ಬಾಲ್ಯ ವಿವಾಹ ತಡೆಗೆ ಸುರಕ್ಷಿಣಿ ವೆಬ್​ಸೈಟ್ ಆರಂಭ; ಮೌಢ್ಯ ಪದ್ಧತಿ ನಿವಾರಣೆಗೆ ಬಾಗಲಕೋಟೆ ಜಿಲ್ಲಾಡಳಿತದಿಂದ ನೂತನ ಪ್ರಯೋಗ

ಜಿಲ್ಲೆಯ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಂದಾಳತ್ವದಲ್ಲಿ ಈ ವೆಬ್‌ಸೈಟ್‌ ಆರಂಭಿಸಲಾಗಿದೆ. ಈ ವೆಬ್‌ಸೈಟ್​ನಲ್ಲಿ ಬಾಲ್ಯ ವಿವಾಹದಿಂದ ರಕ್ಷಣೆಯಾಗಿರುವ ಹಾಗೂ ಬಾಲ್ಯ ವಿವಾಹವಾದ ಬಳಿಕ ರಕ್ಷಣೆಯಾದ ಬಾಲಕಿಯರ ಪ್ರತಿಯೊಂದು ವಿವರಗಳು ಸಿಗಲಿದೆ.

ಬಾಲ್ಯ ವಿವಾಹ ತಡೆಗೆ ಸುರಕ್ಷಿಣಿ ವೆಬ್​ಸೈಟ್ ಆರಂಭ; ಮೌಢ್ಯ ಪದ್ಧತಿ ನಿವಾರಣೆಗೆ ಬಾಗಲಕೋಟೆ ಜಿಲ್ಲಾಡಳಿತದಿಂದ ನೂತನ ಪ್ರಯೋಗ
ಬಾಲ್ಯ ವಿವಾಹ ತಡೆಗೆ ಸುರಕ್ಷಿಣಿ ವೆಬ್​ಸೈಟ್ ಆರಂಭ
Follow us
TV9 Web
| Updated By: preethi shettigar

Updated on: Jun 16, 2021 | 11:54 AM

ಬಾಗಲಕೋಟೆ: ಲಾಕ್​ಡೌನ್​ನಿಂದಾಗಿ ಒಂದು ಕಡೆ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಹಳ್ಳಿಗಳಲ್ಲಿ ಬಾಲಕಿಯರು ಗೃಹಿಣಿಯರಾಗುತ್ತಿದ್ದಾರೆ. ಇದಕ್ಕೆ ಕಾರಣ ಬಾಲ್ಯ ವಿವಾಹ ಪದ್ಧತಿ. ನಮ್ಮ ಸಮಾಜಕ್ಕೆ ಅಂಟಿದ ದೊಡ್ಡ ಮೌಢ್ಯ ಇದಾಗಿದ್ದು, ಇದನ್ನು ನಿರ್ಮೂಲನೆ ಮಾಡುವುದಕ್ಕೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಇದುವರೆಗೂ ಈ ಪದ್ಧತಿ ಮಾತ್ರ ನಮ್ಮಿಂದ ದೂರವಾಗಿಲ್ಲ.‌ ಬಾಗಲಕೋಟೆ ಜಿಲ್ಲೆ ಕೂಡ ಈ ಮೌಢ್ಯಾಚರಣೆಯಿಂದ ಹೊರತಾಗಿಲ್ಲ. ಇದನ್ನೇಲ್ಲ ಅರಿತ ಬಾಗಲಕೋಟೆ ಜಿಲ್ಲಾಡಳಿತ ಬಾಲ್ಯ ವಿವಾಹ ತಡೆಗೆ ವಿನೂತನ ಪ್ರಯೋಗ ಮಾಡಿದ್ದು, ಸಮಾಜಕ್ಕೆ ಅಂಟಿದ ಈ ಪಿಡುಗನ್ನು ಬುಡ ಸಮೇತ ಕಿತ್ತೆಸೆಯಲು ಮುಂದಾಗಿದೆ.

ಕಳೆದ 2020ನೇ ಎಪ್ರಿಲ್ ತಿಂಗಳಿನಿಂದ 2021ರ ಮಾರ್ಚ್ ವರೆಗೂ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಬಾಲ್ಯವಿವಾಗಳೇ ಸಾಕ್ಷಿ. ಕಳೆದೊಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ 163 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ 133 ಪ್ರಕರಣಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಇನ್ನು 30ಪ್ರಕರಣಗಳಲ್ಲಿ ಬಾಲೆಯರು ತಾಳಿಗೆ ಕೊರಳೊಡ್ಡಿದ್ದಾರೆ. ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳಲು ಮುಂದಾಗಿ ಬಚಾವ್ ಆದ ಬಾಲಕಿಯರನ್ನು ಅಧಿಕಾರಿಗಳು ಬಾಲ ಮಂದಿರದಲ್ಲಿ ಇರಿಸಿ ಆರೈಕೆ ಮಾಡುತ್ತಿದಾರೆ.

ಆದರೆ ಹೀಗೆ ಆರೈಕೆಯಾದ ಬಾಲಕಿಯರು ಒಂದೆರಡು ತಿಂಗಳಿಗೆ ಪುನಃ ಮನೆಗೆ ಹೋಗಬೇಕಾಗುತ್ತದೆ. ಈ ವೇಳೆ ಮನೆಗೆ ಬಂದ ಬಾಲಕಿಯರಿಗೆ ಪೋಷಕರು ಮತ್ತೆ ಬಾಲ್ಯ ವಿವಾಹ ಮಾಡುವ ಹಾಗೂ ಬಾಲ್ಯ ವಿವಾಹ ಆಗಿದ್ದ ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಾಧ್ಯತೆಗಳು ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಹೊಸ ವೆಬ್‌ಸೈಟ್‌ ಒಂದನ್ನು ಹೊರ ತಂದಿದೆ. ‘ಸುರಕ್ಷಿಣಿ’ ಎಂಬ ಹೆಸರಿನ ಈ ವೆಬ್‌ಸೈಟ್‌ ಅನ್ನು ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇತ್ತೀಚೆಗೆ ಉದ್ಘಾಟನೆ ಮಾಡಿದ್ದು, ಸುರಕ್ಷಿಣಿ ವೆಬ್‌ಸೈಟ್‌ ಬಗ್ಗೆ ಮೆಚ್ವುಗೆ ಮಾತುಗಳನ್ನು ಆಡಿದ್ದಾರೆ.

ಈ ಸಂಬಂಧ ಬಾಗಲಕೋಟೆ ಸಿಇಓ ಟಿ.ಭೂಬಾಲನ್​ ಅವರಿಗೆ ಅಭಿನಂದನೆ ಸಲ್ಲಿಸಿದ ಸಚಿವೆ ಜೊಲ್ಲೆ, ಬಾಲ್ಯವಿವಾಹ ತಡೆಗಟ್ಟಲು ಸಿಇಓ ನೇತೃತ್ವದಲ್ಲಿ ಅಧಿಕಾರಿಗಳು ಸುರಕ್ಷಣಿ ಎನ್ನುವ ವೆಬ್‌ಸೈಟ್‌ ಮಾಡಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಆರ್.ಡಿಪಿಆರ್ ಹಾಗೂ ಚೈಲ್ಡ್ ವೆಲ್ಫೇರ್ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಕೆಲಸ ಮಾಡಲು ಅನೂಕೂಲವಾಗಿದೆ. ಈ ವೆಬ್‌ಸೈಟ್‌ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲು ಚಿಂತನೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಜಿಲ್ಲೆಯ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಂದಾಳತ್ವದಲ್ಲಿ ಈ ವೆಬ್‌ಸೈಟ್‌ ಆರಂಭಿಸಲಾಗಿದೆ. ಈ ವೆಬ್‌ಸೈಟ್​ನಲ್ಲಿ ಬಾಲ್ಯ ವಿವಾಹದಿಂದ ರಕ್ಷಣೆಯಾಗಿರುವ ಹಾಗೂ ಬಾಲ್ಯ ವಿವಾಹವಾದ ಬಳಿಕ ರಕ್ಷಣೆಯಾದ ಬಾಲಕಿಯರ ಪ್ರತಿಯೊಂದು ವಿವರಗಳು ಸಿಗಲಿದೆ. ಬಾಲ ಮಂದಿರದ ಬಳಿಕ ತಮ್ಮ ಮನೆಗೆ ಹೋಗುವ ಬಾಲಕಿಯರ ಮೇಲೆ ಗ್ರಾಮದಲ್ಲಿ ಇರುವ ಜಿಲ್ಲೆಯ ಇತರೆ ಇಲಾಖೆ ಅಧಿಕಾರಿಗಳು ಕಣ್ಗಾವಲು ಇಡುತ್ತಾರೆ. ಒಂದೊಂದು ಇಲಾಖೆ ಅಧಿಕಾರಿಗಳು ಬಾಲಕಿಯರ ಚಲನವಲನಗಳ ಬಗ್ಗೆ ವೆಬ್‌ಸೈಟ್​ನಲ್ಲಿ ನಮೂದಿಸಬೇಕಾಗುತ್ತದೆ. ಹೀಗೆ ನಮೂದಿಸುವುದರಿಂದ ಬಾಲಕಿಗೆ ಮತ್ತೊಮ್ಮೆ ಬಾಲ್ಯ ವಿವಾಹ ಆಗುವುದನ್ನು ತಪ್ಪಿಸಲು, ಜೊತೆಗೆ ಬಾಲ್ಯ ವಿವಾಹವಾದ ಬಾಲಕಿಯನ್ನು ಗಂಡನ ಮನೆಗೆ ಹೋಗದಂತೆ ತಪ್ಪಿಸಲು ಅನುಕೂಲ ಆಗಲಿದೆ.

18 ನೇ ವಯಸ್ಸಿನವೆರೆಗೆ ಬಾಲಕಿಗೆ ಮದುವೆ ಆಗದಂತೆ‌, ದೌರ್ಜನ್ಯ ಆಗದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ನಾವು ಸುರಕ್ಷಿಣಿ ವೆಬ್‌ಸೈಟ್‌ ತೆರೆದಿದ್ದೀವಿ. ಇದರಲ್ಲಿ ಬಾಲಕಿ ಹುಟ್ಟಿದ ದಿನಾಂಕ, ತಂದೆ-ತಾಯಿ, ಊರು, ಸಂಬಂಧಿಕರು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಭರ್ತಿ ಮಾಡಿರುತ್ತೇವೆ. ಇಂತಹ ಬಾಲಕಿಯರ ಮನೆಗೆ ಪ್ರತಿ ವಾರಕ್ಕೆ ಯಾವುದಾದರೂ ಒಂದು ಇಲಾಖೆ ಭೇಟಿ ನೀಡಬೇಕಾಗುತ್ತದೆ. ಹೆಚ್ಚಿನ ಸಮಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಪರ್ ವೈಸರ್ ಭೇಟಿ ನೀಡುತ್ತಾರೆ. ಇವರಲ್ಲದೇ ಪಿಡಿಓ, ಪೊಲೀಸ್ ಸಿಬ್ಬಂದಿ ವಿವಿಧ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಲಿದ್ದಾರೆ.

ಬಾಲ್ಯ ವಿವಾಹದಿಂದ ರಕ್ಷಣೆಯಾದ ಬಾಲಕಿಯನ್ನು ಪುನಃ ಮನೆಗೆ ಕರೆದುಕೊಂಡು ಹೋಗುವ ಪೋಷಕರು ಮತ್ತೆ 15 ದಿನಗಳಲ್ಲಿ ಮದುವೆ ಮಾಡುತ್ತಾರೆ. ಇದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದೇವೆ. ಒಂದು ವೇಳೆ ಮದುವೆ ಆಗಿ ಮಗು ಇದ್ದರೆ ಆ ಮಗುವಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿರುತ್ತದೆ. ಹೀಗೆ 18 ವರ್ಷ ಆಗುವರೆಗೂ ಈ ಕ್ರಮ ಮುಂದುವರೆಯುವುದರಿಂದ ಪೋಷಕರಲ್ಲಿ ಭಯ ಮೂಡುತ್ತದೆ. ಅಧಿಕಾರಿಗಳು ಪದೇ ಪದೇ ಮನೆಗೆ ಬರುವುದರಿಂದ 18 ವರ್ಷ ಆಗುವವರೆಗೂ ಮದುವೆ ಮಾಡುವುದಕ್ಕೆ ಬಿಡಲ್ಲ ಅಂತ ಭಾವಿಸುತ್ತಾರೆ. ಅದರಂತೆ ಸುತ್ತಮುತ್ತಲ ಜನರಲ್ಲೂ ಇದೇ ಭಾವನೆ ಮೂಡಿ, ಜಾಗೃತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಈ ವೆಬ್‌ಸೈಟ್‌ ಹೊರ ತಂದಿದ್ದೇವೆ ಎಂದು ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಒ ಟಿ. ಭೂಬಾಲನ್ ತಿಳಿಸಿದ್ದಾರೆ.

ಇದನ್ನೂ ಓದಿ:

ವಿಜಯಪುರದಲ್ಲಿ ಹೆಚ್ಚಾದ ಬಾಲ್ಯ ವಿವಾಹ: ಮೂರು ವರ್ಷದೀಚೆಗೆ 539 ಪ್ರಕರಣ

ಮೈಸೂರಿನಲ್ಲಿ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಮದುವೆಗೆ ಸಿದ್ಧತೆ; ಸ್ನೇಹಿತೆಯಿಂದ ನಿಂತ ಬಾಲ್ಯ ವಿವಾಹ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್