ವಿಧಾನ ಸೌಧಕ್ಕೆ ಭೇಟಿ ನೀಡಿದ ಜರ್ಮನಿ ಬವೇರಿಯ ರಾಜ್ಯ ಸಚಿವರ ನಿಯೋಗ, ಸಿಎಂ ಜೊತೆ ಮಾತುಕತೆ
ವಿಸ್ತೀರ್ಣದ ಹಿನ್ನೆಲೆಯಿಂದ ನೋಡಿದರೆ ಬವೇರಿಯ ಜರ್ಮನಿಯ ಆಗ್ನೆಯ ಭಾಗಕ್ಕಿರುವ ಜರ್ಮನಿಯ ಅತಿದೊಡ್ಡ ರಾಜ್ಯವಾಗಿದೆ. 1972 ರಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ಆಯೋಜಿಸಿದ ಮ್ಯೂನಿಕ್ ಬವೇರಿಯ ರಾಜ್ಯದ ರಾಜಧಾನಿ ಮತ್ತು ಜರ್ಮನಿಯ ಅತಿದೊಡ್ಡ ನಗರಗಳಲ್ಲಿಯೂ ಒಂದೆನಿಸಿಕೊಂಡಿದೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಬವೇರಿಯದ ಒಟ್ಟು ಜನಂಖ್ಯೆ 1.3 ಕೋಟಿ, ಅಂದರೆ ಹೆಚ್ಚು ಕಡಿಮೆ ನಮ್ಮ ಬೆಂಗಳೂರಿನಷ್ಟು.
ಬೆಂಗಳೂರು, ಏಪ್ರಿಲ್ 15: ವಿಧಾನ ಸೌಧಕ್ಕೆ ಇಂದು ವಿದೇಶೀ ಗಣ್ಯರ ಅಗಮನವಾಯಿತು. ಯೂರೋಪಿಯನ್ ರಾಷ್ಟ್ರ (European country) ಜರ್ಮನಿಯ ಒಂದು ರಾಜ್ಯ ಬವೇರಿಯದ ಸಚಿವರ ನಿಯೋಗವೊಂದು ಇಂದು ವಿಧಾನಸೌಧಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿತು. ಸಾಕಷ್ಟು ಸದಸ್ಯರ ಜರ್ಮನ್ ನಿಯೋಗವು ಡಾ ಮಾರ್ಕಸ್ ಸೋಡೆನ್ ಅವರ ನೇತೃತ್ವದಲ್ಲಿ ಕರ್ನಾಟಕ್ಕೆ ಆಗಮಿಸಿದೆ. ಸಿದ್ದರಾಮಯ್ಯ ಜರ್ಮನ್ ನಿಯೋಗದೊಂದಿಗೆ ಮಾತುಕತೆ ನಡೆಸುವಾಗ ಅವರ ಸಂಪುಟ ಸಹೋದ್ಯೋಗಿಗಳಾದ ಪ್ರಿಯಾಂಕ್ ಖರ್ಗೆ ಮತ್ತು ಎಸ್ ಎಸ್ ಮಲ್ಲಿಕಾರ್ಜುನ ಜೊತೆಗಿದ್ದರು.
ಇದನ್ನೂ ಓದಿ: ಮುಂದಿನ 3-ವರ್ಷ ಅವಧಿಗೂ ಸಿದ್ದರಾಮಯ್ಯನೇ ಸಿಎಂ ಆಗಿ ಮುಂದುವರಿಯುತ್ತಾರೆ: ಬಸವರಾಜ ರಾಯರೆಡ್ಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 15, 2025 02:14 PM
Latest Videos

ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
