿಯ ಫಲಿತಾಂಶ ಆಧಾರದಲ್ಲಿ 30 ಅಂಕ ನಿರ್ಧಾರ, 11ನೇ ತರಗತಿ ಫಲಿತಾಂಶದ ಆಧಾರದಲ್ಲಿ 30 ಅಂಕವನ್ನು ನೀಡಿ 12ನೇ ತರಗತಿಯ ಫಲಿತಾಂಶವನ್ನು ನೀಡಬೇಕು ಎಂದು 13 ಸದಸ್ಯರ ಸಮಿತಿ ಸಿಬಿಎಸ್ಇಗೆ ಶಿಫಾರಸು ಮಾಡಿದೆ. ಈ ಬಗ್ಗೆ ಸಿಬಿಎಸ್ಇ ತನ್ನ ತೀರ್ಮಾನವನ್ನು ನಾಳೆ ಸುಪ್ರೀಂ ಕೋರ್ಟ್​ಗೆ ತಿಳಿಸಲಿದೆ.

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಘೋಷಿಸಿತ್ತು. ಮಕ್ಕಳ ಆರೋಗ್ಯ ಹಿತಾದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ರಾಜ್ಯದಲ್ಲೂ ದ್ವಿತೀಯ ಪರೀಕ್ಷೆ ರದ್ದಾಗಿದೆ. ರದ್ದಾದ ಬಳಿಕ ಫಲಿತಾಂಶವನ್ನು ನೀಡುವುದೇಗೆ ಎಂಬ ಗೊಂದಲಗಳು ಎದುರಾಗಿತ್ತು. ಇಲ್ಲಿಯೂ ಕೂಡಾ ವಿದ್ಯಾರ್ಥಿಗಳ ಎಸ್​ಎಸ್​ಎಲ್​ಸಿ ಹಾಗೂ ಪ್ರಥಮ ಪಿಯುಸಿ ಅಂಕವನ್ನು ಅವಲೋಕಿಸಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ನೀಡಲಾಗುತ್ತದೆ.

ಇದನ್ನೂ ಓದಿ

CBSE 12th Board Exam 2021: 12 ನೇ ತರಗತಿಯ ಸಿಬಿಎಸ್‌ಇ, ಸಿಐಎಸ್‌ಸಿಇ ಪರೀಕ್ಷೆ ರದ್ದು: ಪ್ರಧಾನಿ ಮೋದಿ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಪ್ರತಿಷ್ಠಿತ ಕಾಲೇಜುಗಳಲ್ಲಿ ಹೆಚ್ಚಿದ ಸೀಟು ಬೇಡಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada