
ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ 3, ಬಾಗಲಕೋಟೆಯ ಇಬ್ಬರಿಗೆ ಕೊರೊನಾ ತಗುಲಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಈವರೆಗೆ 25 ಜನರು ಬಲಿಯಾಗಿದ್ದಾರೆ. 606 ಸೋಂಕಿತರ ಪೈಕಿ 282 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 299 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಂದು ದೃಢವಾದ ಸೋಂಕಿತರ ವಿವರ ಹೀಗಿದೆ:
602ನೇ ಸೋಂಕಿತೆ ಕಲಬುರಗಿಯ 13 ವರ್ಷದ ಯುವತಿ
532ನೇ ಸೋಂಕಿತರ ಸಂಪರ್ಕದಿಂದ ಯುವತಿಗೆ ಸೋಂಕು
603ನೇ ಸೋಂಕಿತ ಕಲಬುರಗಿಯ 54 ವರ್ಷದ ಪುರುಷ
532ನೇ ಸೋಂಕಿತರ ಸಂಪರ್ಕದಿಂದ ವ್ಯಕ್ತಿಗೆ ಸೋಂಕು
604ನೇ ಸೋಂಕಿತ ಕಲಬುರಗಿಯ 41 ವರ್ಷದ ಪುರುಷ
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು
605ನೇ ಸೋಂಕಿತ ಮುಧೋಳದ 68 ವರ್ಷದ ವೃದ್ಧ
ಬಾಗಲಕೋಟೆ ಜಿಲ್ಲೆಯ ಮುಧೋಳದ ವೃದ್ಧನಿಗೆ ಸೋಂಕು
380ನೇ ಸೋಂಕಿತರ ಸಂಪರ್ಕದಿಂದ ವೃದ್ಧನಿಗೆ ಸೋಂಕು
606ನೇ ಸೋಂಕಿತೆ ಮುಧೋಳದ 60 ವರ್ಷದ ವೃದ್ಧೆ
380ನೇ ಸೋಂಕಿತರ ಸಂಪರ್ಕದಿಂದ ವೃದ್ಧನಿಗೆ ಸೋಂಕು
Published On - 12:13 pm, Sun, 3 May 20