ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಬೀದರ್ನಲ್ಲಿ ಸೋಮವಾರ ನಡೆದ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವ ಈಶ್ವರ್ ಖಂಡ್ರೆ ಹಾಗೂ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ ನಡೆಸಿದ್ದಾರೆ. ಖಂಡ್ರೆ ಚುನಾವಣಾ ಭಾಷಣ ಮಾಡಿದ್ದಾರೆ ಎಂದು ಬೆಲ್ದಾಳೆ ಆರೋಪಿಸಿದರೆ, ನಂತರ ಮಾತನಾಡಿದ ಖಂಡ್ರೆ, ಇನ್ನೂ ಕೆಲವು ವಿಷಯ ಹೇಳಿದರೆ ಇವರು ವೇದಿಕೆಯಿಂದಲೇ ನಿರ್ಗಮಿಸಬೇಕಾಗುತ್ತದೆ ಎಂದರು.
ಬೀದರ್, ಏಪ್ರಿಲ್ 15: ಬೀದರ್ನಲ್ಲಿ ಸೋಮವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಈಶ್ವರ್ ಖಂಡ್ರೆ ಹಾಗೂ ಶಾಸಕ ಶೈಲೇಂದ್ರ ಬೆಲ್ದಾಳೆ ವೇದಿಕೆಯಲ್ಲೇ ವಾಕ್ಸಮರ ನಡೆಸಿದ್ದಾರೆ. ಖಂಡ್ರೆ ಭಾಷದ ಬಳಿಕ ಮಾತನಾಡಿದ ಶಾಸಕ ಬೆಲ್ದಾಳೆ, ಸಚಿವರು ಚುನಾವಣಾ ಭಾಷಣ ಮಾಡಿದ್ದಾರೆ ಎಂದರು. ಚುನಾವಣೆಗೆ ಇನ್ನೂ 3 ವರ್ಷವಿದೆ ಎಂದು ಖಂಡ್ರೆ ಕಾಲೆಳೆದರು. ಬೆಲ್ದಾಳೆ ಭಾಷಣ ಮುಗಿಯುತ್ತಿದ್ದಂತೆ ಡಯಾಸ್ಗೆ ಬಂದ ಖಂಡ್ರೆ, ಈ ಪವಿತ್ರ ಕಾರ್ಯಕ್ರಮದಲ್ಲಿ ನಾನು ಸತ್ಯವನ್ನು ಹೇಳಿದ್ದೇನೆ. ಸತ್ಯ ಹೇಳಿದ್ರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದೀರಿ? ಇನ್ನೂ ಕೆಲವು ವಿಷಯ ಹೇಳಿದ್ರೆ ವೇದಿಕೆಯಿಂದ ನಿರ್ಗಮಿಸಬೇಕಾಗುತ್ತದೆ ಎಂದರು. ವಿಡಿಯೋ ಇಲ್ಲಿದೆ ನೋಡಿ.
Latest Videos

ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ

ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್ಕೆ ಪಾಟೀಲ್

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
