ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಅಂತಿಮ ವರದಿ ಅಂದರೇನು ಅಂತ ಗೊತ್ತಿಲ್ಲ: ಸ್ನೇಹಮಯಿ ಕೃಷ್ಣ
ಐಪಿಎಸ್ ಅಧಿಕಾರಿಗಳು ಇಂಟೆರಿಮ್ ವರದಿಯನ್ನು ಕೋರ್ಟ್ಗೆ ಸಲ್ಲಿಸಿ ಯಾಕೆ ಅಂತಿಮ ವರದಿ ಅಂತ ಹೇಳಿದ್ದಾರೆ ಅಂತ ಗೊತ್ತು, ಮುಖ್ಯಮಂತ್ರಿ ಮತ್ತವರ ಕುಟುಂಬವನ್ನು ರಕ್ಷಿಸುವುದು ಅವರ ಉದ್ದೇಶವಾಗಿದೆ, ಆದರೆ ಅದು ಅಂತಿಮ ವರದಿಯಲ್ಲ ಅಂತ ಕೋರ್ಟ್ಗೆ ತಾನು ಅರಿಕೆ ಮಾಡಿಕೊಂಡಿರುವೆ, ತನಿಖೆಯ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಸಲ್ಲಿಸುವ ವರದಿ ಅಂತಿಮ ವರದಿಯಾಗುತ್ತದೆ ಎಂದು ಕೃಷ್ಣ ಹೇಳಿದರು.
ಬೆಂಗಳೂರು, ಏಪ್ರಿಲ್ 15: ರಾಜ್ಯದಲ್ಲಿರುವ ಐಪಿಎಸ್ ಅಧಿಕಾರಿಗಳಿಗೆ ತನಿಖೆ ಅಂದರೇನು ಗೊತ್ತಿಲ್ಲ, ಅಂತಿಮ ವರದಿ ಅಂದರೇನು ಅಂತ ಗೊತ್ತಿಲ್ಲ, ಒಬ್ಬ ಜನಸಾಮಾನ್ಯನಾದ ತನಗಿರುವಷ್ಟು ಜ್ಞಾನ ಅವರಿಗಿಲ್ಲ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಮುಡಾ ಪ್ರಕರಣವನ್ನು ಬೆಳಕಿಗೆ ತಂದು ಸಿಎಂ ಸೇರಿದಂತೆ ಎಲ್ಲ ತಪ್ಪಿತಸ್ಥರ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದರು. ಇಂಥವರ ಮೂಲಕ ದೊಡ್ಡ ದೊಡ್ಡ ಹಗರಣಗಳ ತನಿಖೆ ಮಾಡಿಸುವುದು ವೃಥಾ ಕಾಲಹರಣ ಮತ್ತು ಹಣವೂ ವ್ಯರ್ಥ, ಮಧ್ಯಂತರ ವರದಿಯನ್ನು ಇವರು ಕೋರ್ಟಿಗೆ ಅಂತಿಮ ವರದಿ ಅಂತ ಸಲ್ಲಿಸುತ್ತಾರೆ ಎಂದು ಕೃಷ್ಣ ಹೇಳಿದರು.
ಇದನ್ನೂ ಓದಿ: ಮುಡಾ ಹಗರಣ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ಕೇಂದ್ರಕ್ಕೆ ದೂರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ