ದೇಶದಲ್ಲಿ ಪ್ರತಿನಿತ್ಯ 50 ಲಕ್ಷ ಕೋವಿಡ್​ ಕೇಸ್ ಪತ್ತೆ: ಜಗತ್ತಿನಾದ್ಯಂತ 10 ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪುವ ಸಾಧ್ಯತೆ – ಸಚಿವ ಕೆ. ಸುಧಾಕರ

| Updated By: Digi Tech Desk

Updated on: Dec 23, 2022 | 6:36 PM

ಭಾರತದಲ್ಲಿ ಪ್ರತಿನಿತ್ಯ 50 ಲಕ್ಷ ಕೇಸ್ ಬರುತ್ತಿದ್ದು, ಶೇಕಡಾ 0.03ರಷ್ಟು ಕೊರೊನಾ ಸಕ್ರಿಯ ಪ್ರಕರಣ ದಾಖಲಾಗಿವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ ಹೇಳಿದ್ದಾರೆ.

ದೇಶದಲ್ಲಿ ಪ್ರತಿನಿತ್ಯ 50 ಲಕ್ಷ ಕೋವಿಡ್​ ಕೇಸ್ ಪತ್ತೆ: ಜಗತ್ತಿನಾದ್ಯಂತ 10 ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪುವ ಸಾಧ್ಯತೆ - ಸಚಿವ ಕೆ. ಸುಧಾಕರ
Follow us on

ಬೆಂಗಳೂರು: ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ (India) ಕೊರೊನಾ (Covid) ನಿಯಂತ್ರಣದಲ್ಲಿದೆ. ಪ್ರತಿನಿತ್ಯ 50 ಲಕ್ಷ ಕೇಸ್ ಬರುತ್ತಿವೆ. ದೇಶದಲ್ಲಿ ಶೇಕಡಾ 0.03ರಷ್ಟು ಕೊರೊನಾ ಸಕ್ರಿಯ ಪ್ರಕರಣ ಇದೆ. ಅಮೆರಿಕ ಸಂಸ್ಥೆ ವರದಿ ಪ್ರಕಾರ ಜಗತ್ತಿನಾದ್ಯಂತ 10 ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ (K. Sudhakar) ಹೇಳಿದ್ದಾರೆ.

ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಜತೆ ಕೇಂದ್ರದ ಆರೋಗ್ಯ ಸಚಿವರಾದ ಮನ್ ಸುಖ್ ಮಾಂಡವೀಯ ಅವರು ಇಂದು (ಡಿ.23) ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಕೂಡ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:  ಯಾದಗಿರಿಯಲ್ಲಿ ಮಾಸ್ಕ್, ಬೂಸ್ಟರ್ ಡೋಸ್ ಕಡ್ಡಾಯ : ಡಿಹೆಚ್​ಓ ಡಾ.ಗುರುರಾಜ್ ಹಿರೇಗೌಡರ್

ಬಳಿಕ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆವರು ಚೀನಾ ಜನರು ಲಸಿಕೆ ಪಡೆಯುವುದರಲ್ಲಿ ನಮ್ಮಷ್ಟು ಯಶಸ್ಸು ಕಂಡಿಲ್ಲ. ಡಿ.27ರಂದು ರೋಗ ನಿರ್ವಹಣೆ ಕುರಿತು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ರೂಪಾಂತರಿ ತಳಿ BF.7 ಒಬ್ಬರಿಂದ 17 ಜನರಿಗೆ ಹರಡುವ ವೈರಸ್​​​ ಆಗಿದೆ. ವಿದೇಶಿ ಪ್ರಯಾಣಿಕರು ಆರ್ಟಿಇಸಿಆರ್ ನೆಗೆಟಿವ್​ ವರದಿ ತರುವಂತೆ ಕಡ್ಡಾಯಗೊಳಿಸಿ ಎಂದು ಕೇಂದ್ರಕ್ಕೆ ಸಲಹೆ ನೀಡಿದ್ದೇನೆ ಎಂದು ಸುಧಾಕರ್​ ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣ ಸಂಖ್ಯೆ ಕಡಿಮೆ ಇದೆ

ಕೇಂದ್ರ ಆರೋಗ್ಯ ಇಲಾಖೆ ಸೋಂಕಿತರ ಪ್ರಮಾಣದ ವಿವರ ನೀಡಿದೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣ ಸಂಖ್ಯೆ ಕಡಿಮೆ ಇದೆ. ಚೀನಾದಲ್ಲಿ ಪ್ರತಿದಿನವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಸೋಂಕು ಹೆಚ್ಚಾಗಲು ವ್ಯಾಕ್ಸಿನ್​ ಕಾರಣವಾಗಿರಬಹುದು. ಬೇರೆ ದೇಶಗಳ ಪ್ರಕರಣ ನೋಡಿದಾಗ ನಾವು ಎಚ್ಚರ ವಹಿಸಬೇಕು. ಕೊರೊನಾ ಟೆಸ್ಟಿಂಗ್ ಹೆಚ್ಚಿಸಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ ಎಂದು ಡಾ. ಕೆ ಸುಧಾರಕರ್​ ಹೇಳಿದ್ದಾರೆ.

ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಆಡಳಿತ ಪಕ್ಷದ ಶಾಸಕರು, ಸಚಿವರು ಗೈರು: ಗಡಿ ಚರ್ಚೆ ವೇಳೆ ಹಾಜರಾಗದ ಬೆಳಗಾವಿ ಜನಪ್ರತಿನಿಧಿಗಳು

ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಗಮನಹರಿಸಲು ಕೇಂದ್ರ ಸೂಚನೆ

ಹೊಸ ವರ್ಷಾಚರಣೆಗೆ ಹೊಸ ಗೈಡ್‌ಲೈನ್ಸ್‌ ಜಾರಿ ವಿಚಾರವಾಗಿ ಮಾತನಾಡಿದ ಅವರು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಗಮನಹರಿಸಲು ಕೇಂದ್ರ ಸೂಚನೆ ನೀಡಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Fri, 23 December 22