Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 16 April : ಈ ರಾಶಿಯವರಿಗೆ ಅನುಕಂಪದ ಅವಶ್ಯಕತೆ ಇದೆ.

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ, ಬುಧವಾರದಂದು ಸತ್ಯದ ಅರಿವು, ವಿಶ್ರಾಂತಿಗೆ ಮನಸ್ಸು, ಉದ್ಯಮದಲ್ಲಿ ಕ್ರಿಯಾಶೀಲತೆ ಇವೆಲ್ಲ ಇರುವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 16 April : ಈ ರಾಶಿಯವರಿಗೆ ಅನುಕಂಪದ ಅವಶ್ಯಕತೆ ಇದೆ.
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 16, 2025 | 1:28 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಅನುರಾಧ, ಯೋಗ: ವ್ಯತಿಪಾತ್, ಕರಣ: ಭದ್ರ, ಸೂರ್ಯೋದಯ – 06:19 am, ಸೂರ್ಯಾಸ್ತ – 06:45 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:32 – 14:06, ಯಮಘಂಡ ಕಾಲ 07:53 – 09:26, ಗುಳಿಕ ಕಾಲ 10:59 – 12:32

ಮೇಷ ರಾಶಿ: ಹಿರಿಯರೆದು ಸೋಲೊಪ್ಪುವುದು ಅಪಮಾನವಲ್ಲ. ಆಗಲೇ ಗೆಲುವು ಸಾಧ್ಯ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿ. ಅದನ್ನು ಮತ್ತೇನೋ ಮಾಡಲು ಹೋಗಿ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುವುದು. ವ್ಯಾವಹಾರಿಕತಗೆ ಆಸಕ್ತಿ ಇಲ್ಲ. ನಿಮ್ಮ ಉನ್ನತಸ್ಥಾನಕ್ಕೆ ಕಾರಣರಾದ ಎಲ್ಲರನ್ನೂ ಇಂದು ಸ್ಮರಿಸಿಕೊಳ್ಳುವಿರಿ. ಸಂತಾನದ ವಾರ್ತೆ ನಿಮಗೆ ಒಂದಿನ ಶುಭವಾರ್ತೆಯಾಗಲಿದೆ. ದುಡುಕುವುದು ನಿಮ್ಮ ಸ್ವಭಾವಕ್ಕೆ ವಿರುದ್ಧವಾದಂತೆ. ಹೊಸ ಮನೆಯನ್ನೋ ಜಾಗವನ್ನೋ ತೆಗದುಕೊಳ್ಳುವ ಪ್ರಸ್ತಾಪವಿರಲಿದೆ. ನೂತನ ಪ್ರಯತ್ನಕ್ಕೆ ಬಾಗಿಲು ತೆರೆಯಬೇಕೆಂದಿಲ್ಲ, ಕಿಟಕಿ ತೆರೆದು ಸಾಕು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಕೆಟ್ಟ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಔಚಿತ್ಯ ಪೂರ್ಣವಾಗಿ ಮಾತನಾಡುವಿರಿ. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಒಂದೇ ಆಯಾಮದ ಕಾರ್ಯಗಳಿಂದ ವಿಶ್ರಾಂತಿಯು ಬೇಕೆನಿಸಬಹುದು.

ವೃಷಭ ರಾಶಿ: ಆಯ್ಕೆಯ ವಿಚಾರದಲ್ಲಿ ನಿಮಗೆ ಒಪ್ಪುವುದನ್ನು ಆರಿಸಿಕೊಳ್ಳುವಿರಿ. ತೊಂದರೆ ತೆಗೆದುಕೊಳ್ಳುವ ಅಲ್ಪ ಯೋಚನೆಯೂ ಇರದು. ಇಂದು ಸ್ಪರ್ಧಾತ್ಮಕ ವಿಚಾರಗಳಿಂದ ಸೋಲಾಗುವುದು. ಶತ್ರುಗಳು ನಿಮ್ಮ ಹಿಂದೇ ಇದ್ದು ನಿಮ್ಮನ್ನು ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸಿ ಕೈ ಬಿಡವರು.‌ ವಿದ್ಯುದುಪಕರಣಗಳ ಖರೀದಿಯಿಂದ ನಿಮಗೆ ಧನವ್ಯಯವಾಗುವ ಸಾಧ್ಯತೆಯಿದೆ. ನಿಮಗಿರುವ ಕೌಶಲವು ಜನರಿಂದ ಮೆಚ್ಚುಗೆ ಪಡೆಯಲಿದೆ. ವೈಯಕ್ತಿಕ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು. ಹಣಬೇಕೆಂದು ಸಲ್ಲದ ದಾರಿಯಲ್ಲಿ ನಡೆದರೆ ಬಂದುದೆಲ್ಲ ಹಾಗೇ ಹೋಗುವುದು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ.

ಮಿಥುನ ರಾಶಿ: ನಿಮ್ಮ ಚಿತ್ತಶುದ್ಧಿಗೆ ಕ್ರಮಗಳು ಅಗತ್ಯ. ಇಂದು ಹಣಕಾಸಿನ ಉದ್ಯೋಗಿಗಳಿಗೆ ಒತ್ತಡದ ದಿನವಗಲಿದೆ. ಕಾಲಕ್ಕೆ ಕಾಯಬೇಕಾಗಿರುವುದರಿಂದ ನಿಮ್ಮ ಪ್ರಯತ್ನಗಳು ಸದಾ ನಡೆಯಲಿ. ದೈವಾನುಕೂಲ ಬಂದಾಗ ಅದಕ್ಕೆ ಹೊಳಪು ಬರಲಿದೆ. ಯಾರನ್ನೂ ಪೂರ್ಣ ನಂಬುವ ಸ್ಥಿತಿ ಇರದು. ಸಂಗಾತಿಯೊಡನೆ ಸಮಾರಂಭಕ್ಕೆ ಹೋಗಲಿದ್ದೀರಿ. ನಿಮ್ಮ ಮಾತುಗಳು ಸಭೆಯನ್ನು ಮೂಕವಿಸ್ಮಿತಗೊಳಿಸಲಿದೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲಿದ್ದೀರಿ. ಹಿಂದಿನ ಹಣಕಾಸಿನ ಸಮಸ್ಯೆಯು ಇಂದೂ ಕಾಣಿಸಿಕೊಳ್ಳಬಹುದು. ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಹಾಸ್ಯಕ್ಕಾಗಿ ಆಡಿದ ಮಾತು ಗಂಭೀರವಾಗಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಹೆಚ್ಚಿರುವುದು. ಯಾರಿಗಾದರೂ ಒಳ್ಳೆಯ ಮಾತುಗಳನ್ನು ಹೇಳಿ. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ.

ಕರ್ಕಾಟಕ ರಾಶಿ: ತನಗೆ ಗೊತ್ತಿಗೆ ಎಂಬ ಜಂಬವೇ ಪಾಠ ಕಲಿಸುವುದು. ಬಹಳ ದಿನಗಳಿಂದ ಹೇಳಬೇಕಾದ ವಿಷಯವನ್ನು ಹೇಳುವಿರಿ. ಮನಸ್ಸು ಹಗುರಾಗುವುದು. ಅತಿಯಾದ ಬುದ್ಧಿಯನ್ನು ಬಳಸಲು ಹೋಗಿ ಹಳ್ಳಕ್ಕೆ ಬೀಳುವ ಅವಕಾಶವನ್ನು ಇಟ್ಟುಕೊಳ್ಳುವುದು ಬೇಡ. ಮಾಡಲು ಏನೂ ಕೆಲಸವಿಲ್ಲವೆಂದು ಹೇಳಿ ನಿಮ್ಮರ ಬಾಯಿಗೆ ಸಿಗಬೇಡಿ. ಏನಾದರೂ ಉತ್ತಮವಾದ ಕೆಲಸವನ್ನು ಮಾಡಿ, ಅದನ್ನೇ ಹೇಳಿ. ಕರ್ತವ್ಯಶೂನ್ಯತೆಯಿಂದ ತಂದೆಗೆ ಬೇಸರವಾಗಬಹುದು. ಆಗ ತಾನಾಗಿಯೇ ಬಾಯಿ ಮುಚ್ಚುವುದು. ಕೆಲಸದ ಮೂಲಕ ಉತ್ತರಿಸುವ ನಿಮ್ಮ ಸ್ವಭಾವ ಹಲವರಿಗೆ ಇಷ್ಟವಾಗುವುದು. ದೈವಭಕ್ತಿಗೆ ಕೂಡಲೇ ಫಲ ಸಿಗದು. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಕಷ್ಟವಾದೀತು.

ಸಿಂಹ ರಾಶಿ: ಹಣಕಾಸಿನ ಸಮಸ್ಯೆಯಿಂದ ಒಪ್ಪಿಕೊಂಡ ಕೆಲಸ ಮುಂದುವರೆಯದು. ನಿಮ್ಮ ಭೂಮಿಯ ಖರೀದಿಯಲ್ಲಿ ಲಾಭವಿರಲಿದೆ. ಉತ್ಸಾಹದ ದಿನವನ್ನಾಗಿ ನೀವು ಮಾಡಿಕೊಳ್ಳುವಿರಿ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಪರಿಶ್ರಮದಿಂದ ಸಕಾಲಕ್ಕೆ ಸರಿಯಾಗಿ ಫಲವನ್ನು ಪಡೆಯುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ಮನಸ್ಸು ಖೇದಪಡುವುದು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಉನ್ನತ ಸ್ಥಾನವನ್ನು ತಲುಪುವ ಆಸೆ ಕಮರುವುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ವರ್ತನೆಗಳಲ್ಲಿ ಬದಲಾವಣೆಯನ್ನು ಆಪ್ತರು ಗಮನಿಸುವರು. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು.

ಕನ್ಯಾ ರಾಶಿ:  ನಿಮ್ಮ ಸಹನೆಯ ಪರೀಕ್ಷೆ ನಿರಂತರವಾಗಿ ಆಗುವುದು. ಇಂದು ನಿಮ್ಮ ಬಂಧುಗಳ ಅನಿರೀಕ್ಷಿತ ಭೇಟಿ ನಿಮ್ಮ ಯೋಜನೆಯನ್ನು ತಲೆಕೆಳಗೆ ಮಾಡಲಿದೆ. ಉತ್ತಮ ಆಹಾರವನ್ನು ಸೇವಿಸುವಿರಿ. ಯಾರದ್ದೋ ವಿಷಯಕ್ಕೆ ನೀವು ಮೂಗು ತೂರಿಸಿ ಅಪಮಾನಕ್ಕೆ ಸಿಕ್ಕಿಹಾಕಿಕೊಳ್ಳುವಿರಿ. ಅನಗತ್ಯ ಮಾತುಗಳಿಂದ ಸಣ್ಣವರಾಗುವಿರಿ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ನಿದ್ರಾಹಿನತೆಯಿಂದ ಆಲಸ್ಯವೂ ಬರಬಹುದು. ಉತ್ತಮ ಪುಸ್ತಕವನ್ನು ಇಂದಿನ ಸಖನನ್ನಾಗಿಸಿಕೊಳ್ಳಿ. ಇಂದು ನೀವು ಯಾರ ಮಾತಿಗೂ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ದಿವ್ಯಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಅಪರಿಚಿತರ ಜೊತೆ ಸೌಹಾರ್ದವಾಗಿ ಮಾತನಾಡಿ.

ತುಲಾ ರಾಶಿ: ನಿಮಗೆ ಕಷ್ಟವಾದರೂ ಕುಟುಂಬವನ್ನು ಮೆಚ್ಚಿಸುವಿರಿ. ಇಂದು ನಿಮ್ಮ ಬಳಿ ವಿವಾಹದ ಬಗ್ಗೆಯೂ ಮಾತನಾಡಬಹುದು. ಸ್ತ್ರೀಯರು ಇಂದು ತಾಳ್ಮೆಯನ್ನು ಕಳೆದುಕೊಂಡು ದುಃಖಿಸಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಎಲ್ಲದಕ್ಕೂ ಮಿತಿಯಿದೆ ಎಂದು ಅಂದುಕೊಂಡು ಸಮಾಧಾನವನ್ನು ಪಡೆಯುವಿರಿ. ವೈಷಮ್ಯವನ್ನು ನಾಜೂಕಿನಿಂದ ದೂರಮಾಡಬೇಕು. ನೀವಂದುಕೊಂಡ ಯೋಚನೆಗೆ‌ ಸರಿಯಾದ ಯೋಜನೆಯಾಗದೆ ತಲೆಕೆಡಿಕೊಳ್ಳುವಿರಿ. ಅತಿಯಾದ ಮಾತು ನಿಮ್ಮ ಜೊತೆಗಿರುವವರಿಗೆ ಅಸಹ್ಯವಾದೀತು. ನಿಮ್ಮ ವಿರೋಧಿಗಳನ್ನು ಸ್ತಬ್ಧಗೊಳಿಸೀತು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಮಕ್ಕಳ ವಿಚಾರದಲ್ಲಿ ನಿಮಗೆ ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಸಹವಾಸದ ಕಾರಣ ನಿಮ್ಮ ಮೇಲೆ ಸಲ್ಲದ ಆರೋಪಗಳು ಕೇಳಿಬರಬಹುದು.

ವೃಶ್ಚಿಕ ರಾಶಿ: ನಿಮ್ಮ ಆಯ್ಕೆ ಕ್ಷೇತ್ರದಲ್ಲಿ ಹೊಸ ಪ್ರಯತ್ನ ನಿರಂತರವಾಗಿರುವುದು. ಇಂದು ಮಕ್ಕಳ ಜೊತೆ ಬಹಳ ಸಂತೋಷದಿಂದ ಕಳೆಯುವಿರಿ. ಧಾನ್ಯ ವ್ಯಾಪಾರದವರಿಗೆ ಹೆಚ್ಚಿನ ಲಾಭವಿದೆ. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ಸುಮ್ಮನಿರುವವರ ಬಾಯಿಗೆ ಕೋಲುಹಾಕಿ ಹಾಳುಮಾಡಿಲೊಳ್ಳುವಿರಿ. ನಿಮ್ಮ ಪ್ರಭಾವವು ಅಷ್ಟಾಗಿ‌ ನಡೆಯದು. ಸಹೋದರನ ಜೊತೆ ನಿಮ್ಮ ಕಲಹವಿರಲಿದೆ. ಮನೆಯ ಸಂತೋಷದಿಂದ ಕಾಲವನ್ನು ಕಳೆಯುವಿರಿ. ಹೊಸ ವಸ್ತ್ರಗಳ ಖರೀದಿಯನ್ನು ಮಾಡಲಿದ್ದೀರಿ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯ ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಧನು ರಾಶಿ: ಕಾರ್ಯದ ಮೇಲೆ ಇಟ್ಟ ಶ್ರದ್ಧೆಯು ನಿಮ್ಮನ್ನು ಸುಸ್ಥಳಕ್ಕೆ ಕೊಂಡೊಯ್ಯುವುದು. ಇಂದು ನಿಮಗೆ ದೂರದ ಪ್ರಯಾಣ ಅನಿವಾರ್ಯವಾದರೆ ಮಾತ್ರ ಮಾಡಿ. ಇಲ್ಲವಾದರೆ ಇರುವ ಸ್ಥಳವೇ ನಿಮ್ಮ ಇಂದಿನ ಸ್ಥಿತಿಗೆ ಯೋಗ್ಯವಾಗಿದೆ. ನಿಮ್ಮ ಬಗ್ಗೆ ಇಲ್ಲದ ಆಪಾದನೆಗಳು ಬರಬಹುದು. ಸ್ತ್ರೀಯರಿಗೆ ಶತ್ರು ಬಾಧೆ ಹೆಚ್ಚಾಗುವುದು. ಯಂತ್ರಾಗಾರದಲ್ಲಿ ಕೆಲಸ ಮಾಡುವವರಿಗೆ ಶುಭವಿದೆ. ಮಾನಸಿಕ ತುಮುಲಗಳು ಇಂದಿರಲಿವೆ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ಮನೆಗೆ ಬಂದ ಹಿರಿಯರಿಗೆ ಯಥೋಚಿತ ಗೌರವ ನೀಡುವಿರಿ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ಕಠಿಣ ವ್ಯಾಯಾಮವನ್ನು ಮಾಡುವ ಮುಂಚೆ ದೇಹದ ಸಾಮರ್ಥ್ಯವನ್ನು ತಿಳಿಯಲು ವೈದ್ಯರನ್ನು ಭೇಟಿಯಾಗಿ.

ಮಕರ ರಾಶಿ: ಬಂಧುಗಳ ಕಷ್ಟಕ್ಕೆ ಸ್ಪಂದಿಸುವುದು ಅನಿವಾರ್ಯ. ಇಂದು ನಿಮಗೆ ಅನೇಕರು ನೀಡಿದ ಆರೋಗ್ಯದ ಸಲಹೆಯಿಂದ ಗೊಂದಲವಾಗಬಹುದು. ಗೃಹಬಳಕೆಯ ವಸ್ತುಗಳನ್ನು ಖರೀದಿಸುವ ಕೆಲಸಕ್ಕೆ ಹೋಗುವಿರಿ. ವಿವೇಚನೆ ಇಲ್ಲದೇ ಬೇಗನೆ ಕೋಪಗೊಳ್ಳುವಿರಿ. ಕಬ್ಬಿಣದ ವ್ಯಾಪಾರದಲ್ಲಿ ನಷ್ಟವಾಗಬಹುದು. ಇಂದಿನ ಬೆಳಗಿನ ನಿಮ್ಮ ಮನಃಸ್ಥಿತಿಯೇ ಇಂದಿನ ದಿನವನ್ನು ಹೇಳುತ್ತದೆ. ಸ್ನೇಹಿತರು ನಿಮ್ಮನ್ನು ಹಾಸ್ಯದ ವ್ಯಕ್ತಿಯಾಗಿ ಕಾಣುವರು. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ನಿಮ್ಮ ನೋವನ್ನು ಮಕ್ಕಳಿಗೆ ದಾಟಿಸಲಾರಿರಿ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ. ಯಾರಾದರೂ ನಿಮಗೆ ಉತ್ತಮ ಮಾರ್ಗದರ್ಶನವನ್ನು ಮಾಡಬಹುದು.

ಕುಂಭ ರಾಶಿ: ಆತ್ಮವಿಶ್ವಾಸದಿಂದ ಗುರಿಯನ್ನು ಸೇರಲು ಸಾಧ್ಯ. ಆದರೆ ಅದರ ಮುಂದಿನ ಹಂತದ ಬಗ್ಗೆಯೂ ಗಮನ ಬೇಕು. ಒತ್ತಡದಿಂದ ಉದ್ವೇಗಗೊಳ್ಳುವ ಸಾಧ್ಯತೆ ಇದೆ. ಇದರಿಂದ ಯಾರಾದರೂ ನಿಮ್ಮೊಡನೆ ಮಾತನಾಡಲು ಬಂದರೆ ಸಿಟ್ಟಗುವಿರಿ. ಮಾತು ಕಿರಿಕಿರಿ ಎನಿಸಿ ಕೇಳಲಾಗದು. ಸ್ನೇಹಿತರ ಭೇಟಿಯಿಂದ ಸಂತಸವಾಗಲಿದೆ. ಆರ್ಥಿಕವಾಗಿ ಗಟ್ಟಿ ಇದ್ದರೂ, ಅಕಸ್ಮಾತ್ ಆದ ಖರ್ಚು ನಿಮ್ಮನ್ನು ಕಂಗೆಡಿಸುವುದು. ನಿಮಗೆ ಬದಲಾವಣೆ ದೀರ್ಘಕಾಲ ಉಳಿಸಿಕೊಳ್ಳಲಾಗದು. ಹೊಸ ಉದ್ಯೋಗದ ಕಡೆಗೆ ಮನಸ್ಸು ಮಾಡುವಿರಿ. ಮನೋರಂಜನೆಯ ಕಾರ್ಯಕ್ರಮವನ್ನು ವೀಕ್ಷಿಸುವ ಮನಸ್ಸು ಮಾಡುವಿರಿ. ಕುಟುಂಬದವ ಹೆಚ್ಚು ಸಮಯವನ್ನು ಕಳೆಯುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ. ವ್ಯಾಪಾರದ ಗುಣಮಟ್ಟ ಹೆಚ್ಚಿಸಲು ಖರ್ಚು ಮಾಡಬೇಕಾಗುತ್ತದೆ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಅವಿವಾಹಿತರು ಯೋಗ್ಯವಾದ ಸಂಗಾತಿಯನ್ನು ಪಡೆಯುವರು.

ಮೀನ ರಾಶಿ: ಸ್ವಾಪರಾಧದಿಂದ ಪಶ್ಚಾತ್ತಾಪ ಮೂಡಬಹುದು. ಇಂದು ನೀವು ಯಾರನ್ನಾದರೂ ದ್ವೇಷಿಸುತ್ತಿದ್ದರೆ ತೋರಿಸಿಕೊಳ್ಳಬೇಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ತಿರುಗಾಟ ಮಾಡುವಿರಿ. ಆರ್ಥಿಕ ಹಿನ್ನಡೆಯನ್ನು ನೀವು ಸಹಿಸಲಾರಿರಿ. ಸಿಟ್ಟಿನ ಕೈಗೆ ಬುದ್ಧಿಯನ್ನು ಕೆಲಸವನ್ನು ಕೆಡಿಸಿಕೊಳ್ಳುವ ಅಗತ್ಯವು ಬರಬಹುದು. ನಿಮ್ಮನ್ನು ನಡತೆಯನ್ನು ಪ್ರಶ್ನಿಸಬಹುದು. ಮೌನವನ್ನೇ ಉತ್ತರವಾಗಿ ನೀಡಿ. ಸಮಯ ಬಂದಾಗ ತಾನಾಗಿಯೇ ಉತ್ತರವು ಅವರಿಗೆ ಗೋಚರಿಸುವುದು. ಅನುಕಂಪಕ್ಕೆ ಕರುಗುವಿರಿ. ನಿಮ್ಮವರ ಜೊತೆ ದೀರ್ಘಕಾಲದಿಂದ ಬಿಟ್ಟಿದ್ದ ಮಾತುಗಳನ್ನು ಇಂದಿನಿಂದ ಮುಂದುವರಿಸುವಿರಿ. ಸ್ವಂತ ವಾಹನದಿಂದ ನಿಮಗೆ ತೊಂದರೆಯಾಗಲಿದೆ. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು.

-ಲೋಹಿತಶರ್ಮಾ – 8762924271 (what’s app only)

ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ