ಕೊವಿಡ್ ಗೆದ್ದ 93 ವರ್ಷದ ಬೆಂಗಳೂರಿನ ವೃದ್ಧ; ನಮ್ಮಲ್ಲಿ ಆತ್ಮವಿಶ್ವಾಸವೊಂದಿರಲಿ ಸಾಕು

Covid Recovery: ಅವರು ಏಪ್ರಿಲ್ 29ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೊವಿಡ್ ಸೋಂಕು ಎದುರಿಸಿ ಗೆದ್ದು ಅವರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಕೊವಿಡ್ ಗೆದ್ದ 93 ವರ್ಷದ ಬೆಂಗಳೂರಿನ ವೃದ್ಧ; ನಮ್ಮಲ್ಲಿ ಆತ್ಮವಿಶ್ವಾಸವೊಂದಿರಲಿ ಸಾಕು
ಸಾಂಕೇತಿಕ ಚಿತ್ರ
Follow us
guruganesh bhat
| Updated By: ಆಯೇಷಾ ಬಾನು

Updated on: May 09, 2021 | 6:56 AM

ಬೆಂಗಳೂರು: ಆತ್ಮವಿಶ್ವಾಸ ಒಂದು ಇದ್ದರೆ ಸಾಕು ಏನನ್ನೂ ಸಾಧಿಸಬಹುದು, ಏನನ್ನೂ ಗೆಲ್ಲಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೆಂಗಳೂರಿನ ದೀಪಾಂಜಲಿ ನಗರದ ನಿವಾಸಿ 93 ವರ್ಷದ ಡಿ.ನರಸಿಂಹಾಚಾರ್ ಅವರಿಗೆ ಕೊವಿಡ್ ಸೋಂಕು ತಗುಲಿತ್ತು. ಅವರು ಏಪ್ರಿಲ್ 29ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೊವಿಡ್ ಸೋಂಕು ಎದುರಿಸಿ ಗೆದ್ದು ಅವರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಅದೆಷ್ಟೋ ಜನ ಕೊರೊನಾ ಸೋಂಕಿಗೆ ಹೆದರಿದ್ದಾರೆ. ಹೀಗಿರುವಾಗ ಕೊರೊನಾ ಸೋಂಕಿನಿಂದ ಗೆದ್ದು ಬಂದ 17 ಜನರ ಅವಿಭಕ್ತ ಕುಟುಂಬ ಜನರಿಗೆ ಧೈರ್ಯ ತುಂಬುತ್ತಿದೆ. ಕೊರೊನಾ ಸೋಂಕಿಗೆ ಹೆದರಬೇಡಿ ಎಂದು ಧೈರ್ಯ ಹೇಳಿದೆ.

ಇಲ್ಲಿದೆ ಇನ್ನೊಂದು ಸ್ಫೂರ್ತಿಗಾಥೆ ಕಳೆದ ತಿಂಗಳ 24 ರಂದು ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿರುವ ರೈತ ಸಂಘದ ರಾಜ್ಯಾಧ್ಯಕ್ಷ ನಾಗೇಂದ್ರ ಅವರ ಸಹೋದರ ಲಿಂಗರಾಜೇಗೌಡ ಎಂಬುವರಿಗೆ ಪಾಸಿಟಿವ್ ವರದಿ ದಾಖಲಾಗಿತ್ತು. ತದನಂತರ ಪರೀಕ್ಷೆಗೆ ಒಳಪಟ್ಟ ಕುಟುಂಬದ 17 ಮಂದಿಗೂ ಕೊರೊನಾ ಸೋಂಕು ತಗುಲಿತ್ತು. ಆ ಬಳಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಲೀಂ ಪಾಷಾ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವೈದ್ಯರ ತಂಡ ಮನೆಯವರಿಗೆ ಆತ್ಮಸ್ಥೈರ್ಯ ತುಂಬಿತ್ತು. ಪ್ರತಿದಿನವೂ ಕೂಡಾ ವೈದ್ಯರು ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು.

ವಾಸದ ಮನೆಯಲ್ಲೇ ಹೋಮ್ ಐಸೋಲೇಷನ್ ಮಾಡಲಾಗಿತ್ತು. ಇದೀಗ ಹದಿನೇಳು ಮಂದಿಯೂ ಮಹಾಮಾರಿ ಕೊರೊನಾದಿಂದ ಗೆದ್ದು ಬಂದಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಕೂಡಲೇ ಭಯ ಪಡುವುದು ಬೇಡ. ಆತ್ಮಸ್ಥೈರ್ಯದಿಂದ ಎದುರಿಸಿದರೆ ಕೊರೊನಾದಿಂದ ಮುಕ್ತರಾಗಬಹುದು ಎಂದು ಕುಟುಂಬದ ಸದಸ್ಯರು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್ ಪೂರೈಕೆಗಾಗಿ 12 ಸದಸ್ಯರ ಟಾಸ್ಕ್​ಫೋರ್ಸ್ ರಚಿಸಿದ ಸುಪ್ರೀಂ; ಕರ್ನಾಟಕದ ಡಾ.ದೇವಿ ಪ್ರಸಾದ್ ಶೆಟ್ಟಿಗೂ ಸ್ಥಾನ

ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು

(93 old man recovered from Covid 19 in Bengaluru)