ಸೇತುವೆ ನಿರ್ಮಾಣದ ವೇಳೆ 7 ಜನ ಬಲಿ, ಸೇತುವೆ ಕುಸಿದಾಗ ಸಾವಿಲ್ಲ: ದೈವ ಪವಾಡವೆಂದ ಜನರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 12, 2024 | 8:42 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಭಾಗ್ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ್ ಕಲ್ಪಿಸಲು ಕಾಳಿ ನದಿಗೆ ಕಟ್ಟಿರುವ ಸೇತುವೆ ಕಳೆದ ಅಗಸ್ಟ್ 6 ರಮಧ್ಯರಾತ್ರಿ ಕುಸಿದ ಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿಯ ಸೇತುವೆ ಕುಸಿದರು ಒಂದೇ ಒಂದು ಪ್ರಾಣ ಹಾನಿ ಸಂಭವಿಸದಿರುವುದಕ್ಕೆ ಮದ್ಯಪ್ರಿಯ ಕಾಫ್ರಿ ದೇವರ ಪವಾಡ ಅಂತಾ ಕಾರವಾರ ಹಾಗೂ ಗೋವಾ ಭಾಗದಲ್ಲಿನ ಜನ ಅಂದುಕೊಳ್ಳುತ್ತಿದ್ದಾರೆ.

ಸೇತುವೆ ನಿರ್ಮಾಣದ ವೇಳೆ 7 ಜನ ಬಲಿ, ಸೇತುವೆ ಕುಸಿದಾಗ ಸಾವಿಲ್ಲ: ದೈವ ಪವಾಡವೆಂದ ಜನರು
ಸೇತುವೆ ನಿರ್ಮಾಣದ ವೇಳೆ 7 ಜನ ಬಲಿ, ಸೇತುವೆ ಕುಸಿದಾಗ ಸಾವಿಲ್ಲ: ದೈವ ಪವಾಡವೆಂದ ಜನರು
Follow us on

ಉತ್ತರ ಕನ್ನಡ, ಆಗಸ್ಟ್​ 12: ಆಗಸ್ಟ್ 6 ರ ಮಧ್ಯರಾತ್ರಿ ಒಂದು ಗಂಟೆಗೆ ಒಮ್ಮಿಂದ ಒಮ್ಮೆಲೆ ಕುಸಿದ ಬಿದ್ದ (bridge collapse) ಕೊಡಭಾಗ ಸೇತುವೆಯ ಹಿಂದೆ ದೇವರ ಪವಾಡ ಶಕ್ತಿ ಅಡಗಿದೆ ಎನ್ನಲಾಗುತ್ತಿದೆ. ಸೇತುವೆ ನಿರ್ಮಾಣದ ವೇಳೆ ಅನೇಕ ಸಮಸ್ಯೆಗಳು ಉಂಟಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಲ್ಪಿಸುವ ಸೇತುವೆ, ಒಮ್ಮಿಂದ ಒಮ್ಮೆಲೆ ಕುಸಿದರು ಪ್ರಾಣ ಹಾನಿ ಸಂಭವಿಸಿದರ ಹಿಂದೆ ಮದ್ಯಪ್ರಿಯ ದೈವ (god)​​ ಶಕ್ತಿ ಇದೆ ಎನ್ನಲಾಗುತ್ತಿದೆ.

ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಭಾಗ್ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ್ ಕಲ್ಪಿಸಲು ಕಾಳಿ ನದಿಗೆ ಕಟ್ಟಿರುವ ಸೇತುವೆ ಕಳೆದ ಅಗಸ್ಟ್ 6 ರಮಧ್ಯರಾತ್ರಿ ಕುಸಿದ ಬಿದ್ದ 41 ವರ್ಷಗಳ ಹಳೆ ಸೇತುವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕಾರವಾರ ಮತ್ತು ಗೋವಾ ದಕ್ಷಿಣ ಭಾಗದಲ್ಲಿನ ಜನರಿಗೆ ಬರ ಸಿಡಿಲು ಬಡಿದಂತರಾಗಿತ್ತು. ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುವ ಈ ಸೇತುವೆ ಮಧ್ಯ ರಾತ್ರಿ ಕುಸಿದಿದೆ ಅಂದ್ರೆ ಅದೆಷ್ಟು ವಾಹನಗಳು ನೀರು ಪಾಲು ಆಗಿದಿಯೋ ಎಂಬ ಆತಂಕ ಮನೆ ಮಾಡಿತ್ತು. ಆದರೆ ಅದೃಷ್ಟವಶಾತ ಒಂದೇ ಒಂದು ಲಾರಿ ನೀರು ಪಾಲಾಗಿತ್ತು. ಆ ಲಾರಿಯ ಚಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಕಾರವಾರ ಸೇತುವೆ ಕುಸಿತ: ತಾವೇ ನಿರ್ಮಿಸಿದ ಸೇತುವೆ ಸಾಮರ್ಥ್ಯದ ಬಗ್ಗೆ NHAIಗೆ ಸಂಶಯ?

ಇಂತಹ ದೊಡ್ಡ ಸೇತುವೆ ಕುಸಿದರು ಒಂದೇ ಒಂದು ಪ್ರಾಣಾಪಾಯ ಸಂಭವಿಸದೆ ಇರುವುದಕ್ಕೆ ಆ ಮದ್ಯ ಪ್ರಿಯ ದೈವ್ ಶಕ್ತಿಯೇ ಕಾರಣ ಎಂಬುವುದು ಈ ಭಾಗದ ಜನರಿಗೆ ನಂಬಿಕೆಯ ಮಾತಾಗಿದೆ. ಪ್ರಕೃತಿಯ ಮಡಿಲಲ್ಲಿ 1965 ರಲ್ಲಿ ಸೇತುವೆ ನಿರ್ಮಾಣ ಮಾಡಲು ಮುಂದಾಗಿದ್ದಾಗ ಹತ್ತು ಹಲವು ಅಡಚಣೆಗಳು ಎದುರಾಗಿದ್ದವು. ಸುಮಾರು ಹತ್ತು ವರ್ಷಗಳ ಕಾಲ ಒಂದೇ ಒಂದು ಕಂಪನಿ ಕೂಡ ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಅದರ ಬಳಿಕ 1973 ರಲ್ಲಿ ಗ್ಯಾಮನ್ ಇಂಡಿಯಾ ಕಂಪನಿ ದವರು ಸೇತುವೆ ನಿರ್ಮಾಣಕ್ಕೆ ಮುಂದಾದರು ಆದ್ರೆ ಆ ಸಮಯದಲ್ಲಿ ಸುಮಾರು ಏಳು ಜನರು ಸಾವನಪ್ಪಿದ್ದರು.

ಶತಮಾನಗಳ ಕನಸು ನನಸು ಮಾಡಿ ಈ ಭಾಗದ ಜನರಿಗೆ ಅನಕೂಲ ಮಾಡಲು ಮುಂದಾದಾಗ ಈ ಸಮಸ್ಯೆ ಎದುರಾಗಿದಕ್ಕೆ ಕಂಗೆಟ್ಟ ಆಗಿನ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾರವಾರ-ಗೋವಾ ನಗರವಾಸಿಗಳು, ಸೇತುವೆ ಪಕ್ಕದಲ್ಲಿರುವ ಐತಿಹಾಸಿಕ ಕಾಫ್ರಿ ದೇವರ ಮೊರೆ ಹೋಗಿದ್ದರು. ಆ ದೈವ ಇಷ್ಟದ ಮದ್ಯ ಹಾಗೂ ಸಿಗರೇಟು ಅರ್ಪಣೆ ಮಾಡಿ ಸೇತುವೆ ನಿರ್ಮಾಣಕ್ಕೆ ಆಗುತ್ತಿರುವ ಅಡ್ಡಿ ತಡೆಯುವಂತೆ ಬೇಡಿಕೊಂಡರು, ಅಷ್ಟೆ ಅಲ್ಲದೆ ಸೇತುವೆ ನಿರ್ಮಾಣದ ಬಳಿಕವೂ ಯಾವುದೇ ಸಮಸ್ಯೆ ಆಗದಿರಲಿ ಅಂತಾ ಈ ಭಾಗದ ಜನ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಿಶೇಷ ಜಾತ್ರೆ ಆಚರಿಸುವುದರ ಮೂಲಕ ರಕ್ಷಣೆ ಮಾಡುವಂತೆ ಕಾಫ್ರಿ ದೇವರಿಗೆ ಪ್ರಾರ್ಥಿಸುತ್ತಾರೆ. ಈ ಭಾಗದ ಜನರ ಪ್ರಾರ್ಥನೆ ಅಂತೆ ಸೇತುವೆ ತುಂಡು ತುಂಡಾಗಿ ಕುಸಿದು ಬಿದ್ದರು ಒಂದೇ ಒಂದು ಪ್ರಾಣ ಹಾನಿ ಸಂಭವಸಿಲ್ಲ ಅಂತಾರೆ ಸ್ಥಳಿಯರು.

ಇದನ್ನೂ ಓದಿ: ಕಾಳಿ ನದಿ ಹಳೆ ಸೇತುವೆ ಕುಸಿತ; ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧ

ರಾಷ್ಟ್ರೀಯ ಹೆದ್ದಾರಿಯ ಸೇತುವೆ ಕುಸಿದರು ಒಂದೇ ಒಂದು ಪ್ರಾಣ ಹಾನಿ ಸಂಭವಿಸದ್ದಕ್ಕೆ, ಕಾರವಾರ ಬಳಿಯ ಕೊಡಿಭಾಗದಲ್ಲಿ ನೆಲೆಸಿದ್ದ ಮದ್ಯಪ್ರಿಯ ಕಾಫ್ರಿ ದೇವರ ಪವಾಡ ಅಂತಾ ಕಾರವಾರ ಹಾಗೂ ಗೋವಾ ಭಾಗದಲ್ಲಿನ ಜನ ಅಂದುಕೊಳ್ಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.