AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಳಿ ನದಿ ಹಳೆ ಸೇತುವೆ ಕುಸಿತ; ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧ

ರಾಷ್ಟ್ರೀಯ ಹೆದ್ದಾರಿ 66ರ ಕಾರವಾರ ಹಾಗೂ ಗೋವಾಗೆ ಸಂಪರ್ಕ ಕಲ್ಪಿಸುವಂತೆ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಹಳೆ ಸೇತುವೆ ಕುಸಿದುಬಿದ್ದಿದೆ. ಈ ಹಿನ್ನೆಲೆ ಹೊಸ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಂಕೋಲಾದ ಹಟ್ಟಿಕೇರಿ ಟೋಲ್‌ಗೇಟ್ ಬಳಿ ಸರಕು ವಾಹನಗಳಿಗೆ ತಡೆ ಹಿಡಿಯಲಾಗುತ್ತಿದೆ.

ಕಾಳಿ ನದಿ ಹಳೆ ಸೇತುವೆ ಕುಸಿತ; ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧ
ಕಾಳಿ ನದಿ ಹಳೆ ಸೇತುವೆ ಕುಸಿತ; ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರನಿಷೇಧ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Aug 07, 2024 | 2:13 PM

Share

ಕಾರವಾರ, ಆಗಸ್ಟ್.07: ಕಾರವಾರದ ಕೋಡಿಭಾಗ್​ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ ಕುಸಿದು (Bridge Collapse) ಬಿದ್ದಿದೆ. ಈ ಹಿನ್ನೆಲೆ ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಕಾರವಾರ ಹಾಗೂ ಗೋವಾಗೆ ಸಂಪರ್ಕ ಕಲ್ಪಿಸುವಂತೆ ಕಾಳಿ ನದಿಗೆ 41 ವರ್ಷದ ಹಿಂದೆ ಸೇತುವೆ ಕಟ್ಟಲಾಗಿತ್ತು. ಈ ಸೇತುವೆ ಹಳೆಯದಾದ ಹಿನ್ನೆಲೆ ಪಕ್ಕದಲ್ಲೇ ಮತ್ತೊಂದು ಹೊಸ ಸೇತುವೆ ಕಟ್ಟಲಾಗಿದೆ. ಇದೀಗ ಹಳೆ ಸೇತುವೆ ಕುಸಿದಿದ್ದು ಹೊಸ ಸೇತುವೆ ಮೇಲೂ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಪೊಲೀಸ್ ಇಲಾಖೆ ಹೊಸ ಸೇತುವೆ ಮೇಲೆ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕೊಡ್ತಿದ್ದಾರೆ. ಭಾರೀ ವಾಹನಗಳ ಸಂಚಾರ ನಿಷೇಧ ಹಿನ್ನಲೆ ಅಂಕೋಲಾದ ಹಟ್ಟಿಕೇರಿ ಟೋಲ್‌ಗೇಟ್ ಬಳಿ ಸರಕು ವಾಹನಗಳಿಗೆ ತಡೆ ಹಿಡಿಯಲಾಗುತ್ತಿದೆ. ವಾಹನ ದಟ್ಟಣೆ ಉಂಟಾಗದಂತೆ ಸರಕು ವಾಹನಗಳನ್ನ ತಡೆದು ನಿಲ್ಲಿಸಲಾಗುತ್ತಿದೆ. ಗೋವಾ ಮಾರ್ಗಕ್ಕೆ ತೆರಳುವ ಭಾರೀ ವಾಹನಗಳಿಗೆ ಟೋಲ್‌‌ನಲ್ಲೇ ತಡೆದು ಪೊಲೀಸರು ನಿಲ್ಲಿಸುತ್ತಿದ್ದಾರೆ. ಭಾರೀ ವಾಹನ ಸಂಚಾರ ಆರಂಭವಾಗುವವರೆಗೆ ಸರಕು ವಾಹನಗಳಿಗೆ ತಡೆ ಹಿಡಿಯಲಾಗಿದೆ.

ಇದನ್ನೂ ಓದಿ: ಕಾರವಾರ ಸೇತುವೆ ಕುಸಿತ: ಕಾಳಿ ನದಿಗೆ ಬಿದ್ದು ಬದುಕಿ ಬಂದ ರೋಚಕ ಅನುಭವ ವಿವರಿಸಿದ ಲಾರಿ ಚಾಲಕ ಬಾಲ ಮುರುಗನ್

41 ವರ್ಷದ ಹಳೆಯ ಸೇತುವೆ ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಸಿದುಬಿದ್ದಿದೆ. NHAI ಹಾಗೂ IRB ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದೊಡ್ಡ ದುರಂತವೇ ನಡೆದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣದ ವೇಳೆ ಒಂದೇ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದ್ರೆ ಇನ್ನೊಂದು ಮಾರ್ಗಕ್ಕೆ ಹೊಸ ಸೇತುವೆ ನಿರ್ಮಾಣ ಮಾಡದೇ, ಇರುವ ಹಳೆ ಸೇತುವೆಯನ್ನೆ ಬಳಸಲಾಗ್ತಿತ್ತು. ಹೀಗಾಗಿ ಇಂತಹದೊಂದು ಅನಾಹುತ ನಡೆದು ಹೋಗಿದೆ.

ಸೇತುವೆ ಕುಸಿತದಲ್ಲಿ ತಮಿಳುನಾಡು ಮೂಲಕ ಲಾರಿ ಚಾಲಕ ಬಚಾವ್​ ಆಗಿದ್ದೇ ಪವಾಡ. ಗೋವಾದಿಂದ ಹುಬ್ಬಳ್ಳಿ ಕಡೆಗೆ ಬಾಲಮುರುಗನ್​ ಪೋಸಾಮಿ ಬರುತ್ತಿದ್ದರು. ಲಾರಿ ಸೇತುವೆ ಮೇಲೆ ಯಾವಾಗ ಬಂತೋ ಒಮ್ಮೆಲೇ ಕುಸಿದು ಬಿದ್ದಿದೆ. ಆಗ ಚಾಲಕ ಲಾರಿ ಸಮೇತ ಕಾಳಿ ನದಿಗೆ ಬಿದ್ದಿದ್ದಾರೆ. ಹೇಗೋ ಮುಂಭಾಗದ ಗಾಜು ಒಡೆದು, ಕ್ಯಾಬಿನ್​ ಮೇಲೆ ನಿಂತುಕೊಂಡು ಕೂಗಿಕೊಂಡಿದ್ದಾರೆ. ಕೂಡಲೇ ಅಲ್ಲಿದ್ದ ಬೀಟ್​ ಪೊಲೀಸರು ಹಾಗೂ ಮೀನುಗಾರರು ಆತನನ್ನ ರಕ್ಷಣೆ ಮಾಡಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:11 pm, Wed, 7 August 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ