ನಿಪ್ಪಾಣಿ ಭೀಮ ಹೆಜ್ಜೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಿಗೆ 5 ಪ್ರಶ್ನೆ ಕೇಳಿ ಉತ್ತರ ಬಯಸಿದ ಆರ್ ಅಶೋಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಕೈಬಿಟ್ಟಿದ್ದಾರೆ, ಅವರಿಗೆ ಈಗ ಮುಸಲ್ಮಾನರು ಮಾತ್ರ ಬೇಕು, ಹಾಗಾಗಿ ದಲಿತರು ತಪ್ಪು ಹೆಜ್ಜೆ ಇಡಬಾರದು ಅಂತ ಭೀಮ ಹೆಜ್ಜೆ ಕಾರ್ಯಕ್ರಮದಲ್ಲಿ ಕಳಕಳಿಯಿಂದ ಎಚ್ಚರಿಸುತ್ತೇನೆ, ತಪ್ಪು ಹೆಜ್ಜೆ ಇಟ್ಟರೆ ಅಂಬೇಡ್ಕರ್ ಅವರನ್ನು ಸೋಲಿಸಿದ ಹಾಗೆ ದಲಿತರನ್ನು ಮುಗಿಸುತ್ತಾರೆ ಎಂದು ನಿಪ್ಪಾಣಿಯಲ್ಲಿ ಆರ್ ಅಶೋಕ ಹೇಳಿದರು.
ಬೆಳಗಾವಿ, ಏಪ್ರಿಲ್ 15: ಜಿಲ್ಲೆಯ ನಿಪ್ಪಾಣಿಯಲ್ಲಿ ಆಯೋಜಿಸಿದ ಭೀಮ ಹೆಜ್ಜೆ ಕಾರ್ಯಕ್ರಮದಲ್ಲಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಸರ್ಕಾರದ ಮುಂದೆ 5 ಪ್ರಶ್ನೆಗಳನ್ನಿಟ್ಟು ಉತ್ತರ ಕೇಳಿದರು. ಕಾಂಗ್ರೆಸ್ ಮಾಡಿಸಿದ ಜಾತಿ ಗಣತಿಯಲ್ಲಿ (Caste Census) ಮುಸಲ್ಮಾನರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ, ಅಂಬೇಡ್ಕರ್ ಮನೆ ದೇವರು ಎನ್ನುವ ಕಾಂಗ್ರೆಸ್ ನಾಯಕರು ದಲಿತರಿಗೆ ಯಾವ ಸ್ಥಾನದಲ್ಲಿಡುತ್ತಾರೆ? ದಲಿತರ ಅಭಿವೃದ್ಧಿಗೆ ಮೀಸಲಾಗಿದ್ದ ₹36,000 ಕೋಟಿಯನ್ನು ಸರ್ಕಾರ ಬೇರೆ ಕಾರಣಗಳಿಗೆ ಬಳಸಿಕೊಂಡಿದೆ, ಹಣವನ್ನು ಹಿಂತಿರುಗಿಸೋದು ಯಾವಾಗ? ಅಂಬೇಡ್ಕರ್ ಅವರ 600 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುತ್ತೇವೆ ಎಂದಿರುವ ಕಾಂಗ್ರೆಸ್ ಅವರು ಮರಣ ಹೊಂದಿದಾಗ ದೆಹಲಿಯಲ್ಲಿ 6X3 ಅಡಿ ಜಾಗ ಯಾಕೆ ಕೊಡಲಿಲ್ಲ? ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಸೋಲಿಗೆ ವೀರ್ ಸಾವರ್ಕರ್ ಕಾರಣ ಅಂತ ಸಿದ್ದರಾಮಯ್ಯ ಹೇಳಿದ್ದಾರೆ, ಯಾರು ಅದನ್ನು ಪತ್ತೆ ಮಾಡಿದ್ದು ಅಂತ ಅವರು ಹೇಳಲಿ. ಭಾರತ ರತ್ನ ಪ್ರಶಸ್ತಿ ನೆಹರೂ ಕುಟುಂಬದ ಮೂವರಿಗೆ ಸಿಕ್ಕಿದೆ, ಆದರೆ ಕಾಂಗ್ರೆಸ್ ಸರ್ಕಾರಗಳು ಅಂಬೇಡ್ಕರ್ ಅವರಿಗೆ ಯಾಕೆ ನೀಡಲಿಲ್ಲ ಎಂದು ಕೇಳಿದ ಅಶೋಕ ಕಾಂಗ್ರೆಸ್ ನಾಯಕರಿಂದ ಉತ್ತರ ಬಯಸಿದರು.
ಇದನ್ನೂ ಓದಿ: ಜೆಡಿಎಸ್ನೊಂದಿಗೆ ಭಿನ್ನಾಭಿಪ್ರಾಯವಿಲ್ಲ, ಕುಮಾರಸ್ವಾಮಿಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ: ಆರ್ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್

ಯುದ್ಧದ ಭೀತಿ; ಎಲ್ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?

ಧೋನಿ ಸೇರಿದಂತೆ ಒಂದೇ ಓವರ್ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
