ಜಾತಿ ಗಣತಿ ವರದಿಯಲ್ಲಿ ಒಕ್ಕಲಿಗ ಸಮುದಾಯದ ಅಂಕ- ಅಂಶಗಳನ್ನು ತಿಳಿಸಲು ಶಿವಕುಮಾರ್ ಸಭೆ ಕರೆದಿರಬಹುದು: ಬಾಲಕೃಷ್ಣ
ಕಳೆದ ವರ್ಷ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಸ್ಪಷ್ಟವಾದ ನಿರ್ಧಾರವಾಗಲೀ ತೀರ್ಮಾನವಾಗಲೀ ತೆಗೆದುಕೊಂಡಿಲ್ಲ, ಹಾಗಾಗಿ ಜಾತಿ ಗಣತಿ ಸಮೀಕ್ಷೆಯನ್ನು ಪ್ರತಿ ಮನೆ ಮನೆಗೆ ತೆರಳಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವರದಿಯನ್ನು ಸ್ಫುಟವಾಗಿ ತಯಾರು ಮಾಡಬೇಕಿರುವ ಅವಶ್ಯಕತೆ ಇದೆಯೆಂದು ಸಿಎಂ ಹಾಗೂ ಡಿಸಿಎಂಗೆ ತಿಳಿಸುವುದಾಗಿ ಬಾಲಕೃಷ್ಣ ಹೇಳಿದರು.
ಬೆಂಗಳೂರು, ಏಪ್ರಿಲ್ 15: ನಿನ್ನೆ ಪತ್ರಕರ್ತರಿಗೆ ತಿಳಿಸಿದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಇಂದು ಒಕ್ಕಲಿಗ ಸಮುದಾಯ ಶಾಸಕರ ಸಭೆ ಕರೆದಿದ್ದಾರೆ. ಸಭೆಗೆ ಆಗಮಿಸಿದ ಹೆಚ್ ಸಿ ಬಾಲಕೃಷ್ಣ, ಜಾತಿಗಣತಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ, ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ತಿಳಿಸಲು, ಮತ್ತು ವರದಿಯಲ್ಲಿ ಸಮುದಾಯಕ್ಕೆ ಸಂಬಂಧಿಸಿದ ಅಂಶಗಳನ್ನು ಹೇಗೆ ಬಿಂಬಿಸಬೇಕು ಅಂತ ಹೇಳಲು ಶಿವಕುಮಾರ್ ಸಭೆ ಕರೆದಿರಬಹುದು ಎಂದು ಹೇಳಿದರು. ರಾಜ್ಯದಲ್ಲಿ ವಾಸವಾಗಿರುವ ಸಮುದಾಯಗಳು ಮತ್ತು ಅವುಗಳ ಜನಸಂಖ್ಯೆ ಬಗ್ಗೆ ಮಾಹಿತಿ ಕಲೆ ಹಾಕಲು ಜಾತಿ ಗಣತಿ ಮಾಡಿಸಲಾಗಿದೆ ಎಂದು ಶಾಸಕ ಹೇಳಿದರು.
ಇದನ್ನೂ ಓದಿ: ಪಲ್ಟಿ ಹೊಡೆದ ಆಟೋವನ್ನು ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್ಸಿ ಬಾಲಕೃಷ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
