ಉಡುಪಿ: ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು ಅಲೆಗಳ ಅಬ್ಬರದಿಂದ ನಾಪತ್ತೆಯಾಗಿದ್ದ ಬೋಟ್ ಪತ್ತೆಯಾಗಿದೆ. ಬೋಟ್ನಲ್ಲಿರುವವರು ಸೆಲ್ಫಿ ವಿಡಿಯೋ ಮಾಡುವ ಮೂಲಕ ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದರು. ಅಲೆಗಳ ಅಬ್ಬರ ಜೋರಾಗಿದ್ದರಿಂದ ರಕ್ಷಣೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಕಾಪು ಬೀಚ್‌ನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಪತ್ತೆ ಬೋಟ್ ಪತ್ತೆಯಾಗಿದೆ. ಬೋಟ್‌ನಲ್ಲಿರುವ 9 ಜನರು ಸುರಕ್ಷಿತವಾಗಿರುವ ಮಾಹಿತಿ ತಿಳಿದು ಬಂದಿದೆ. ಬೋಟ್‌ನಲ್ಲಿರುವ ಜನರ ರಕ್ಷಣೆಗೆ ಕೋಸ್ಟ್ ಗಾರ್ಡ್ಸ್ ಪ್ರಯತ್ನ ನಡೆಸಿದ್ದರೂ ರಕ್ಷಣಾ ಕಾರ್ಯಾಚರಣೆಗೆ ಅಲೆಗಳ ಅಬ್ಬರ ಅಡ್ಡಿಪಡಿಸಿತ್ತು. ಸಮುದ್ರ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಚರಣೆ ನಡೆದಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್, ಶಾಸಕರ ಲಾಲಾಜಿ ಮೆಂಡನ್, ಎಸ್‌ಪಿ ಎಸ್.ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ
ತೌಕ್ತೆ ಚಂಡಮಾರುತದ ಅಬ್ಬರಕ್ಕೆ ನಾಪತ್ತೆಯಾಗಿದ್ದ ಎಮ್ಆರ್ಪಿಎಲ್ನ ಒಂದು ಟಗ್ ಪತ್ತೆಯಾಗಿದೆ. ಆದರೆ ದುರಾದೃಷ್ಟವಷಾತ್ ಟಗ್ ಪತ್ತೆಯಾದರೂ ಭಾರೀ ಗಾಳಿ, ಮಳೆಯ ಕಾರಣದಿಂದ ಅದರ ರಕ್ಷಣಾ ಕಾರ್ಯ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತ್ತೆಯಾಗಿರುವ ಟಗ್ ಮತ್ತು 9 ಮಂದಿ ನೌಕರರನ್ನು ಇಂದು ಮುಂಜಾನೆ 5.30 ಸುಮಾರಿಗೆ ರಕ್ಷಣೆ ಮಾಡಲು ನಿರ್ಧರಿಸಲಾಗಿತ್ತು. ಅಲ್ಲಿಯವರೆಗೂ ಲಂಗರು ಹಾಕಿದ ಸ್ಥಳದಲ್ಲಿ ನಿಲ್ಲುವಂತೆ 9 ಜನರಿಗೆ ಸೂಚನೆ ನೀಡಲಾಗಿತ್ತು.
ಜೋರಾಗಿ ಸುರಿಯುತ್ತಿರುವ ಗಾಳಿ, ಮಳೆಯ ಕಾರಣದಿಂದ ಕೋಸ್ಟ್ ಗಾರ್ಡ್ಸ್ಗೆ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯವರೆಗೆ ಲಂಗರು ಹಾಕಿದ ಸ್ಥಳದಲ್ಲೇ ಇರುವಂತೆ ಸೂಚನೆ ಕೊಡಲಾಗಿತ್ತು. ಟಗ್ನಲ್ಲಿ ಇರುವ 9 ಮಂದಿ ನೌಕರರು ಪ್ರಾಣ ಕೈಯಲ್ಲಿ ಹಿಡಿದು ನಿಂತಿದ್ದರು. ಎಲ್ಲರಿಗೂ ಚಂಡಮಾರುತದ ಮಧ್ಯೆ ಸಮುದ್ರದಲ್ಲಿ ಇರುವ ಪರಿಸ್ಥಿತಿ ಎದುರಾಗಿತ್ತು. ಸುರತ್ಕಲ್ನ 17 ನಾಟಿಕಲ್ ದೂರದಲ್ಲಿ ದುರಂತ ನಡೆದಿತ್ತು.
ಇದನ್ನೂ ಓದಿ: ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ