ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ವಿರುದ್ಧ ಕೋಲಾರ ಮುಸಲ್ಮಾನರಿಂದ ಪ್ರತಿಭಟನೆ, ಬಂಧನಕ್ಕೆ ಆಗ್ರಹ
ಭಾರತದಲ್ಲಿ ಹಿಂದೂಗಳಿದ್ದಾರೆ, ಮುಸಲ್ಮಾನರಿದ್ದಾರೆ, ಕ್ರಿಶ್ಚಿಯನ್ನರಿದ್ದಾರೆ, ಜೈನರಿದ್ದಾರೆ, ಸಿಖ್ ಮತ್ತು ಇನ್ನೂ ಬೇರೆ ಧರ್ಮಗಳ ಜನ ಇದ್ದಾರೆ, ಅದರೆ ಯಾರೂ ಬೇರೆ ಧರ್ಮದ ಬಗ್ಗೆಯಾಗಲೀ, ಅವರ ಆಚರಣೆಗಳ ಬಗ್ಗೆಯಾಗಲೀ ಕೇವಲವಾಗಿ ಮಾತಾಡುವುದಿಲ್ಲ, ನಮ್ಮ ದೇಶದ ಸಂಸ್ಕೃತಿಯೇ ಹಾಗೆ, ಎಲ್ಲರೊಂದಿಗೆ ಸೌಹಾರ್ದತೆಯೇ ಭಾರತೀಯರ ಬದುಕಿನ ಉದ್ದೇಶ ಎಂದು ಮೌಲ್ವಿ ಹೇಳಿದರು.
ಕೋಲಾರ, ಏಪ್ರಿಲ್ 15: ಕೋಲಾರ ನಗರದಲ್ಲಿ ಮುಸ್ಲಿಂ ಸಮುದಾಯದವರು (members of Muslim community) ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸಿ ಅವರನ್ನು ಬಂಧಿಸಲು ಆಗ್ರಹಿಸಿದರು. ನಗರದ ಮಸೀದಿಯೊಂದರ ಮೌಲ್ವಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮುಸಲ್ಮಾನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಮೌಲ್ವಿ, ಯಾರೇ ಆಗಲಿ ಬೇರೆಯವರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮಾತುಗಳನ್ನು ಆಡಬಾರದು, ಭಾರತ ದೇಶದಲ್ಲಿ ಎಲ್ಲ ಧರ್ಮಗಳ ಜನ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಯಲಿ, ಯಾರು ಸಾಚಾ ಅನ್ನೋದು ಗೊತ್ತಾಗುತ್ತದೆ: ಬಸನಗೌಡ ಪಾಟೀಲ್ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ