ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳಿದ್ದರಂತೆ, ಯುವತಿಗೆ ಸ್ಟಿಂಗ್ ಕ್ಯಾಮರಾ ಕೊಡಿಸಿದ್ದು ನಾವು ಎಂದ ಶ್ರವಣ್

Ramesh jarkiholi: ಸದ್ಯ ವೈರಲ್ ಆಗಿರುವ ವಿಡಿಯೋದಲ್ಲೂ ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ತನಿಖಾಧಿಕಾರಿಗಳಿಗೆ ಶ್ರವಣ್ ಸೂಚಿಸಿದ್ದಾನಂತೆ. ಆದ್ರೆ ಆ ವಿಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿ ಇದೆ.‌ ಬೇಕಿದ್ರೆ ಚೆಕ್ ಮಾಡಿ ಎಂದು ಶ್ರವಣ್ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನಂತೆ. ಯುವತಿಗೆ ಬಲವಂತ ಮಾಡಿಸಿ ಮತ್ತು ಬೆದರಿಸಿ ರಮೇಶ್ ಜಾರಕಿಹೊಳಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದೂ ಶ್ರವಣ್ ಹೇಳಿರುವುದಾಗಿ ತಿಳಿದುಬಂದಿದೆ.

ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳಿದ್ದರಂತೆ, ಯುವತಿಗೆ ಸ್ಟಿಂಗ್ ಕ್ಯಾಮರಾ ಕೊಡಿಸಿದ್ದು ನಾವು ಎಂದ ಶ್ರವಣ್
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 15, 2021 | 10:19 AM

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದಾಖಲಿಸಿರುವ ಬ್ಲ್ಯಾಕ್​ಮೇಲ್​ ಕೇಸ್ ವಿಚಾರಣೆ ನಡೆಸುತ್ತಿರುವ ಎಸ್ಐಟಿ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಅವರೆದುರು ಇಬ್ಬರು ಆರೋಪಿಗಳಾದ ಶ್ರವಣ್ ಮತ್ತು ನರೇಶ್ ಗೌಡ ಅನೇಕ ಕುತೂಹಲಕಾರಿ ಅಂಶಗಳನ್ನು ಬಯಲು ಮಾಡಿದ್ದಾರೆ. ಆರಂಭದಲ್ಲಿ ಒಟ್ಟಿಗೇ ಇಬ್ಬರನ್ನೂ ಮುಖಾಮುಖಿಯಾದ ಎಸ್ಐಟಿ ಅಧಿಕಾರಿಗಳು ಬಳಿಕ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಾ, ಇಬ್ಬರಿಂದಲೂ ಅನೇಕ ಮಹತ್ವದ ಅಂಶಗಳು ಹೊರಬರುವಂತೆ ಮಾಡಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್​ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಶ್ರವಣ್ ಮತ್ತು ನರೇಶ್​ ಇಂದೂ ಸಹ 11 ಗಂಟೆಗೆ ತನಿಖಾಧಿಕಾರಿ ಮುಂದೆ ಹಾಜರಾಗಲಿದ್ದಾರೆ. ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ಶ್ರವಣ್ ವಿಚಾರಣೆ ನಡೆಯಲಿದೆ. ಇದೇ ಪ್ರಕರಣದಲ್ಲಿ ನಿನ್ನೆ ಶ್ರವಣ್ ಮತ್ತು ನರೇಶ್ ವಿಚಾರಣೆ ಸಹ ನಡೆದಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಬಯಲಾಗಿವೆ ಎಂದು ತಿಳಿದುಬಂದಿದೆ. ಆರೋಪಿಗಳ ವಿಚಾರಣೆ ವೇಳೆ ಬಾಯಿ ಬಿಟ್ಟ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ವಿಚಾರಣೆ ವೇಳೆ ಯುವತಿ ಮತ್ತು ಜಾರಕಿಹೊಳಿ ಬಗೆಗಿನ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಯುವತಿಗೆ ಸ್ಟಿಂಗ್ ಕ್ಯಾಮರಾ ಕೊಡಿಸಿದ್ದು ನಾವು. ವಿಡಿಯೋ ನಂತರ ಯುವತಿ ನನಗೆ ಕಾಲ್ ಮಾಡಿದ್ದು ನಿಜ ಎಂದು ಶ್ರವಣ್ ಒಪ್ಪಿಕೊಂಡಿರುವಾಗಿ ತಿಳಿದುಬಂದಿದೆ. ಇಂಟರೆಸ್ಟಿಂಗ್ ಅಂದ್ರೆ ಸ್ಟಿಂಗ್ ಕ್ಯಾಮರಾದಲ್ಲಿ ವಿಡಿಯೋ ಆಗುವ ಮೊದಲೇ ರಾಸಲೀಲೆ ವಿಡಿಯೋ ಆಗಿತ್ತಂತೆ.

ಯುವತಿಯ ಜೊತೆಗಿರೋ ವಿಡಿಯೋ ಬಿಟ್ಟು, ರಮೇಶ್ ಜಾರಕಿಹೊಳಿ ಮೊಬೈಲ್​ನಲ್ಲಿ ಇನ್ನೂ ಸಾಕಷ್ಟು ಯುವತಿಯರ ವಿಡಿಯೋ ಇದೆಯಂತೆ.. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲೂ ಜಾರಕಿಹೊಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ತನಿಖಾಧಿಕಾರಿಗಳಿಗೆ ಶ್ರವಣ್ ಸೂಚಿಸಿದ್ದಾನಂತೆ. ಆದ್ರೆ ಆ ವಿಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿ ಇದೆ.‌ ಬೇಕಿದ್ರೆ ಚೆಕ್ ಮಾಡಿ ಎಂದು ಶ್ರವಣ್ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನಂತೆ. ಯುವತಿಗೆ ಬಲವಂತ ಮಾಡಿಸಿ ಮತ್ತು ಬೆದರಿಸಿ ರಮೇಶ್ ಜಾರಕಿಹೊಳಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದೂ ಶ್ರವಣ್ ಹೇಳಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ವೈರಲ್ ಆಗಿರುವ ವಿಡಿಯೋ ಬಿಟ್ಟು, ಇನ್ನೂ ಸಾಕಷ್ಟು ಯುವತಿಯರ‌ ಜೊತೆಗಿರೋ ವಿಡಿಯೋ ರಮೇಶ್ ಜಾರಕಿಹೊಳಿ ಮೊಬೈಲ್ ನಲ್ಲಿ ಇದೆಯಂತೆ. ಈ ವಿಚಾರವನ್ನು ಯುವತಿಯೇ ನಮಗೆ ಹೇಳಿದ್ದಳು. ಹಾಗಾಗಿಯೇ ನಾವು ಸ್ಟಿಂಗ್ ವಿಡಿಯೋ ಮಾಡಲು ಹೇಳಿದ್ವಿ ಎಂದು ಶ್ರವಣ್ ಎಸ್​ಐಟಿ ಅಧಿಕಾರಿಗಳ ಎದುರು ಹೇಳಿಕೆ ಕೊಟ್ಟಿದ್ದಾನೆ.

ಆದ್ರೆ ವಿಡಿಯೋ ಆದ್ಮೇಲೆ ನಾವು ವಿಡಿಯೋ ನೋಡಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲೇ ಇತ್ತು. ಯುವತಿ ಮನೆಗೂ ರಮೇಶ್ ಜಾರಕಿಹೊಳಿ ಕಡೆಯವರು ಬಂದು ಹೋಗಿದ್ದಾರೆ. ವಿಡಿಯೋ ನಂತರ ಯುವತಿಗೆ ಅವರ ಮನೆಯವರಿಗೆ ತಿಳಿಸುವುದಾಗಿ ಹೇಳಿದ್ವಿ. ಪೊಲೀಸ್ ಸಂಪರ್ಕ ಮಾಡಿ ದೂರು ನೀಡಿ ಎಂದೂ ತಿಳಿಸಿದ್ದಿವಿ. ಆದ್ರೆ ಯುವತಿ ಹೆದರಿ, ದೂರು ನೀಡಲು ಹಿಂದೇಟು ಹಾಕಿದ್ರು. ಸಿ.ಡಿ. ವೈರಲ್ ಆದ ದಿನ‌ಕೂಡ ಯುವತಿಗೆ ಜಾರಕಿಹೊಳಿ ಕಡೆಯವರು ಕರೆ ಮಾಡಿ ಧಮ್ಕಿ ಹಾಕಿದ್ದರು. ನಿನ್ನ ಹಾಗೂ ನಿನಗೆ ಸಫೋರ್ಟ್ ಮಾಡಿದವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಜೀವ ಭಯದಿಂದ ನಾವೂ ಊರು ಬಿಟ್ಟಿದ್ವಿ.. ಹೆಚ್ಚಾಗಿ ರೈಲು ಬಸ್ಸಿನ ಪ್ರಯಾಣ ಮಾಡಿದ್ದಿವಿ. ಜಾರಕಿಹೊಳಿ ಆಪ್ತ ನಾಗರಾಜ್ ಅವ್ರ ಬಿಎಸ್ಎನ್ಎಲ್ ನಂಬರ್ ನಿಂದ ಯುವತಿಗೆ ಕರೆ ಬಂದಿದೆ. ಇದೇ ನಾಗರಾಜ್ ಮೊದಲು ಜಾರಕಿಹೊಳಿ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಹೋಗಿದ್ರಂತೆ ಎಂದು ಶ್ರವಣ್ ಎಸ್​ಐಟಿ ಎದುರು ಹೇಳಿಕೆ ನೀಡಿದ್ದಾನೆ.

ನರೇಶ್, ಶ್ರವಣ್ ಪರ ಸಂತ್ರಸ್ತ ಯುವತಿ ಬ್ಯಾಟಿಂಗ್: ದೂರು ಕಾನೂನುಬಾಹಿರ ಎಂದು ವಾದ, ರಮೇಶ್ ಜಾರಕಿಹೊಳಿಗೆ ನೋಟಿಸ್

(Ramesh jarkiholi cd video details emerge during naresh and shravan interrogation at sit cell in adugodi by sit)

Published On - 10:17 am, Tue, 15 June 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ