ಪರೀಕ್ಷಾ ಪ್ರಾಧಿಕಾರದ ಎಡವಟ್ಟು, ಹಾಲ್ ಟಿಕೆಟ್ನಲ್ಲಿ ಮಲ್ಲೇಶ್ವರಂ 18ನೇ ಕ್ರಾಸ್ ಬದಲು 13ನೇ ಕ್ರಾಸ್ ನಮೂದು!
ಇದು ಟೈಪೋನೋ ಅಥವಾ ಮತ್ತೊಂದೋ ಅಂತ ಕೆಇಎ ಅಧಿಕಾರಿಗಳೇ ಹೇಳಬೇಕು, ಸಾಮಾನ್ಯವಾಗಿ ಪ್ರಾಧಿಕಾರದಿಂದ ಪರೀಕ್ಷಾ ಸಮಯದಲ್ಲಿ ಇಂಥ ಪ್ರಮಾದಗಳು ಜರುಗುವುದಿಲ್ಲ. ಮಹಿಳೆ ಹೇಳುವಂತೆ ಬದಲೀ ಪರೀಕ್ಷಾ ಕೇಂದ್ರ 18ನೇ ಕ್ರಾಸ್ ನಲ್ಲಿರದೆ ಬೇರೆ ದೂರದ ಕಾಲೇಜಾಗಿದ್ದರೆ ವಿದ್ಯಾರ್ಥಿನಿ ಏನು ಮಾಡಬೇಕಿತ್ತು? ಅವರು ಕೇಳುವ ಪ್ರಶ್ನೆಯಲ್ಲಿ ತರ್ಕವಿದೆ, ಕೆಇಎ ಯೋಚಿಸಬೇಕು.
ಬೆಂಗಳೂರು, ಏಪ್ರಿಲ್ 15: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತಿವರ್ಷ ವೃತ್ತಿಪಪ ಕೋರ್ಸ್ಗಳಿಗಾಗಿ (Professional Courses) ನಡೆಸುವ 2025 ಸಾಲಿನ ಕಾಮನ್ ಎಂಟ್ರನ್ಸ್ ಟೆಸ್ಟ್ (ಸಿಇಟಿ) ಇಂದಿನಿಂದ ಆರಂಭವಾಗಿದೆ. ಈ ಗೃಹಿಣಿ ಹೇಳುವ ಪ್ರಕಾರ ಸಿಇಟಿ ಬರೆಯುತ್ತಿರುವ ಅವರ ಮಗಳ ಪರೀಕ್ಷಾ ಕೇಂದ್ರದ ವಿಳಾಸ ಹಾಲ್ ಟಿಕೆಟ್ನಲ್ಲಿ ತಪ್ಪಾಗಿ ನಮೂದಾಗಿದೆ. ಮಲ್ಲೇಶ್ವರಂ 13 ನೇ ಕ್ರಾಸ್ ಅಂತ ನಮೂದಾಗಿದ್ದು ಅಲ್ಲಿನ ಸಿಬ್ಬಂದಿ ನಿಮ್ಮ ಎಕ್ಸಾಂ ಸೆಂಟರ್ ಇರೋದು 18 ನೇ ಕ್ರಾಸ್ ಅಂತ ಹೇಳಿದ್ದಾರೆ. ಅವರ ಮಗಳು ಅಳುತ್ತಾ 18ನೇ ಕ್ರಾಸ್ಗೆ ಬಂದು ಸೆಂಟರ್ನೊಳಗೆ ಹೋಗಿದ್ದಾಳೆ. ಸೆಂಟರ್ ದೂರದಲ್ಲಿದ್ದಿದ್ದರೆ ಏನು ಮಾಡಬೇಕಿತ್ತು ಅಂತ ಅವರು ತಾಯಿ ದುಃಖಿಸುತ್ತಾ ಪ್ರಶ್ನಿಸುತ್ತಾರೆ.
ಇದನ್ನೂ ಓದಿ: ಇನ್ಮುಂದೆ ಸಿಇಟಿ ಪರೀಕ್ಷೆಗಳಿಗೆ ಆಧಾರ್ ಆಧಾರಿತ ನೋಂದಣಿ: ಹೊಸ ನಿಯಮ ತರಲು ಮುಂದಾದ ಕೆಇಎ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
