ಮೈಸೂರು: 45ನೇ ಬ್ಯಾಚ್ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ಗಳ ನಿರ್ಗಮನ ಪಥಸಂಚಲನ; ಯಾರೆಲ್ಲಾ ಆಯ್ಕೆಯಾಗಿದ್ದಾರೆ ಗೊತ್ತಾ?

| Updated By: preethi shettigar

Updated on: Feb 02, 2022 | 11:00 AM

ಪಿಎಸ್‌ಐ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ಅವರು, ಒಟ್ಟು 228 ಪಿಎಸ್‌ಐಗಳಿಗೆ ಬಹುಮಾ‌ನ ವಿತರಿಸಿದ್ದಾರೆ. ಈ ವೇಳೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ. ಹರಿಶೇಖರನ್, ಪೊಲೀಸ್ ಮಹಾ ನಿರೀಕ್ಷಕ ಹಾಗೂ ನಿರ್ದೇಶಕ ವಿಪುಲ್ ಕುಮಾರ್ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಸೂರು: 45ನೇ ಬ್ಯಾಚ್ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ಗಳ ನಿರ್ಗಮನ ಪಥಸಂಚಲನ; ಯಾರೆಲ್ಲಾ ಆಯ್ಕೆಯಾಗಿದ್ದಾರೆ ಗೊತ್ತಾ?
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಮೈಸೂರು: 45ನೇ ತಂಡದ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ ಇಂದು (ಫೆಬ್ರವರಿ, 02) ನಡೆದಿದೆ. ಪೊಲೀಸ್(Karnataka Police) ಅಕಾಡೆಮಿ ಕವಾಯತು ಮೈದಾನದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ( Araga Jnanendra) ಭಾಗಿಯಾಗಿದ್ದಾರೆ. ಪಿಎಸ್‌ಐ(PSI) ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ಅವರು, ಒಟ್ಟು 228 ಪಿಎಸ್‌ಐಗಳಿಗೆ ಬಹುಮಾ‌ನ ವಿತರಿಸಿದ್ದಾರೆ. ಈ ವೇಳೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ. ಹರಿಶೇಖರನ್, ಪೊಲೀಸ್ ಮಹಾ ನಿರೀಕ್ಷಕ ಹಾಗೂ ನಿರ್ದೇಶಕ ವಿಪುಲ್ ಕುಮಾರ್ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಒಟ್ಟು 228 ಪಿಎಸ್‌ಐಗಳು ಅಭ್ಯರ್ಥಿಗಳು ಪಥಸಂಚಲನದಲ್ಲಿ ಭಾಗಿ:

  • ಬಿಇ ಮೆಕ್ಯಾನಿಕಲ್ ಓದಿರುವ 37 ಅಭ್ಯರ್ಥಿಗಳು
  • ಬಿಇ ಸಿವಿಲ್ 17
  • ಬಿಕಾಂ 16
  • ಬಿಎಸ್​ಸಿ ಅಗ್ರಿಕಲ್ಚರ್ 10
  • ಬಿಇ ಕಂಪ್ಯೂಟರ್ ಸೈನ್ಸ್ 09
  • ಎಂಎಸ್​ಸಿ ಅಗ್ರಿಕಲ್ಚರ್ 04
  • ಎಂಎ ಎಕನಾಮಿಕ್ಸ್ 02
  • ಎಂಎಸ್ಸಿ ಬಾಟ್ನಿ, ಕೆಮಿಸ್ಟ್ರಿ, ಮ್ಯಾಥಮೆಟಿಕ್‌ನ ತಲಾ ಒಬ್ಬರು
  • ಬಿಎಸ್ಸಿ ಬಿಎಡ್ 01
  • ಬಿಇ ಏರೋನಾಟಿಕ್ಸ್, ಆಟೋಮೊಬೈಲ್ ತಲಾ ಒಬ್ಬರು
  • ಎ‌ಂ‌ಬಿಎ 02 ಸೇರಿ 228 ಅಭ್ಯರ್ಥಿಗಳು

ಈ ಬಾರಿ ಉತ್ತರ ಕರ್ನಾಟಕದವರದ್ದೇ ಸಿಂಹಪಾಲು

ಬೆಳಗಾವಿ 65, ಬಾಗಲಕೋಟೆ 52, ವಿಜಯಪುರ 38, ರಾಯಚೂರು 18, ಕಲಬುರಗಿ 14, ಬೆಳಗಾವಿ ನಗರ 11, ಕೊಪ್ಪಳ 7, ಯಾದಗಿರಿ 6, ಗದಗ 6, ಬೀದರ್ 5, ಧಾರವಾಡ 4, ಮೈಸೂರು 1, ಬೆಂಗಳೂರಿನ ಒಬ್ಬ ಪಿಎಸ್‌ಐ ಪ್ರಶಿಕ್ಷಣಾರ್ಥಿ ಅಭ್ಯರ್ಥಿ

ಗ್ರಾಮೀಣ ಭಾಗದವರ ಪಾರುಪತ್ಯ

175 ಅಭ್ಯರ್ಥಿಗಳು ಗ್ರಾಮೀಣ ಭಾಗದಿಂದ, 53 ಅಭ್ಯರ್ಥಿಗಳು ನಗರ ಪ್ರದೇಶದಿಂದ ಬಂದವರಿದ್ದಾರೆ. 183 ಪುರುಷರು, 45 ಮಹಿಳಾ ಪ್ರಶಿಕ್ಷಣಾರ್ಥಿಗಳಿದ್ದಾರೆ. ಇನ್ನೂ ಅವಿವಾಹಿತರು 187, ವಿವಾಹಿತರು 41 ಜನ ಅಭ್ಯರ್ಥಿಗಳು ಇದ್ದಾರೆ.

ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

ರಾಷ್ಟ್ರ ಕಟ್ಟಲು ನಾವು ಬದುಕಬೇಕಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಕೊವಿಡ್ ಹಿನ್ನೆಲೆ ಪ್ರಶಿಕ್ಷಣಾರ್ಥಿಗಳ ಪೋಷಕರು ಭಾಗಿಯಾಗಿಲ್ಲ. ಒಂದು ಹೊಸ ರಕ್ತ ಗೃಹ ಇಲಾಖೆಗೆ ಸೇರ್ಪಡೆಯಾಗುತ್ತಿದೆ. ನಮ್ಮ ರಾಷ್ಟ್ರ ಧ್ವಜ ಪೊಲೀಸ್ ಧ್ವಜ ಒಟ್ಟಿಗೆ. ಅವರೆಡು ಬರಿ ಬಟ್ಟೆಯ ಚೂರಲ್ಲ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ಗಳಿಸಿರುವ ಪವಿತ್ರ ಧ್ವಜ. ತ್ಯಾಗದ ಸಂದೇಶ ಇದರಲ್ಲಿ ಅಡಗಿದೆ. ರಾಷ್ಟ್ರ ಕಟ್ಟಲು ನಾವು ಬದುಕಬೇಕಿದೆ. ಬದುಕನ್ನು ಕಟ್ಟಿ ಮಡಿದರು ನಾವು ರಾಷ್ಟ್ರ ಕಟ್ಟಲು ಬದುಕಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ರಕ್ಷಣೆ ಅಂದರೆ ಗಡಿಯ ಸೈನಿಕರು. ಆತಂರಿಕ ಭದ್ರತೆ ನಾಗರೀಕರ ಮಾನ ಪ್ರಾಣ ಕಾಪಾಡುವ ಹೊಣೆಗಾರಿಕೆ ಪೊಲೀಸರದ್ದು. ಸೈನಿಕರಷ್ಟೇ ಪೊಲೀಸರು 24*7 ಕೆಲಸ ಮಾಡುತ್ತಿದ್ದಾರೆ. ಸೈನಿಕರಿಗಿಂತ ಪೊಲೀಸರು ವಿಭಿನ್ನ. ಸೈನಿಕರಿಗೆ ಶತೃಗಳು ಕಾಣಿಸುತ್ತಾರೆ. ಕೊಲ್ಲಬೇಕು ಅಥವಾ ಮಡಿಯಬೇಕು. ಆದರೆ ಪೊಲೀಸರು ಕೊಲ್ಲಲು ಇಲ್ಲ ಕಾನೂನು ಇದಕ್ಕೆ ಅಡ್ಡಿಬರುತ್ತದೆ. ಸೈನಿಕರಷ್ಟು ಕಠಿಣವಾಗಿ ವರ್ತಿಸುವ ಹಾಗೆ ಇಲ್ಲ ಎಂದು ತಿಳಿಸಿದ್ದಾರೆ.

ಸಾರ್ವಜನಿಕರನ್ನು ಬಂಧುಗಳಂತೆ ನೋಡಬೇಕು. ಕಾನೂನು ವಿರೋಧಿಸುವ ಕ್ರಿಮಿನಲ್‌ಗಳಿಗೆ ಭಯ ಹುಟ್ಟಿಸಬೇಕು. ನಾಗರೀಕರಿಗೆ ಸಜ್ಜನರಿಗೆ ಅಭಯವನ್ನು ನೀಡಬೇಕು. ಕೆಲವು ಪೊಲೀಸರು ಅನಿಷ್ಟತನ ನೋಡಿದಾಗ ಉತ್ತಮ ನಡವಳಿಕೆಯವರು ತಲೆ ತಗ್ಗಿಸಬೇಕಾಗಿದೆ. ಒಮ್ಮೆಯೂ ತಲೆ ತಗ್ಗಿಸುವ ಕೆಲಸ ಮಾಡಬಾರದು. ಯಾವುದೇ ಅಪಚಾರಗಳು ನಮ್ಮಿಂದ ಆಗಬಾರದು. ನಾವು ಅವರ ರಕ್ಷಕರಾಗಬೇಕು ನಾವು ಯಾರ ಗುಲಾಮರಾಗಬಾರದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಬಹಳ ಜನ ಹೇಳುತ್ತಾರೆ ಪೊಲೀಸ್ ಠಾಣೆಗಳು ಮರ್ಯಾದಸ್ಥರು ಹೋಗವ ಸ್ಥಳವಲ್ಲ ಅಂತಾ. ಇಲ್ಲಿ ಹಲವರು ಉನ್ನತ ಶಿಕ್ಷಣ ಪಡೆದವರಿದ್ದಾರೆ. ಈ ತರಬೇತಿ ನೀಡಿರುವುದು ಯಾರಿಗೂ ಹಿಂಸೆ ಕೊಡಲು ಅಲ್ಲ. ಇದು ಜನರ ರಕ್ಷಣೆಗೆ ನೀಡಿರುವ ತರಬೇತಿ. ಸೈಬರ್ ವಿಂಗ್ ಎಫ್‌ಎಸ್‌ಎಲ್ ವಿಭಾಗವನ್ನು ಬಲಪಡಿಸುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಎಫ್​ಎಸ್​ಎಲ್​ ಲ್ಯಾಬ್‌ಗೆ ಚಿಂತನೆ ಮಾಡಿದ್ದೇವೆ. ಉತ್ತಮ ಶಸ್ತ್ರಾಸ್ತ್ರ ನಿಮಗೆ ಕೊಡುತ್ತಿದ್ದೇವೆ. ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಸಾರ್ವಜನಿಕರ ರಕ್ಷಣೆಗೂ ಸಹ ಆಕೆ ಬದ್ದ ಎಂದು ಹೇಳಿದ್ದಾರೆ.

ಅಕಾಡೆಮಿ‌ ನಿರ್ದೇಶಕ ವಿಪುಲ್ ಕುಮಾರ್ ಹೊಗಳಿದ ಗೃಹ ಸಚಿವರು

ಹೃದಯದಿಂದ ಅಕಾಡೆಮಿಯಲ್ಲಿ ಅಧಿಕಾರಿಗಳು ಕೆಲಸ ಮಾಡಲ್ಲ. ಎಲ್ಲೂ ಸಿಗಲಿಲ್ಲ ಅಂದರೆ ಇಲ್ಲಿ ಓಕೆ ಅನ್ನೋ ವಾತಾವರಣ ಇದೆ. ಆದರೆ ವಿಪುಲ್ ಕುಮಾರ್ ಇಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿ

ಮಗು ಹುಟ್ಟಿದ ಬಳಿಕ ಯಡಿಯೂರಪ್ಪನವರ ಮೊಮ್ಮಗಳು ಖಿನ್ನತೆಗೆ ಒಳಗಾಗಿದ್ದರು; ಆತ್ಮಹತ್ಯೆ ಕಾರಣ ಬಿಚ್ಚಿಟ್ಟ ಆರಗ ಜ್ಞಾನೇಂದ್ರ

Published On - 10:06 am, Wed, 2 February 22