ಕುಮಾರಸ್ವಾಮಿ ದೊಡ್ಡೋರು, ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತಾಡುತ್ತಾರೆ: ಡಿಕೆ ಶಿವಕುಮಾರ್
ಜಾತಿ ಗಣತಿ ವರದಿಯನ್ನು ಸಾರ್ವಜನಿಕಗೊಳಿಸುವ ಬಗ್ಗೆ ಸರ್ಕಾರದಲ್ಲಿ ದ್ವಂದ್ವ ಮತ್ತು ಗೊಂದಲಗಳಿವೆ, ವರದಿಯಲ್ಲಿ ಉಲ್ಲೇಖವಾಗಿರುವ ಅಂಕಿ ಅಂಶಗಳ ಸರಿಯಾಗಿಲ್ಲ ಎಂದು ರಾಜಕೀಯ ನಾಯಕರು, ಮಠಾಧೀಶರು ಮತ್ತು ಜನಸಾಮಾನ್ಯರು ಕೂಡ ಹೇಳುತ್ತಿದ್ದಾರೆ. ಜಾತಿ ಗಣತಿ ಮಾಡಿಸುವುದನ್ನು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಧರ್ಮಸಂಕಟ ಎದುರಾಗಿದೆ.
ಬೆಂಗಳೂರು, ಏಪ್ರಿಲ್ 15: ನಗರದಲ್ಲಿ ಇಂದಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತಾಡುತ್ತಾರೆ, ಅವರ ಟ್ವೀಟ್ ಗಳಿಗೆ ಗಮನ ಕೊಡಲ್ಲ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದಡಿ ನಾವು ಕೆಲಸ ಮಾಡುತ್ತಿದ್ದೇವೆ, ಸರ್ವರಿರೂ ಸಮಬಾಳು ಕಲ್ಪಿಸುವುದೇ ನಮ್ಮ ಉದ್ದೇಶ, ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದಲ್ಲಿ ನಂಬಿಕೆ ಇದೆ, ಯಾರು ಯಾವ ಕೆಲಸ ಮಾಡಬೇಕು ಅಂತ ಸಂವಿಧಾನದಲ್ಲಿ ವ್ಯಾಖ್ಯಾನ ಇದೆ, ಅದಕ್ಕೆ ತಕ್ಕನಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವರದಿಯನ್ನು ನಮ್ಮೆಲ್ಲ ಶಾಸಕರೊಂದಿಗೆ ಚರ್ಚಿಸುತ್ತೇವೆ, ಯಾರಿಗೂ ನೋವಾಗಬಾರದು: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ