ಈ ರಾಶಿಯವರು ಇಂದು ಹೊಸ ಮನೆ ಖರೀದಿಸಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ, ಬುಧವಾರದಂದು ಸತ್ಯದ ಅರಿವು, ವಿಶ್ರಾಂತಿಗೆ ಮನಸ್ಸು, ಉದ್ಯಮದಲ್ಲಿ ಕ್ರಿಯಾಶೀಲತೆ ಇವೆಲ್ಲ ಇರುವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಅನುರಾಧ, ಯೋಗ: ವ್ಯತಿಪಾತ್, ಕರಣ: ಭದ್ರ, ಸೂರ್ಯೋದಯ – 06:19 am, ಸೂರ್ಯಾಸ್ತ – 06:45 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:32 – 14:06, ಯಮಘಂಡ ಕಾಲ 07:53 – 09:26, ಗುಳಿಕ ಕಾಲ 10:59 – 12:32
ಮೇಷ ರಾಶಿ: ಹಿರಿಯರೆದು ಸೋಲೊಪ್ಪುವುದು ಅಪಮಾನವಲ್ಲ. ಆಗಲೇ ಗೆಲುವು ಸಾಧ್ಯ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿ. ಅದನ್ನು ಮತ್ತೇನೋ ಮಾಡಲು ಹೋಗಿ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುವುದು. ವ್ಯಾವಹಾರಿಕತಗೆ ಆಸಕ್ತಿ ಇಲ್ಲ. ನಿಮ್ಮ ಉನ್ನತಸ್ಥಾನಕ್ಕೆ ಕಾರಣರಾದ ಎಲ್ಲರನ್ನೂ ಇಂದು ಸ್ಮರಿಸಿಕೊಳ್ಳುವಿರಿ. ಸಂತಾನದ ವಾರ್ತೆ ನಿಮಗೆ ಒಂದಿನ ಶುಭವಾರ್ತೆಯಾಗಲಿದೆ. ದುಡುಕುವುದು ನಿಮ್ಮ ಸ್ವಭಾವಕ್ಕೆ ವಿರುದ್ಧವಾದಂತೆ. ಹೊಸ ಮನೆಯನ್ನೋ ಜಾಗವನ್ನೋ ತೆಗದುಕೊಳ್ಳುವ ಪ್ರಸ್ತಾಪವಿರಲಿದೆ. ನೂತನ ಪ್ರಯತ್ನಕ್ಕೆ ಬಾಗಿಲು ತೆರೆಯಬೇಕೆಂದಿಲ್ಲ, ಕಿಟಕಿ ತೆರೆದು ಸಾಕು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಕೆಟ್ಟ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಔಚಿತ್ಯ ಪೂರ್ಣವಾಗಿ ಮಾತನಾಡುವಿರಿ. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಒಂದೇ ಆಯಾಮದ ಕಾರ್ಯಗಳಿಂದ ವಿಶ್ರಾಂತಿಯು ಬೇಕೆನಿಸಬಹುದು.
ವೃಷಭ ರಾಶಿ: ಆಯ್ಕೆಯ ವಿಚಾರದಲ್ಲಿ ನಿಮಗೆ ಒಪ್ಪುವುದನ್ನು ಆರಿಸಿಕೊಳ್ಳುವಿರಿ. ತೊಂದರೆ ತೆಗೆದುಕೊಳ್ಳುವ ಅಲ್ಪ ಯೋಚನೆಯೂ ಇರದು. ಇಂದು ಸ್ಪರ್ಧಾತ್ಮಕ ವಿಚಾರಗಳಿಂದ ಸೋಲಾಗುವುದು. ಶತ್ರುಗಳು ನಿಮ್ಮ ಹಿಂದೇ ಇದ್ದು ನಿಮ್ಮನ್ನು ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸಿ ಕೈ ಬಿಡವರು. ವಿದ್ಯುದುಪಕರಣಗಳ ಖರೀದಿಯಿಂದ ನಿಮಗೆ ಧನವ್ಯಯವಾಗುವ ಸಾಧ್ಯತೆಯಿದೆ. ನಿಮಗಿರುವ ಕೌಶಲವು ಜನರಿಂದ ಮೆಚ್ಚುಗೆ ಪಡೆಯಲಿದೆ. ವೈಯಕ್ತಿಕ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು. ಹಣಬೇಕೆಂದು ಸಲ್ಲದ ದಾರಿಯಲ್ಲಿ ನಡೆದರೆ ಬಂದುದೆಲ್ಲ ಹಾಗೇ ಹೋಗುವುದು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ.
ಮಿಥುನ ರಾಶಿ: ನಿಮ್ಮ ಚಿತ್ತಶುದ್ಧಿಗೆ ಕ್ರಮಗಳು ಅಗತ್ಯ. ಇಂದು ಹಣಕಾಸಿನ ಉದ್ಯೋಗಿಗಳಿಗೆ ಒತ್ತಡದ ದಿನವಗಲಿದೆ. ಕಾಲಕ್ಕೆ ಕಾಯಬೇಕಾಗಿರುವುದರಿಂದ ನಿಮ್ಮ ಪ್ರಯತ್ನಗಳು ಸದಾ ನಡೆಯಲಿ. ದೈವಾನುಕೂಲ ಬಂದಾಗ ಅದಕ್ಕೆ ಹೊಳಪು ಬರಲಿದೆ. ಯಾರನ್ನೂ ಪೂರ್ಣ ನಂಬುವ ಸ್ಥಿತಿ ಇರದು. ಸಂಗಾತಿಯೊಡನೆ ಸಮಾರಂಭಕ್ಕೆ ಹೋಗಲಿದ್ದೀರಿ. ನಿಮ್ಮ ಮಾತುಗಳು ಸಭೆಯನ್ನು ಮೂಕವಿಸ್ಮಿತಗೊಳಿಸಲಿದೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲಿದ್ದೀರಿ. ಹಿಂದಿನ ಹಣಕಾಸಿನ ಸಮಸ್ಯೆಯು ಇಂದೂ ಕಾಣಿಸಿಕೊಳ್ಳಬಹುದು. ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಹಾಸ್ಯಕ್ಕಾಗಿ ಆಡಿದ ಮಾತು ಗಂಭೀರವಾಗಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಹೆಚ್ಚಿರುವುದು. ಯಾರಿಗಾದರೂ ಒಳ್ಳೆಯ ಮಾತುಗಳನ್ನು ಹೇಳಿ. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ.
ಕರ್ಕಾಟಕ ರಾಶಿ: ತನಗೆ ಗೊತ್ತಿಗೆ ಎಂಬ ಜಂಬವೇ ಪಾಠ ಕಲಿಸುವುದು. ಬಹಳ ದಿನಗಳಿಂದ ಹೇಳಬೇಕಾದ ವಿಷಯವನ್ನು ಹೇಳುವಿರಿ. ಮನಸ್ಸು ಹಗುರಾಗುವುದು. ಅತಿಯಾದ ಬುದ್ಧಿಯನ್ನು ಬಳಸಲು ಹೋಗಿ ಹಳ್ಳಕ್ಕೆ ಬೀಳುವ ಅವಕಾಶವನ್ನು ಇಟ್ಟುಕೊಳ್ಳುವುದು ಬೇಡ. ಮಾಡಲು ಏನೂ ಕೆಲಸವಿಲ್ಲವೆಂದು ಹೇಳಿ ನಿಮ್ಮರ ಬಾಯಿಗೆ ಸಿಗಬೇಡಿ. ಏನಾದರೂ ಉತ್ತಮವಾದ ಕೆಲಸವನ್ನು ಮಾಡಿ, ಅದನ್ನೇ ಹೇಳಿ. ಕರ್ತವ್ಯಶೂನ್ಯತೆಯಿಂದ ತಂದೆಗೆ ಬೇಸರವಾಗಬಹುದು. ಆಗ ತಾನಾಗಿಯೇ ಬಾಯಿ ಮುಚ್ಚುವುದು. ಕೆಲಸದ ಮೂಲಕ ಉತ್ತರಿಸುವ ನಿಮ್ಮ ಸ್ವಭಾವ ಹಲವರಿಗೆ ಇಷ್ಟವಾಗುವುದು. ದೈವಭಕ್ತಿಗೆ ಕೂಡಲೇ ಫಲ ಸಿಗದು. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಕಷ್ಟವಾದೀತು.
ಸಿಂಹ ರಾಶಿ: ಹಣಕಾಸಿನ ಸಮಸ್ಯೆಯಿಂದ ಒಪ್ಪಿಕೊಂಡ ಕೆಲಸ ಮುಂದುವರೆಯದು. ನಿಮ್ಮ ಭೂಮಿಯ ಖರೀದಿಯಲ್ಲಿ ಲಾಭವಿರಲಿದೆ. ಉತ್ಸಾಹದ ದಿನವನ್ನಾಗಿ ನೀವು ಮಾಡಿಕೊಳ್ಳುವಿರಿ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಪರಿಶ್ರಮದಿಂದ ಸಕಾಲಕ್ಕೆ ಸರಿಯಾಗಿ ಫಲವನ್ನು ಪಡೆಯುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ಮನಸ್ಸು ಖೇದಪಡುವುದು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಉನ್ನತ ಸ್ಥಾನವನ್ನು ತಲುಪುವ ಆಸೆ ಕಮರುವುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ವರ್ತನೆಗಳಲ್ಲಿ ಬದಲಾವಣೆಯನ್ನು ಆಪ್ತರು ಗಮನಿಸುವರು. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು.
ಕನ್ಯಾ ರಾಶಿ: ನಿಮ್ಮ ಸಹನೆಯ ಪರೀಕ್ಷೆ ನಿರಂತರವಾಗಿ ಆಗುವುದು. ಇಂದು ನಿಮ್ಮ ಬಂಧುಗಳ ಅನಿರೀಕ್ಷಿತ ಭೇಟಿ ನಿಮ್ಮ ಯೋಜನೆಯನ್ನು ತಲೆಕೆಳಗೆ ಮಾಡಲಿದೆ. ಉತ್ತಮ ಆಹಾರವನ್ನು ಸೇವಿಸುವಿರಿ. ಯಾರದ್ದೋ ವಿಷಯಕ್ಕೆ ನೀವು ಮೂಗು ತೂರಿಸಿ ಅಪಮಾನಕ್ಕೆ ಸಿಕ್ಕಿಹಾಕಿಕೊಳ್ಳುವಿರಿ. ಅನಗತ್ಯ ಮಾತುಗಳಿಂದ ಸಣ್ಣವರಾಗುವಿರಿ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ನಿದ್ರಾಹಿನತೆಯಿಂದ ಆಲಸ್ಯವೂ ಬರಬಹುದು. ಉತ್ತಮ ಪುಸ್ತಕವನ್ನು ಇಂದಿನ ಸಖನನ್ನಾಗಿಸಿಕೊಳ್ಳಿ. ಇಂದು ನೀವು ಯಾರ ಮಾತಿಗೂ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ದಿವ್ಯಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಅಪರಿಚಿತರ ಜೊತೆ ಸೌಹಾರ್ದವಾಗಿ ಮಾತನಾಡಿ.