ಬೆಳಗಾವಿಯಲ್ಲಿ ಅಭಿಮಾನಿ ಕೈಯಿಂದ ಶೂ ಹಾಕಿಸಿಕೊಂಡ ಸಚಿವ ‘ಶ್ರೀಮಂತ’ ಪಾಟೀಲ; ಜನ ವಲಯದಲ್ಲಿ ಆಕ್ರೋಶ

| Updated By: sandhya thejappa

Updated on: Jun 21, 2021 | 11:33 AM

ಸಚಿವರು ಪೂಜಾ ಕೈಂಕರ್ಯ ಮುಗಿಸಿ ಹೊರಬಂದು ಶೂವಿಗೆ ಕಾಲು ಹಾಕಿದ್ದರಷ್ಟೆ. ಆ ಕ್ಷಣದಲ್ಲಿ ಅಭಿಮಾನಿ ಓಡಿಬಂದು ಸಚಿವರಿಗೆ ಶೂ ಹಾಕಿ ಲೇಸ್ ಕಟ್ಟಿದ್ದಾನೆ. ಸಚಿವರಾಗಲಿ, ಅವರ ಬೆಂಬಲಿಗರಾಗಲಿ ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಆದರೆ ಈ ಘಟನೆ ಇದೀಗ ವಿವಾದಕ್ಕೀಡಾಗಿದೆ.

ಬೆಳಗಾವಿಯಲ್ಲಿ ಅಭಿಮಾನಿ ಕೈಯಿಂದ ಶೂ ಹಾಕಿಸಿಕೊಂಡ ಸಚಿವ ‘ಶ್ರೀಮಂತ ಪಾಟೀಲ; ಜನ ವಲಯದಲ್ಲಿ ಆಕ್ರೋಶ
ಶೂ ಹಾಕಿಸಿಕೊಳ್ಳುತ್ತಿರುವ ಶ್ರೀಮಂತ ಪಾಟೀಲ
Follow us on

ಬೆಳಗಾವಿ: ಜನಪ್ರತಿನಿಧಿ ಅಂದರೆ ಜನರ ಸೇವಕರು. ಆದರೆ ಸಚಿವ ಶ್ರೀಮಂತ ಪಾಟೀಲ ಮಾತ್ರ ಅಭಿಮಾನಿ ಒಬ್ಬರಿಂದ ಕಾಲಿಗೆ ಶೂ ಹಾಕಿಸಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ನಿನ್ನೆ (ಜೂನ್ 20) ಮಧ್ಯಾಹ್ನ ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಶ್ರೀಮಂತ ಪಾಟೀಲ ಅರ್ಚಕರನ್ನು ಕರೆಸಿ ಬಾಗಿಲು ತೆಗೆಸಿದ್ದಾರೆ. ಮಾತ್ರವಲ್ಲ ಪೂಜೆಯನ್ನೂ ಮಾಡಿಸಿದ್ದಾರೆ.

ಸಚಿವರು ಪೂಜಾ ಕೈಂಕರ್ಯ ಮುಗಿಸಿ ಹೊರಬಂದು ಶೂವಿಗೆ ಕಾಲು ಹಾಕಿದ್ದರಷ್ಟೆ. ಆ ಕ್ಷಣದಲ್ಲಿ ಅಭಿಮಾನಿ ಓಡಿಬಂದು ಸಚಿವರಿಗೆ ಶೂ ಹಾಕಿ ಲೇಸ್ ಕಟ್ಟಿದ್ದಾನೆ. ಸಚಿವರಾಗಲಿ, ಅವರ ಬೆಂಬಲಿಗರಾಗಲಿ ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಆದರೆ ಈ ಘಟನೆ ಇದೀಗ ವಿವಾದಕ್ಕೀಡಾಗಿದೆ.

ಯುವಕನೇನೋ ಅಭಿಮಾನದಿಂದ ಶೂ ಹಾಕಿದ. ಆದರೆ ಸಚಿವರಾಗಿ ಅದನ್ನು ಮಾಡಿಸಿಕೊಳ್ಳುವುದು ಎಷ್ಟು ಸರಿ ಅಂತ ಸಾರ್ವಜನಿಕರು ಚರ್ಚಿಸುವಂತಾಗಿದೆ. ಅಲ್ಲದೆ ಇಲ್ಲಿ ಶೂ ಹಾಕಿರುವುದು ಸಚಿರ ಬೆಂಬಲಿಗರಲ್ಲ. ಬದಲಿಗೆ ಒಬ್ಬ ಅಭಿಮಾನಿ ಎಂಬುದು ಗಮನಾರ್ಹ. ಅದರ ಜೊತೆಗೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆಸಿ ಸರ್ಕಾರದ ಆದೇಶವನ್ನು ಸಚಿವರೇ ಗಾಳಿಗೆ ತೂರಿದ್ದಾರೆ.

ಇದನ್ನೂ ಓದಿ

ಅಲ್ಲಿ ನೋಡಿದರೆ ಪಿಚ್ ಒದ್ದೆಯಾಗಿ ಆಡುವುದೇ ಕಷ್ಟವಾಗಿದೆ; ಇಲ್ಲಿ ನೋಡಿದರೆ ಬಿಚ್ಚುಗಾತಿ ಪೂನಮ್ಮ ಮತ್ತೆ ಬಿಚ್ಚುವ ಮಾತಾಡಿದ್ದಾಳೆ!

ಬಿಗ್​ ಬಾಸ್​ 2ನೇ ಇನ್ನಿಂಗ್ಸ್ ಶುರುವಿಗೂ ಮುನ್ನ ದಿವ್ಯಾ ಉರುಡುಗಗೆ 5 ಲಕ್ಷ ಜನರ ಬೆಂಬಲ; ಏನಿದು ಲೆಕ್ಕಾಚಾರ?