ಬೆಂಗಳೂರಿನಲ್ಲಿ ಪಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ವಂಚಿಸುವ ಜಾಲ ಪತ್ತೆ

| Updated By: sandhya thejappa

Updated on: Dec 06, 2021 | 11:53 AM

ನಯೀಮ್ ತಾಜ್ ಸುಮಾರು 25 ಜನರನ್ನ ಸೇರಿಸಿದ್ದರು. ಎಲ್ಲರೂ ತಮ್ಮ ಅಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್​ಗಳನ್ನ ನೀಡಿದ್ದರು. ಜನರಿಂದ ಪಡೆದ ದಾಖಲೆಗಳನ್ನ ಉಪಯೋಗಿಸಿ ವಂಚಕರು ಇಂಎಂಐ ನಲ್ಲಿ ವಾಹನಗಳ ಖರೀದಿ ಮಾಡುತ್ತಿದ್ದರಂತೆ.

ಬೆಂಗಳೂರಿನಲ್ಲಿ ಪಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ವಂಚಿಸುವ ಜಾಲ ಪತ್ತೆ
ಪಾನ್ ಕಾರ್ಡ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಪಾನ್ ಕಾರ್ಡ್ (Pan Card) ಮತ್ತು ಆಧಾರ್ ಕಾರ್ಡ್ (Aadhaar Card) ಪಡೆದು ವಂಚಿಸುತ್ತಿದ್ದ ಜಾಲ ಪತ್ತೆಯಾಗಿದೆ. ನಯೀಮ್ ತಾಜ್ ಎಂಬುವವರ ಬಳಿ ವಂಚಕರು ದಾಖಲೆ ಪಡೆದಿದ್ದರು. ಚೈನ್ ಲಿಂಕ್ ಸ್ಕೀಮ್ ಇದೆ ಎಂದು ಆಧಾರ್, ಪಾನ್ ಪಡೆದಿದ್ದರು. ಪುಲಕೇಶಿನಗರದ ಸಂಗೀತಾ ಶೋ ರೂಂನಲ್ಲಿ ದಾಖಲೆ ಪಡೆದಿದ್ದರು. ದಾಖಲೆ ಪಡೆದು ನೀವು ಸದಸ್ಯರಾಗಿದ್ದೀರೆಂದು ಮಾಹಿತಿ ನೀಡಿದ್ದರು. ನಂತರ ನಯೀಮ್ ತಾಜ್​ಗೆ 1,000 ರೂ. ನೀಡಿದ್ದಾರೆ. ಇನ್ನಷ್ಟು ಜನರನ್ನ ಸೇರಿಸಿದರೆ ಇದೆ ರೀತಿ ಹಣ ಬರುತ್ತೆ ಎಂದಿದ್ದರು.

ಇದನ್ನು ನಂಬಿದ್ದ ನಯೀಮ್ ತಾಜ್ ಸುಮಾರು 25 ಜನರನ್ನ ಸೇರಿಸಿದ್ದರು. ಎಲ್ಲರೂ ತಮ್ಮ ಅಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್​ಗಳನ್ನ ನೀಡಿದ್ದರು. ಜನರಿಂದ ಪಡೆದ ದಾಖಲೆಗಳನ್ನ ಉಪಯೋಗಿಸಿ ವಂಚಕರು ಇಂಎಂಐ ನಲ್ಲಿ ವಾಹನಗಳ ಖರೀದಿ ಮಾಡುತ್ತಿದ್ದರಂತೆ. ನೀವು ವಾಹನ ಖರೀದಿ ಮಾಡಿದ್ದೀರಿ, ಇಎಂಐ ಕಟ್ಟಬೇಕು ಅಂತ ಬ್ಯಾಂಕ್ ಸಿಬ್ಬಂದಿ ದಾಖಲೆ ನೀಡಿದವರಿಗೆ ಕರೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ನಯೀಮ್ ತಾಜ್ ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ.

ಮಹಮ್ಮದ್ ಜೈನ್, ಲೋಕೇಶ್, ಕಾರ್ತಿಕ್, ಮುಜಾಹಿದ್ ಹಫೀಜ್, ಮನ್ಸೂರ್ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಗರದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿಯೂ ಇದೇ ಮಾದರಿಯ ಕೇಸ್ ದಾಖಲಾಗಿವೆ.

ಇದನ್ನೂ ಓದಿ

ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಆತಂಕ ತಂದಿದೆ: ಅಲಾರಂ ಬೆಲ್​​ ಹೊಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್

Babri Demolition Anniversary ಮಸೀದಿಯಲ್ಲಿ ಕೃಷ್ಣನ ಮೂರ್ತಿ ಪ್ರತಿಷ್ಠಾಪಿಸುವ ಬೆದರಿಕೆ; ಮಥುರಾದಲ್ಲಿ ಭಾರೀ ಭದ್ರತೆ

Published On - 11:45 am, Mon, 6 December 21