ಎರಡನೇ ಮದುವೆಗೆ ಒತ್ತಾಯಿಸಿದ ಭಾವ; ದೇವದಾಸಿ ಮಾಡುವುದಾಗಿ ರಾಯಚೂರು ಯುವತಿಗೆ ಬೆದರಿಕೆ

ಶಾಂತಪ್ಪ ಎಂಬಾತ ರೇಣುಕಾಳಿಗೆ ಮದುವೆ ಆಗುವಂತೆ ಪೀಡಿಸಿದ ವ್ಯಕ್ತಿ. ಶಾಂತಪ್ಪ ಕಿರುಕುಳ ಸಹಿಸದೆ ಜಿಲ್ಲೆಯ ಸುರಪುರ ತಾಲೂಕಿನ ಸಂಬಂಧಿಕರ ಮನೆಯಲ್ಲಿ ಯುವತಿ ಆಶ್ರಯ ಪಡೆದಿದ್ದಳು. ಎರಡು ಮಕ್ಕಳ ತಂದೆಯಾಗಿರುವ ಶಾಂತಪ್ಪ ಹೆಂಡತಿ ತಂಗಿಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ.

ಎರಡನೇ ಮದುವೆಗೆ ಒತ್ತಾಯಿಸಿದ ಭಾವ; ದೇವದಾಸಿ ಮಾಡುವುದಾಗಿ ರಾಯಚೂರು ಯುವತಿಗೆ ಬೆದರಿಕೆ
ಯುವತಿ ರೇಣುಕಾ
Edited By:

Updated on: Jun 15, 2021 | 12:09 PM

ರಾಯಚೂರು: ಎರಡನೇ ಮದುವೆಯಾಗುವಂತೆ ಯುವತಿಯನ್ನು ಭಾವ ಒತ್ತಾಯಿಸಿದ್ದು, ಮದುವೆಯಾಗದಿದ್ದರೆ ದೇವದಾಸಿ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದಲ್ಲಿ ನಡೆದಿದೆ. 20 ವರ್ಷದ ರೇಣುಕಾಳಿಗೆ ಆಕೆಯ ಅಕ್ಕನ ಗಂಡನೇ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದನಂತೆ. ಮದುವೆಗೆ ನಿರಾಕರಿಸಿದರೆ ದೇವದಾಸಿ ಪದ್ಧತಿಗೆ ತಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ.

ಶಾಂತಪ್ಪ ಎಂಬಾತ ರೇಣುಕಾಳಿಗೆ ಮದುವೆ ಆಗುವಂತೆ ಪೀಡಿಸಿದ ವ್ಯಕ್ತಿ. ಶಾಂತಪ್ಪ ಕಿರುಕುಳ ಸಹಿಸದೆ ಜಿಲ್ಲೆಯ ಸುರಪುರ ತಾಲೂಕಿನ ಸಂಬಂಧಿಕರ ಮನೆಯಲ್ಲಿ ಯುವತಿ ಆಶ್ರಯ ಪಡೆದಿದ್ದಳು. ಎರಡು ಮಕ್ಕಳ ತಂದೆಯಾಗಿರುವ ಶಾಂತಪ್ಪ ಹೆಂಡತಿ ತಂಗಿಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಹೀಗಾಗಿ ಯುವತಿ ಸಂಬಂಧಿಕರ ನೆರವಿನಿಂದ ಅಧಿಕಾರಿಗಳನ್ನ ಭೇಟಿಯಾಗಿದ್ದಾಳೆ.

ನಿತ್ಯವೂ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಸದ್ಯ ಯುವತಿ ಜಿಲ್ಲಾ ಪೊಲೀಸ್ ಇಲಾಖೆ ಮೊರೆ ಹೋಗಿದ್ದಾಳೆ. ಲಿಂಗಸ್ಗೂರ ಡಿವೈಎಸ್​ಪಿ ಎಸ್.ಎಸ್.ಹುಲ್ಲೂರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಎಸ್ಪಿ ಪ್ರಕಾಶ ಆದೇಶ ನೀಡಿದ್ದು, ರಾಯಚೂರಿನ ಸಾಂತ್ವನ ಕೇಂದ್ರದಲ್ಲಿ ಯುವತಿಗೆ ರಕ್ಷಣೆ ನೀಡಲಾಗಿದೆ.

ಸಂಬಂಧಿಗಳ ನಡುವಿನ ಭಿನ್ನಾಭಿಪ್ರಾಯ ಸಾವಿನಲ್ಲಿ ಅಂತ್ಯ
ಹತ್ತಿರ ಸಂಬಂಧಿಗಳ ನಡುವೆ ಹೆಚ್ಚಾದ ಭಿನ್ನಾಭಿಪ್ರಾಯದಿಂದ ಓರ್ವ ವ್ಯಕ್ತಿ ಕೊಲೆಯಾಗಿದ್ದಾನೆ. ಆಂಧ್ರ ಪ್ರದೇಶದ ಕಡಪ ಜಿಲ್ಲಾ ಪುಲಿವೆಂದಲದಲ್ಲಿ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಜಗಳ ನಡುವೆ ಪಾರ್ಥಸಾರಥಿ ಎನ್ನುವವನು ಕತ್ತಿ ಹಿಡಿದು ಶಿವಪ್ರಸಾದ ರೆಡ್ಡಿ ಎನ್ನುವ ವ್ಯಕ್ತಿಯ ಮಗನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪಾರ್ಥಸಾರಥಿಯ ಮೇಲೆ ಗುಂಡು ಹಾರಿಸಿ ಶಿವಪ್ರಸಾದ ರೆಡ್ಡಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಟ್ಯಾಕ್ಸಿ, ಆಟೋ ಚಾಲಕರಿಗೆ ಬಿಬಿಎಂಪಿಯಿಂದ ಆರು ಷರತ್ತು; ಲಸಿಕೆ ಪಡೆದ ಚಾಲಕರು ಮಾತ್ರ ವಾಹನ ಚಲಾಯಿಸಬೇಕು

ವಿದ್ಯುತ್​ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಬಂದ ಪಕ್ಕದ ಮನೆಯಾತ; ಮೂವರೂ ಸಾವು

(A man has forced a young woman into a second marriage at raichur)