Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ; ಇಲ್ಲಿದೆ ವೈರಲ್ ವಿಡಿಯೋ

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ; ಇಲ್ಲಿದೆ ವೈರಲ್ ವಿಡಿಯೋ

ಮದನ್​ ಕುಮಾರ್​
|

Updated on: Apr 15, 2025 | 10:49 PM

ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಪ್ರದರ್ಶನದ ವೇಳೆ ಅಭಿಮಾನಿಗಳ ನಡುವೆ ಕಿರಿಕ್ ಆಗಿದೆ. ಫ್ಯಾನ್ಸ್ ವಾರ್ ಮಿತಿ ಮೀರಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಅಜಿತ್ ಕುಮಾರ್​ ಹಾಗೂ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಇರುವ ದ್ವೇಷ ಇಂದು-ನಿನ್ನೆಯದಲ್ಲ. ಈ ಘಟನೆ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾದ ಪ್ರದರ್ಶನದ ಸಮಯದಲ್ಲಿ ಅಭಿಮಾನಿಗಳ ನಡುವೆ ಕಿರಿಕ್ ಶುರುವಾಗಿದೆ. ಥಿಯೇಟರ್​ ಒಳಗೆ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ಫ್ಯಾನ್ಸ್ ವಾರ್ ಮಿತಿ ಮೀರಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ದಳಪತಿ ವಿಜಯ್ (Thalapathy Vijay) ಮತ್ತು ಅಜಿತ್ ಕುಮಾರ್​ (Ajith Kumar) ಅಭಿಮಾನಿಗಳ ನಡುವೆ ಇರುವ ದ್ವೇಷ ಬಹಳ ಹಳೆಯದು. ಈಗ ಚಿತ್ರಮಂದಿರದಲ್ಲಿ ನಡೆದ ಈ ಘಟನೆ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.