ಬೆಂಗಳೂರಿನಲ್ಲಿ ಟ್ಯಾಕ್ಸಿ, ಆಟೋ ಚಾಲಕರಿಗೆ ಬಿಬಿಎಂಪಿಯಿಂದ ಆರು ಷರತ್ತು; ಲಸಿಕೆ ಪಡೆದ ಚಾಲಕರು ಮಾತ್ರ ವಾಹನ ಚಲಾಯಿಸಬೇಕು
BBMP: ಈಗಾಗಲೇ ನಿನ್ನೆ ಸೋಮವಾರದಿಂದ ಜಾರಿಯಲ್ಲಿರುವ ಅನ್‌ಲಾಕ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಬಿಬಿಎಂಪಿ 6 ಷರತ್ತು ವಿಧಿಸಿದೆ. ಮೊದಲನೆಯದಾಗಿ, ಲಸಿಕೆ ಪಡೆದ ಚಾಲಕರು ಮಾತ್ರ ವಾಹನ ಚಲಾಯಿಸಬೇಕು.
ಬೆಂಗಳೂರು: ರಾಜ್ಯದಲ್ಲಿ ಜೂನ್ 21 ರಿಂದ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಸಹ ಓಪನ್ ಮಾಡಲು ತಾಂತ್ರಿಕ ಸಲಹಾ ಸಮಿತಿಯಿಂದ ಗ್ರಿನ್ ಸಿಗ್ನಲ್ ನೀಡಿದೆ. ಆದರೆ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳು ಯಥಾಸ್ಥಿತಿ ಕ್ಲೋಸ್ ಆಗಿರಲಿವೆ. ಇವುಗಳನ್ನೆಲ್ಲ ಓಪನ್ ಮಾಡಲು ಮೂರನೇ ಹಂತದ ಅನ್‌ಲಾಕ್ ವರೆಗೂ ಕಾಯಲು ತೀರ್ಮಾನ ಮಾಡಲಾಗಿದೆ. ಈ ಮಧ್ಯೆ, ಈಗಾಗಲೇ ನಿನ್ನೆ ಸೋಮವಾರದಿಂದ ಜಾರಿಯಲ್ಲಿರುವ ಅನ್‌ಲಾಕ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಬಿಬಿಎಂಪಿ 6 ಷರತ್ತು ವಿಧಿಸಿದೆ.
ಬೆಂಗಳೂರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಬಿಬಿಎಂಪಿ ವಿಧಿಸಿರುವ 6 ಷರತ್ತುಗಳು ಹೀಗಿವೆ: 1. ಅನ್‌ಲಾಕ್ ವೇಳೆ ಎಂದಿನಂತೆ ರಸ್ತೆಗಿಳಿದರೆ ದಂಡ ಫಿಕ್ಸ್ 2. ಲಸಿಕೆ ಪಡೆದ ಚಾಲಕರು ಮಾತ್ರ ವಾಹನ ಚಲಾಯಿಸಬೇಕು 3. ಪದೇಪದೆ ಮುಟ್ಟುವ ವಾಹನದ ಭಾಗಗಳಿಗೆ ಸ್ಯಾನಿಟೈಸ್ 4. ಪ್ರಯಾಣಿಕರು ಮತ್ತು ಚಾಲಕರ ನಡುವೆ ಪರದೆ ಇರಬೇಕು 5. ಆಟೋ ಮತ್ತು ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ 6. ಮಾಸ್ಕ್ ಧರಿಸದ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ; ಎಲ್ಲ ಚಾಲಕರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು
ಕರ್ನಾಟಕದಲ್ಲಿ ಎರಡನೇ ಹಂತದ ಅನ್ಲಾಕ್ಗೆ ಇದೀಗ ದಿನಾಂಕ ನಿಗದಿಯಾಗಿದ್ದು, ಜೂನ್ 21 ರಿಂದ ಅನ್‌ಲಾಕ್ 2.O ಜಾರಿಗೆ ಬರುತ್ತದೆ. ಜೂನ್ 21 ರಿಂದ ಮಾಲ್, ಹೋಟೆಲ್, ಚಿಕ್ಕಚಿಕ್ಕ ಮಾರುಕಟ್ಟೆ, ಹೇರ್ ಕಟ್ ಶಾಪ್, ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಿ ಮುಕ್ತಗೊಳಿಸಲಾಗುವುದು.
ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳು ಸಹ ಜೂನ್ 21 ರಿಂದ ಓಪನ್ ಆಗಲಿವೆ. ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಲಾಗುವುದು. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಪ್ರವೇಶ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಅನ್‌ಲಾಕ್ 2.O ಜಾರಿಯಾಗುವ ಹಿನ್ನೆಲೆಯಲ್ಲಿ ಜೂ.21ರಿಂದ ಕರ್ನಾಟಕದಲ್ಲಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರವಾಗುವ ಸಾಧ್ಯತೆ ಇದೆ.
ಈ ಕೆಳಗಿನ ವಹಿವಾಟು ನಡೆಸಲು ಮೂರನೇ ಹಂತದ ಅನ್‌ಲಾಕ್ ವರೆಗೂ ಕಾಯಬೇಕು: ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಸಹ ಓಪನ್ ಮಾಡಲು ತಾಂತ್ರಿಕ ಸಲಹಾ ಸಮಿತಿಯಿಂದ ಗ್ರಿನ್ ಸಿಗ್ನಲ್ ದೊರೆತಿದೆ. ಆದರೆ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳು ಯಥಾಸ್ಥಿತಿ ಕ್ಲೋಸ್ ಆಗಿರಲಿವೆ. ಇವುಗಳನ್ನೆಲ್ಲ ಓಪನ್ ಮಾಡಲು ಮೂರನೇ ಹಂತದ ಅನ್‌ಲಾಕ್ ವರೆಗೂ ಕಾಯಲು ತೀರ್ಮಾನ ಮಾಡಲಾಗಿದೆ.
(BBMP fixes 6 conditions for taxi and auto rickshaw drivers in bengaluru during corona times)
ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು ಕರ್ನಾಟಕ ಸರ್ಕಾರದ ಕೋವಿಡ್ ಪ್ಯಾಕೇಜ್ ರೂ. 3000 ಪಡೆಯುವುದು ಹೇಗೆ?
Published On - 11:40 am, Tue, 15 June 21